ಬೆಂಗಳೂರು: ಲೆಹರ್ ಸಿಂಗ್ ಸೇರಿ ತಮ್ಮ ಪಕ್ಷದ ಮೂರು ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ.ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ರಾಜ್ಯಸಭಾ ಚುನಾವಣೆ ಮತ ಚಲಾಯಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ನಮ್ಮ ಮೂರು ಅಭ್ಯರ್ಥಿಗಳು ಗೆಲ್ಲುತ್ತಾರೆ. ಬಿಜೆಪಿಯಿಂದ ಯಾವುದೇ ಅಡ್ಡಮತದಾನ ಆಗುವುದಿಲ್ಲ. ಸಿದ್ದರಾಮಯ್ಯನವರ ಹೇಳಿಕೆಗೆ ಯಾವುದೇ ಮಹತ್ವ ಬೇಡ ಎಂದು ಹೇಳಿದ್ದಾರೆ.
ಈ ಮಧ್ಯೆ ನಿರ್ಮಲಾ ಸೀತಾರಾಮನ್ ಅವರಿಗೆ ನಿಗದಿಯಾಗಿದ್ದ 46 ಮತಗಳು ಈಗಾಗಲೇ ಚಲಾವಣೆಯಾಗಿದ್ದು, ಎರಡನೇ ಪ್ರಾಶಸ್ತ್ಯದ ಮತಗಳ ಪೈಕಿ 46 ಮತಗಳನ್ನು ಲೆಹರ್ ಸಿಂಗ್ ಪರ ಬಿಜೆಪಿ ಶಾಸಕರು ಚಲಾಯಿಸಿದ್ದಾರೆ.
ಮತದಾನ ಆರಂಭ: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆ ಚುನಾವಣೆಗೆ ಮತದಾನ ಆರಂಭವಾಗಿದ್ದು, ಜೆಡಿಎಸ್ ನ ಎಚ್ ಡಿ ರೇವಣ್ಣ ಮೊದಲ ಮತದಾನ ಮಾಡಿದರು.
Related Articles
ಅಭಯ ಪಾಟೀಲ್, ಬಸವರಾಜ್ ದದ್ದಲ್, ಕುಸುಮಾ ಶಿವಳ್ಳಿ, ಟಿ ಡಿ ರಾಜೇಗೌಡ, ನೆಹರು ಓಲೆಕಾರ್, ಬೈರತಿ ಸುರೇಶ್, ಸಚಿವ ಪ್ರಭು ಚೌಹಾಣ್, ಸುರೇಶ್ ಕುಮಾರ್, ಅಪ್ಪಚ್ಚು , ವೆಂಕಟರಮಣಪ್ಪ, ರಾಜೇಶ್ ನಾಯಕ್, ದುರ್ಯೋಧನ ಐಹೊಳೆ, ಅಮೃತ ದೇಸಾಯಿ ಮತದಾನ ಮಾಡಿದರು.
ಇದನ್ನೂ ಓದಿ:ಅಡ್ಡಮತದಾನ ಮಾಡಲ್ಲ: ಜೆಡಿಎಸ್ ಶಾಸಕ ಗುಬ್ಬಿ ಶ್ರೀನಿವಾಸ್
ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಸಚಿವ ಈಶ್ವರಪ್ಪ, ಸಚಿವರಾದ ಆರಗ ಜ್ಞಾನೇಂದ್ರ, ಶಶಿಕಲಾ ಜೊಲ್ಲೆ, ಮುನಿರತ್ನ, ಡಾ.ಕೆ ಸುಧಾಕರ್, ಮಾಧುಸ್ವಾಮಿ ಮತದಾನ ಮಾಡಿದರು.
ನಿರ್ಮಲಾ ಸೀತಾರಮನ್ ಪರ 46 ಮತ ಚಲಾವಣೆಯಾಗಿದೆ. ಹೀಗಾಗಿ ಗೆಲುವು ಸಾಧಿಸಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿಯಿದೆ.