Advertisement

ನಮ್ಮ ಹೋರಾಟ ಕಾಶ್ಮೀರಕ್ಕಾಗಿ ಹೊರತು ಕಾಶ್ಮೀರಿಗರ ವಿರುದ್ಧವಲ್ಲ; ಮೋದಿ

12:34 PM Feb 23, 2019 | Sharanya Alva |

ರಾಜಸ್ಥಾನ್: ಭಯೋತ್ಪಾದನೆ ಹಾಗೂ ಮಾನವೀಯತೆಯ ಶತ್ರುಗಳ ವಿರುದ್ಧ ಭಾರತದ ಯುದ್ಧವೇ ಹೊರತು ಕಾಶ್ಮೀರಿಗಳ ವಿರುದ್ಧವಲ್ಲ. ಒಂದು ವೇಳೆ ಭಯೋತ್ಪಾದನೆ ನಿರಂತರವಾಗಿ ಮುಂದುವರಿದರೆ ಜಗತ್ತಿನಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Advertisement

ಶನಿವಾರ ರಾಜಸ್ಥಾನದ ಟೋಂಕ್ ಜಿಲ್ಲೆಯಲ್ಲಿ ಪಕ್ಷದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಹೋರಾಟ ಕಾಶ್ಮೀರಕ್ಕಾಗಿಯೇ ಹೊರತು, ಕಾಶ್ಮೀರಿಗರ ವಿರುದ್ಧವಲ್ಲ ಎಂದು ಸ್ಪಷ್ಟಪಡಿಸಿದರು.

ಇತ್ತೀಚೆಗೆ ಕಾಶ್ಮೀರಿ ಯುವಕರನ್ನು ಗುರಿಯಾಗಿರಿಸಿಕೊಂಡು ಹಲ್ಲೆ ನಡೆಸಿರುವ ಘಟನೆಯನ್ನು ಉಲ್ಲೇಖಿಸಿ ಮಾತನಾಡಿದ ಅವರು, ಅಂತಹ ಘಟನೆಗಳು ಭಾರತದಲ್ಲಿ ಇನ್ಮುಂದೆ ನಡೆಯುವುದಿಲ್ಲ. ಭಯೋತ್ಪಾದನೆಯಿಂದ ಕಾಶ್ಮೀರಿ ಯುವಕರು ಕೂಡಾ ತೊಂದರೆಗೊಳಗಾಗಿದ್ದಾರೆ. ಕಳೆದ 40 ವರ್ಷಗಳಿಂದ ಕಾಶ್ಮೀರಿಗಳು ಭಯೋತ್ಪಾದನೆಯಿಂದ ನಲುಗಿ ಹೋಗಿದ್ದಾರೆ. ಅವರಿಗೂ ಶಾಂತಿಯ ಅಗತ್ಯತೆ ಇದೆ ಎಂದು ಹೇಳಿದರು.

ಒಂದು ವೇಳೆ ಭಯೋತ್ಪಾದನೆ ಮಾರಿ ಮುಂದುವರಿದಲ್ಲಿ ಜಗತ್ತಿನಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ. ಭಯೋತ್ಪಾದನೆ ವಿರುದ್ಧ ಹೋರಾಡಲು ಒಗ್ಗಟ್ಟು ಪ್ರದರ್ಶಿಸಬೇಕಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next