Advertisement

“ಮಂಗಳ’ಟ್ರಿಪ್ಗೆ ಸಜ್ಜು

06:05 AM Nov 10, 2017 | Team Udayavani |

ಮುಂಬಯಿ: ಖಗೋಳ ವಿಜ್ಞಾನದ ಅಧ್ಯಯ ನದಲ್ಲಿ ಭಾರತೀಯರು ಅಗಾಧವಾದ ಆಸಕ್ತಿ ಹೊಂದಿದ್ದಾರೆಂಬುದು ಅಮೆರಿಕದ ನಾಸಾ ಬಾಹ್ಯಾಕಾಶ ಸಂಸ್ಥೆಯ (ನಾಸಾ) ಮಾಹಿತಿಯೊಂದರಿಂದ ಬಹಿರಂಗವಾಗಿದೆ. ಮುಂದಿನ ವರ್ಷ ಮೇ ತಿಂಗಳಿನಲ್ಲಿ ನಾಸಾ ವತಿಯಿಂದ ಕೈಗೊಳ್ಳಲಾಗುವ “ರೆಡ್‌ ಪ್ಲಾನೆಟ್‌ ವಯಾ ನಾಸಾಸ್‌ ಇನ್‌ಸೈಟ್‌’ ಎಂಬ ಈ ಮಂಗಳ ಗ್ರಹದ ಯಾತ್ರೆಗೆ ಸುಮಾರು 1 ಲಕ್ಷದ 40 ಸಾವಿರ ಭಾರತೀಯರು ಟಿಕೆಟ್‌ ಬುಕ್ಕಿಂಗ್‌ ಮಾಡಿಸಿದ್ದಾರೆಂದು ಖುದ್ದು ನಾಸಾ ಪ್ರಕಟಿಸಿದೆ. ಈ ಯಾತ್ರೆಗಾಗಿ ಅತಿ ಹೆಚ್ಚು ಜನರು ತಮ್ಮ ಹೆಸರು ನೊಂದಾಯಿಸಿದ ದೇಶಗಳ ಪಟ್ಟಿಯಲ್ಲಿ ಅಮೆರಿಕ (6,76,773), ಚೀನ (2,62,752) ನಂತರದ 3ನೇ ಸ್ಥಾನವನ್ನು ಭಾರತ ಪಡೆದಿದೆ ಎಂದು ನಾಸಾ ಹೇಳಿದೆ. 

Advertisement

1,39,899 ಭಾರತೀಯರು ನಾಸಾದಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದು, ಇವರೆಲ್ಲರಿಗೂ ಆನ್‌ಲೈನ್‌ ಮೂಲಕ ಟಿಕೆಟ್‌ ರವಾನಿಸುವುದಾಗಿ ನಾಸಾ ಹೇಳಿದೆ. 2018ರ ಮೇ 5ರಂದು ಮಂಗಳ ಯಾತ್ರೆ ಆರಂಭವಾಗಲಿದ್ದು, ಅಂದು ಗಗನಕ್ಕೆ ಯಾತ್ರಿಕರನ್ನು ಹೊತ್ತೂಯ್ಯಲಿರುವ ಆಕಾಶಕಾಯ, 2018ರ ನ.26ರಂದು ಮಂಗಳಗ್ರಹದ ಸಮಭಾಜಕ ವೃತ್ತದ ಬಳಿ ಇಳಿಯಲಿದೆ. 

ಸುಮಾರು 720 ದಿನಗಳ ಯಾತ್ರೆ ಇದಾಗಿರಲಿದ್ದು, ಯಾತ್ರಿಕರಿಗೆ ಮಂಗಳನ ಮೇಲ್ಮೆ„, ವಾತಾವರಣ, ಕಂಪನಗಳನ್ನು ಅಧ್ಯಯನ ಮಾಡಲು ಯಾತ್ರಿಕರಿಗೆ ಅನುವು ಮಾಡಿಕೊ ಡಲಾಗುವುದು ಎಂದು ನಾಸಾ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next