Advertisement

ಮಧ್ಯಪ್ರದೇಶ: ಒಳ ಉಡುಪಿನಲ್ಲಿ ಆರೋಪಿಗಳನ್ನು ನಿಲ್ಲಿಸಿದ ಪೊಲೀಸರು ಅಮಾನತು

12:21 PM Apr 08, 2022 | Team Udayavani |

ಭೋಪಾಲ್ : ಆರೋಪಿಗಳಾಗಿದ್ದ ಪತ್ರಕರ್ತ, ಯೂಟ್ಯೂಬರ್ ಸೇರಿದಂತೆ ಪುರುಷರ ಗುಂಪನ್ನು ಪೊಲೀಸ್ ಠಾಣೆಯೊಳಗೆ ಕೇವಲ ಒಳ ಉಡುಪಿನಲ್ಲಿ ನಿಲ್ಲಿಸಿದ್ದ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

Advertisement

ವೈರಲ್ ಫೋಟೋದಲ್ಲಿ ಪತ್ರಕರ್ತ ಮತ್ತು ಯೂಟ್ಯೂಬರ್ ಸೇರಿದಂತೆ ಪುರುಷರ ಗುಂಪನ್ನು ಪೊಲೀಸ್ ಠಾಣೆಯೊಳಗೆ ಒಳ ಉಡುಪಿನಲ್ಲಿ ಮಾತ್ರ ಕಾಣಿಸಿಕೊಂಡಿದ್ದರು. ಈ ಬಗ್ಗೆ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳು ವಿಷಯಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯ ಪ್ರಭಾರಿ ಕೊತ್ವಾಲಿ ಸಿಧಿ ಮತ್ತು ಸಬ್ ಇನ್ಸ್‌ಪೆಕ್ಟರ್ ಅವರನ್ನು ಅಮಾನತುಗೊಳಿಸಿ ಕ್ರಮ ಕೈಗೊಂಡಿದ್ದಾರೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಎಸ್‌ಎಚ್‌ಒ ಮನೋಜ್ ಸೋನಿ ‘ಅವರು ತಮ್ಮ ಬಟ್ಟೆಗಳನ್ನು ಬಳಸಿ ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ನಾವು ಅವರನ್ನು ಈ ರೀತಿ ಜೈಲಿನಲ್ಲಿ ಇರಿಸಿದ್ದೇವೆ’ ಎಂದು ಸ್ಪಷ್ಟನೆ ನೀಡಿದ್ದಾರೆ.

ಬಿಜೆಪಿ ವಿರೋಧಿ ವಿಷಯವನ್ನು ಪೋಸ್ಟ್ ಮಾಡಿದ ಆರೋಪದಲ್ಲಿ ಯೂಟ್ಯೂಬರ್  ಬಂಧನವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಪತ್ರಕರ್ತ ಸೇರಿದಂತೆ 8 ಮಂದಿಯನ್ನು  ಪೊಲೀಸರು ವಿವಸ್ತ್ರಗೊಳಿಸಿದ್ದರು, ಈ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿ ಹಲವರು ಆಕ್ರೋಶ ಹೊರ ಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next