Advertisement

ಹಳ್ಳಿಗಾಡಿನ ನಿವಾಸಿಗಳಿಗೆ ಸಹಕರಿಸಲು ನಮ್ಮ ಸಂಸ್ಥೆ ಬದ್ಧ: ಚಿತ್ರಾ ಆರ್‌. ಶೆಟ್ಟಿ

07:36 PM Feb 01, 2021 | Team Udayavani |

ಮುಂಬಯಿ: ಕಲ್ಯಾಣ್‌ನ ಓಂ ಶಕ್ತಿ ಮಹಿಳಾ ಸಂಸ್ಥೆಯು ಮುರ್ಬಾಡ್‌ನ‌ ಮಾಳಹಳ್ಳಿಯ ಸುತ್ತಲಿನ ನೂರಾರು ಮಕ್ಕಳಿಗೆ ಆಟಿಕೆ, ಪಠ್ಯ-ಪಠ್ಯೇತರ ಸಾಮಗ್ರಿಗಳು ಸಹಿತ ತಿಂಡಿ-ತಿನಿಸು, ದಿನೋಪಯೋಗಿ ವಸ್ತುಗಳ ವಿತರಣೆ ಕಾರ್ಯಕ್ರಮವವನ್ನು ಹೊಸ ವರ್ಷದ ಆರಂಭದಲ್ಲಿ ಆಯೋಜಿಸಿ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಇಂಡಿಯನ್‌ ಡೆವಲಪ್‌ಮೆಂಟ್‌ ಫೌಂಡೇಶನ್‌ ಸಂಸ್ಥೆಯ ಸಹಕಾರದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

Advertisement

ಓಂ ಶಕ್ತಿ ಮಹಿಳಾ ಸಂಸ್ಥೆ ಕಲ್ಯಾಣ್‌  ಇದರ ಗೌರವಾಧ್ಯಕ್ಷೆ ಚಿತ್ರಾ ಆರ್‌. ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಹಳ್ಳಿಯ ಮುಗ್ಧ ಮಕ್ಕಳ ಮೊಗ ದಲ್ಲಿ ಮುಗುಳು ನಗೆಯನ್ನು ನೋಡುವಾಗ ನಮ್ಮ ಮನಸ್ಸು ಪ್ರಸನ್ನವಾಗು ತ್ತದೆ. ಆದ್ದರಿಂದಲೇ ನೂತನ ವರ್ಷದ ಆಚರಣೆಗಾಗಿ ನಾವು ಹಳ್ಳಿಗೆ ಬಂದಿ ದ್ದೇವೆ. ಕೊರೊನಾ ಮಹಾಮಾರಿಯ ಸಂದರ್ಭದಲ್ಲಿ ನಾವು ದೂರದಲ್ಲಿಯೇ ಇದ್ದು ನಮ್ಮಿಂದಾದಷ್ಟು ಸಹಾಯವನ್ನು ಈ ಹಳ್ಳಿಯ ನಿವಾಸಿಗಳಿಗೆ ಮಾಡಿದ್ದೇವೆ. ಬದುಕಿನ ಕೆಟ್ಟ ಘಳಿಗೆಯಲ್ಲಿ ಅಥವಾ ಹುಟ್ಟಿನಿಂದಲೇ ಅಂಗವಿಕಲರಾದವರಿಗೆ ಕೃತಕ ಅಂಗದ ಊರುಗೋಲಿನ ಆಸರೆಯನ್ನು ಕಲ್ಯಾಣ್‌ನ ಓಂ ಶಕ್ತಿ ಮಹಿಳಾ ಸಂಸ್ಥೆಯು ಇತ್ತೀಚೆಗೆ ನೀಡಿದೆ.

ಜ. 10ರಂದು ರೋಟರ್ಯಾಕ್ಟ್ ಕ್ಲಬ್‌ ಕಲ್ಯಾಣ್‌ ಮತ್ತು ಇನ್ನರ್‌ ವ್ಹೀಲ್‌ ನ್ಯೂ ಕಲ್ಯಾಣ್‌ ಅವರ ಸಹಕಾರದೊಂದಿಗೆ ಅಸಹಾಯಕ ಐದು ಮಂದಿ ಅಂಗವಿಕಲರಿಗೆ ಉಚಿತವಾಗಿ ಕೃತಕ ಕಾಲು ಜೋಡಿಸುವ ಮಾನವೀಯ ಸೇವೆ ಕೈಗೊಂಡಿತು. ಸುಮಾರು 15 ವರ್ಷಗಳಿಂದ ನೊಂದವರಿಗೆ ಆಶಾಕಿರಣವಾಗಿ ಸೇವೆ ಸಲ್ಲಿಸುತ್ತಿರುವ ನಾವು ಅನ್ನದಾನಕ್ಕಿಂತಲೂ ಅಂಗದಾನ ಶ್ರೇಷ್ಟ ಎಂದು ಭಾವಿಸಿದ್ದೇವೆ. ನಮ್ಮ ಈ ಮಹತ್ತರ ಕಾರ್ಯಕ್ಕೆ ಅವಕಾಶ ಮಾಡಿಕೊಟ್ಟ ಡಾ| ಅರ್ಚನಾ ಸೋಮಾನಿ ಮತ್ತು ಶಿಲಾ ಸಬಿ°àಸ್‌ ಅವರಿಗೆ ಸಂಸ್ಥೆಯ ವತಿಯಿಂದ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಮುಂದೆಯೂ ಈ ಹಳ್ಳಿಗಾಡಿನ ನಿವಾಸಿಗಳಿಗೆ ಸಹಕರಿಸಲು ನಮ್ಮ ಸಂಸ್ಥೆ ಬದ್ಧವಾಗಿದೆ. ನಮ್ಮ ಸಮಾಜಪರ ಕಾರ್ಯಗಳಿಗೆ ಸದಾ ಸಹಕರಿಸುತ್ತಿರುವ ಮುರ್ಬಾಡ್‌ನ‌ ಜಿಲ್ಲಾ ಪರಿಷತ್‌ ಸದಸ್ಯೆ ಸೀಮಾ ಘರಾಟ್‌ ಮತ್ತು ಅನಿಲ್‌ ಘರಾಟ್‌ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇವೆ ಎಂದರು.

ಇದನ್ನೂ ಓದಿ:ರಾಯರ ದರ್ಶನದಿಂದ ಜೀವನ ಪಾವನ: ಪ್ರಹ್ಲಾದಾಚಾರ್ಯ

ಇಂಡಿಯನ್‌ ಡೆವಲಪ್‌ಮೆಂಟ್‌ ಫೌಂಡೇಶನ್‌ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ನಾರಾಯಣ ಅಯ್ಯರ್‌, ಮಿಸ್‌ ಇಂಡಿಯಾ ಗ್ಲೋಬಲ್‌ ಪುರಸ್ಕೃತೆ ನಿಶಾ ವೆಲಂಗ್‌ಕರ್‌ ಅವರು ಅತಿಥಿಗಳಾಗಿ ಪಾಲ್ಗೊಂ ಡು ಶುಭ ಹಾರೈಸಿದರು. ಶಶಿ ಪ್ರವೀಣ್‌ ಶೆಟ್ಟಿ, ನಿಲೇಶ್‌ ಶೆಟ್ಟಿ, ಯಶೋದಾ ಶೆಟ್ಟಿ, ಐಡಿಎಫ್‌ ಕಾರ್ಯಕರ್ತರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಜಯಂತಿ ಜಿ. ಹೆಗ್ಡೆ, ಜ್ಯೋತಿ ಎಸ್‌. ಶೆಟ್ಟಿ, ಜಯಶ್ರೀ ಶೆಟ್ಟಿ, ಕುಶಲಾ ಜಿ. ಶೆಟ್ಟಿ, ಶಶಿ ಪಿ. ಶೆಟ್ಟಿ, ವಿಧುಲಾ ಪಿ. ಶೆಟ್ಟಿ ಉಪಸ್ಥಿತರಿದ್ದರು. ಇಂದು ನಾಯರ್‌ ಮತ್ತು ರಾಜೇಶ್‌ ಪರ್ದೇಶಿ, ರೋಟರಿ ದಿವ್ಯಾಂಗ ಸೆಂಟರ್‌ ಇದರ ಕಾರ್ಯಕರ್ತರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next