Advertisement

ಮೌಡ್ಯ ತೊಲಗಿಸುವ ಕೆಲಸವೇ ನಮ್ಮ ಗುರಿ: ವೀರಭದ್ರಪ್ಪ

07:15 PM Aug 05, 2022 | Team Udayavani |

ಸಿಂಧನೂರು: ಜನರಲ್ಲಿ ಸಾಕಷ್ಟು ಮೌಡ್ಯ ಆಚರಣೆಗಳ ಬಗ್ಗೆ ನಂಬಿಕೆಯಿದೆ. ಬಸವಣ್ಣನವರ ಆಶಯದಂತೆ ಅವುಗಳನ್ನು ತೊಲಗಿಸುವುದೇ ನಮ್ಮ ಉದ್ದೇಶ ಎಂದು ಬಸವ ಕೇಂದ್ರದ ಜಿಲ್ಲಾ ಗೌರವಾಧ್ಯಕ್ಷ ಪಿ.ವೀರಭದ್ರಪ್ಪ ಕುರುಕುಂದಿ ಹೇಳಿದರು.

Advertisement

ನಗರದ ವೆಂಕಟೇಶ್ವರ ಕಾಲೋನಿಯಲ್ಲಿ ಇರುವ ಅನುದಾನಿತ ವೆಂಕಟೇಶ್ವರ ಪ್ರೌಢಶಾಲೆಯಲ್ಲಿ ಬಸವ ಕೇಂದ್ರದಿಂದ ಗುರುವಾರ ಹಮ್ಮಿಕೊಂಡಿದ್ದ ಬಸವ ಪಂಚಮಿಯಲ್ಲಿ ಅವರು ಮಾತನಾಡಿದರು.

ಮೌಡ್ಯತೆಯನ್ನು ಬಿತ್ತುವ ಕೆಲಸ ಈ ಸಮಾಜದಲ್ಲಿ ನಡೆಯುತ್ತಿದೆ. ಅದನ್ನು ತೊಲಗಿಸುವ ನಿಟ್ಟಿನಲ್ಲಿ ನಾವು ಬಸವ ಪಂಚಮಿ ಆಚರಣೆ ಮಾಡುತ್ತಿದ್ದು, ನಾಗರ ಪಂಚಮಿಯ ದಿನ ಮಕ್ಕಳಿಗೆ ಹಾಲು ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಆಧುನಿಕ ಸಮಾಜ ಪ್ರಗತಿಪರವಾಗಿ ಮುನ್ನಡೆಯಬೇಕು. ಯಾವುದೋ ಪುರಾತನ ಮೌಡ್ಯಗಳಿಗೆ ಜೋತು ಬೀಳಬಾರದು. 12ನೇ ಶತಮಾನದಲ್ಲಿ ಅನುಭವ ಮಂಟಪದ ಮೂಲಕ ಜಗತ್ತಿನಲ್ಲಿ ಪರಿವರ್ತನೆ ಬಯಸಿದ್ದ ಬಸವೇಶ್ವರರ ಆದರ್ಶಗಳನ್ನು ಇಂದು ಸಮಾಜ ಪಾಲನೆ ಮಾಡಬೇಕಿದೆ ಎಂದರು.

ಬಸವ ಕೇಂದ್ರ ಮುಖ್ಯಸ್ಥರಾದ ಸಿದ್ದರಾಮಪ್ಪ ಸಾಹುಕಾರ ಮಾಡಸಿರವಾರ, ಎಚ್‌.ಜಿ. ಹಂಪಣ್ಣ, ಬಸವ ಕೇಂದ್ರ ಮಾಜಿ ಅಧ್ಯಕ್ಷ ಕೆ.ಶರಣಪ್ಪ ಟೆಂಗಿನಕಾಯಿ, ಗುಂಡಪ್ಪ ಬಳಿಗಾರ ಸೇರಿದಂತೆ ಅನೇಕರು ಇದ್ದರು. ಶಾಲೆಯ ಸಿಬ್ಬಂದಿ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.

ಸನ್ಮಾನ: ಇದೇ ವೇಳೆ ನಿವೃತ್ತ ಶಿಕ್ಷಕರಾದ ಗಂಗನಗೌಡ ಪಾಟೀಲ್‌, ವೆಂಕಟನಗೌಡ ವಟಗಲ್‌, ಲಕ್ಷ್ಮೀದೇವಿ ಅವರನ್ನು ಬಸವ ಕೇಂದ್ರದ ವತಿಯಿಂದ ಸನ್ಮಾನಿಸಿ, ಬೀಳ್ಕೊಡಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next