Advertisement

ಹಾಜರಾತಿ ಇಲ್ಲದ ಕಾರಣಕ್ಕೆ 70 ಮಂದಿಯ ಹೊರದಬ್ಬಿದ ಕಾಲೇಜು

12:48 PM Jun 03, 2017 | Team Udayavani |

ಮಹದೇವಪುರ: ಹಜರಾತಿ ಪ್ರಮಾಣ ಕಡಿಮೆ ಇದೆ ಎಂಬ ಕಾರಣಕ್ಕೆ ವೈಟ್‌ಫೀಲ್ಡ್‌ ಸಮೀಪದ ಎಂವಿಜೆ ಎಂಜಿನಿಯರಿಂಗ್‌ ಕಾಲೇಜು ಆಡಳಿತ ಮಂಡಳಿಯು 70ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಹೊರಹಾಕಿದ್ದು ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ. ಕಾಲೇಜಿನ ಕ್ರಮದಿಂದ ರೊಚ್ಚಿಗೆದ್ದಿರುವ ವಿದ್ಯಾರ್ಥಿಗಳು ಅಹೋರಾತ್ರಿ ಪ್ರತಿಭಟನೆ ಆರಂಭಿಸಿದ್ದಾರೆ. 

Advertisement

ಎಮ್‌ವಿಜೆ ವಿದ್ಯಾಸಂಸ್ಥೆಯ ಏರೋನಾಟಿಕ್ಸ್‌ ವಿಭಾಗದ ಅಂತಿಮ ವರ್ಷದ 29 ಮತ್ತು ಪ್ರಥಮ ಮತ್ತು ದ್ವಿತೀಯ ವರ್ಷದ 30 ವಿದ್ಯಾರ್ಥಿಗಳನ್ನು ಸದ್ಯ ಹಾಜರಾತಿ ಪ್ರಮಾಣ ಕಡಿಮೆ ಇರುವ ಕಾರಣಕ್ಕೆ ಕಾಲೇಜಿನಿಂದ ಹೊರಹಾಕಲಾಗಿದೆ. ಇದು ತಮ್ಮ ವಿರುದ್ಧ ನಡೆದ ಹಗೆತನದ ಕ್ರಮ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. 

ಅಂತಿಮ ವರ್ಷದ 6ನೇ ಸೆಮಿಸ್ಟರ್‌ ಪರೀಕ್ಷೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಕಾಲೇಜಿನಿಂದ ಹೊರಹಾಕುವ ಮೂಲಕ ಒಂದು ವರ್ಷದ ಶೈಕ್ಷಣಿಕ ಭವಿಷ್ಯವನ್ನು ಹಾಳುಮಾಡಲಾಗುತ್ತಿದೆ. ನಮ್ಮ ಜೀವನದೊಂದಿಗೆ ಕಾಲೇಜು ಆಟವಾಡುತ್ತಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. 

ಬೇರೆಲ್ಲಾ ವಿಬಾಗದ ವಿದ್ಯಾರ್ಥಿಗಳ ಹಜರಾತಿ ಕಡಿಮೆಯಿದ್ದರೂ ಅವರನ್ನು ಸಮರ್ಥಿಸಿಕೊಂಡು ಹಾಜರಾತಿಯಲ್ಲಿ ವಿನಾಯಿತಿ ನೀಡಿರುವ ಕಾಲೇಜು ಮಂಡಳಿ ನಮ್ಮ ವಿಚಾರದಲ್ಲಿ ತಾರತಮ್ಯ ತೋರುತ್ತಿದೆ ಎಂದೂ ವಿದ್ಯಾರ್ಥಿಗಳು ಅಲವತ್ತುಕೊಂಡಿದ್ದಾರೆ. ಇನ್ನು 2 ದಿನಗಳಿಂದ ಅಹೋ ರಾತ್ರಿ ಪ್ರತಿಭಟನೆ ಮಾಡಿದ್ದರಿಂದ ಒರ್ವ ವಿದ್ಯಾರ್ಥಿ ಅಸ್ವಸ್ಥಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾನೆ. ಸ್ಥಳಕ್ಕೆ ವೈಟ್‌ಫೀಲ್ಡ್‌ ವಿಭಾಗದ ಡಿಸಿಪಿ ನಾರಾಯಣ ಭೇಟಿ ವಿದ್ಯಾರ್ಥಿಗಳ ಮನವೊಲಿಕೆಗೆ ಯತ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next