Advertisement
ಯೋಜನೆಗಾಗಿ ಗುರುತಿಸಲಾಗಿರುವ ಸುಮಾರು 5.5 ಎಕರೆ ಪ್ರದೇಶದಲ್ಲಿ 200ರಷ್ಟು ಮರಗಳಿದ್ದು ನಿರ್ಮಾಣ ಆರಂಭ ಮಾಡಲು ಉದ್ದೇಶಿಸಿದ ಸಮಯದಲ್ಲಿಯೇ ಅರಣ್ಯ ಇಲಾಖೆ ಇದನ್ನು ಡೀಮ್ಡ್ ಫಾರೆಸ್ಟ್ ಪ್ರದೇಶ ಎಂದು ಪರಿಗಣಿಸಿದೆ. ಈ ಕಾರಣಕ್ಕಾಗಿ ಈ ಪ್ರಸ್ತಾವನೆ ಕಡತದಲ್ಲಿಯೇ ಬಾಕಿ ಉಳಿದಿತ್ತು. ಪದೇಪದೇ ಈ ವಿಚಾರಗಳು ಪ್ರಸ್ತಾಪಕ್ಕೆ ಬರುತ್ತಿದ್ದರೂ ಮುಂದಕ್ಕೆ ಹೋಗಿಲ್ಲ. ಡೀಮ್ಡ್ ಫಾರೆಸ್ಟ್ ಸಮಸ್ಯೆಗೆ ಮುಕ್ತಿ ನೀಡದೇ ಕಂಪ್ಯೂಟರೈಸ್ಡ್ ಡ್ರೈವಿಂಗ್ ಟೆಸ್ಟ್ ಟ್ರ್ಯಾಕ್ ನಿರ್ಮಾಣ ಸಾಧ್ಯವಿಲ್ಲ. ಈ ಚುನಾವಣೆಯಲ್ಲಾ ದರೂ ಇದಕ್ಕೊಂದು ಮುಕ್ತಿ ಸಿಗಲಿ ಎಂಬುದು ನಮ್ಮ ಹಕ್ಕೊತ್ತಾಯ.
Related Articles
Advertisement
ಯಾಕೆ ಅಗತ್ಯ?ಕಂಪ್ಯೂಟರೈಸ್ಡ್ ಡ್ರೈವಿಂಗ್ ಟೆಸ್ಟ್ ಟ್ರ್ಯಾಕ್ ನಿರ್ಮಾಣ ಮಾಡಿದರೆ ಜಿಲ್ಲೆಯ ಹಲವಾರು ಮಂದಿಗೆ ಉಪಯೋಗವಾಗಲಿದೆ. ಪ್ರಸ್ತುತ ಆರ್‌ಟಿಒ ಕಚೇರಿಯಲ್ಲಿರುವ ಸಣ್ಣ ಟ್ರ್ಯಾಕ್‌ನಲ್ಲಿಯೇ ಮಾಡಲಾಗುತ್ತಿದ್ದು, ಅಲೆವೂರು ಅಥವಾ ಬೇರೆ ಪ್ರದೇಶದಲ್ಲಿ ಕಂಪ್ಯೂಟರೈಸ್ಡ್ ಡ್ರೈವಿಂಗ್ ಟೆಸ್ಟ್ ಟ್ರ್ಯಾಕ್ ನಿರ್ಮಾಣ ಮಾಡಿದರೆ ಆರ್‌ಟಿಒ ಕಚೇರಿಯಲ್ಲಿ ಉಂಟಾಗುವ ಜನದಟ್ಟನೆಯನ್ನೂ ತಡೆಗಟ್ಟಬಹುದಾಗಿದೆ. ಸುಸಜ್ಜಿತ ಟ್ರ್ಯಾಕ್ ಕೂಡ ಇಲ್ಲದಿರುವುದು ದುರಂತವೇ ಸರಿ. ಗುತ್ತಿಗೆ ಪಡೆದಿದ್ದ ಕೆಎಸ್ಸಾರ್ಟಿಸಿ
ಅಲೆವೂರಿನಲ್ಲಿ ಕಂಪ್ಯೂಟರೈಸ್ಡ್ ಡ್ರೈವಿಂಗ್ ಟೆಸ್ಟ್ ಟ್ರ್ಯಾಕ್ ನಿರ್ಮಿಸಲು ಕೆಎಸ್ಸಾರ್ಟಿಸಿ ಸಂಸ್ಥೆಯ ನಿರ್ಮಾಣ ವಿಭಾಗದವರಿಗೆ 9 ವರ್ಷದ ಹಿಂದೆಯೇ ಗುತ್ತಿಗೆ ನೀಡಲಾಗಿತ್ತು. ಇದಕ್ಕಾಗಿ 6 ಕೋಟಿ ರೂ. ಗಳಷ್ಟು ಹಣವೂ ಬಿಡುಗಡೆಯಾಗಿತ್ತು. ಈ ನಡುವೆ ಡೀಮ್ಡ್ ಫಾರೆಸ್ಟ್ ಸಮಸ್ಯೆ ಎದುರಾದ ಕಾರಣ ಮೊಟಕು ಗೊಂಡಿದೆ. ಈ ಕಾರಣಕ್ಕೆ ಆ ಮೊತ್ತವೂ ವಿನಿಯೋಗವಾಗದೆ ಹಿಂದಿರುಗಿದೆ. ~ ಪುನೀತ್ ಸಾಲ್ಯಾನ್