Advertisement
ಮೈಸೂರಿನ ಖಾಸಗಿ ಹೊಟೇಲ್‌ನಲ್ಲಿ ರವಿವಾರ ನಡೆದ ಮೈಸೂರು, ಚಾಮರಾಜನಗರ, ಕೊಡಗು ಜಿಲ್ಲೆಗಳ ಕಾಂಗ್ರೆಸ್ ಪಕ್ಷದ ಜನಪ್ರತಿನಿಧಿಗಳು ಹಾಗೂ ಮುಂಚೂಣಿ ನಾಯಕರ ಸಭೆಯಲ್ಲಿ ಮಾತನಾಡಿದ ಅವರು, ಹಳೇ ಮೈಸೂರು ಭಾಗದಲ್ಲಿ ರಾಜ ವಂಶಸ್ಥರ ಜತೆ ಜನರು ಭಾವನಾತ್ಮಕ ಸಂಬಂಧ ಇಟ್ಟುಕೊಂಡಿದ್ದಾರೆ. ಆದ್ದರಿಂದ ಯದುವೀರ್ ಒಡೆಯರ್ ಅವರನ್ನು ಮಹಾರಾಜ, ರಾಜವಂಶಸ್ಥ ಎಂದು ಪದೇಪದೆ ಉಲ್ಲೇಖಿಸದೆ ಬಿಜೆಪಿ ಅಭ್ಯರ್ಥಿ ಎಂದು ಹೇಳಿ. ಅವರ ವಿರುದ್ಧ ಸಿಕ್ಕಸಿಕ್ಕಂತೆ ಹೇಳಿಕೆಗಳನ್ನು ಕೊಡಬೇಡಿ, ಭಾಷಣ ಮಾಡುವಾಗ ಎಚ್ಚರಿಕೆಯಿಂದ ಮಾತನಾಡಿ ಎಂದು ಕಿವಿಮಾತನ್ನು ಹೇಳಿದ್ದಾರೆ.
ಭಾವನಾತ್ಮಕ ವಿಚಾರಗಳನ್ನು ತಿರುಚುವುದರಲ್ಲಿ ಬಿಜೆಪಿಯವರು ನಿಸ್ಸೀಮರು. ಹೀಗಾಗಿ ನಿಮ್ಮ ಹೇಳಿಕೆಗಳು ಬಿಜೆಪಿಯವರಿಗೆ ಆಹಾರವಾಗಬಾರದು. ಈ ಕಾರಣದಿಂದ ಯದುವೀರ್ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ ಎಂದು ಸಿಎಂ ಪದೇಪದೆ ಒತ್ತಿ ಹೇಳಿದರು. ವೈಯಕ್ತಿಕ ಟೀಕೆ ಬೇಡ: ಸೇಠ್
ಸಿದ್ದರಾಮಯ್ಯ ಅವರಿಗಿಂತ ಮೊದಲು ಭಾಷಣ ಮಾಡಿದ ಕಾಂಗ್ರೆಸ್ ನೂತನ ಕಾರ್ಯಾಧ್ಯಕ್ಷ ತನ್ವೀರ್ ಸೇಠ್ ಕೂಡ ಇದೇ ಮಾತನ್ನು ಸೂಚ್ಯವಾಗಿ ಕಾರ್ಯಕರ್ತರಿಗೆ ಹೇಳಿದರು. ನೀವು ಯಾರನ್ನೇ ಆಗಲಿ ವೈಯಕ್ತಿಕವಾಗಿ ಗುರಿಯಾಗಿಸಿಕೊಂಡು ಮಾತನಾಡಲು ಹೋಗಬೇಡಿ. ಏನೋ ಮಾತನಾಡಿ ಅಂತಿಮವಾಗಿ ಪಕ್ಷಕ್ಕೆ ಮುಜುಗರ ಉಂಟುಮಾಡಬೇಡಿ. ಚುನಾವಣ ಸಮಯದಲ್ಲಿ ಸಣ್ಣ ವಿಚಾರಗಳು ಕೂಡಾ ದೊಡ್ಡದಾಗುತ್ತಾ ಹೋಗುತ್ತವೆ ಎಂದು ಹೇಳಿದರು.