Advertisement

ವಿಶ್ವದಲ್ಲಿಯೇ ನಮ್ಮ ಸಂವಿಧಾನ ಬಲಿಷ್ಠವಾದುದು: ಆಲಗೂರ

03:03 PM Jan 27, 2018 | |

ಚಡಚಣ: ಡಾ| ಬಿ.ಆರ್‌. ಅಂಬೇಡ್ಕರ್‌ ನೇತೃತ್ವದಲ್ಲಿ ರಚಿಸಲ್ಪಟ್ಟ ಸಂವಿಧಾನ ಹಾಗೂ ಪ್ರಜಾತಂತ್ರ ವ್ಯವಸ್ಥೆ ವಿಶ್ವದಲ್ಲಿ ಬಲಿಷ್ಠ ಹಾಗೂ ಮಾದರಿಯಾಗಿದೆ ಎಂದು ಶಾಸಕ ರಾಜು ಆಲಗೂರ ಹೇಳಿದರು.

Advertisement

ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ತಾಲೂಕಾಡಳಿತ ಹಮ್ಮಿಕೊಂಡಿದ್ದ 69ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್‌ ಪ್ರಕ್ಷ ನೀಡಿದ ಪ್ರಣಾಳಿಕೆಯಂತೆ ರಾಜ್ಯದಲ್ಲಿ 50 ನೂತನ ತಾಲೂಕು ಕೆಂದ್ರಗಳಾಗಿ ಇಂದು ಕಾರ್ಯಾರಾಂಭಗೊಂಡಿವೆ. ಚಡಚಣ ತಾಲೂಕು ಕೇಂದ್ರವಾಗಿ ಕಾರ್ಯಾರಾಂಭಗೊಂಡಿರುವುದು ಈ ಭಾಗದ ಜನರ ಹಲವು ದಶಕಗಳ ಬೇಡಿಕೆ ಈಡೇರಿದಂತಾಗಿದೆ ಎಂದರು.

ಬಿಇಒ ಎಚ್‌. ತಿಪ್ಪಣ್ಣ ಮಾತನಾಡಿ, ನೂತನ ತಾಲೂಕು ಕೇಂದ್ರವಾಗಿ ಚಡಚಣ ಕಾರ್ಯಾರಾಂಭ ಮಾಡಿದ್ದು ಭಾಗದ
ಜನರಲ್ಲಿ ಹರ್ಷವನ್ನುಂಟು ಮಾಡಿದೆ. ತಾಲೂಕು ಕೇಂದ್ರವಾಗಿ ಚಡಚಣ ಪಟ್ಟಣ ರಚನೆಯಾಗಲು ಪ್ರಾಮಾಣಿಕವಾಗಿ
ಶ್ರಮಿಸಿದ ಶಾಸಕರ ಕಾರ್ಯ ಶ್ಲಾಘನೀಯ ಎಂದರು. ಅಧ್ಯಕ್ಷತೆ ವಹಿಸಿ¨ª‌ ಪಪಂ ಅಧ್ಯಕ್ಷ ಬಾಬುಗೌಡ ಪಾಟೀಲ
ಮಾತನಾಡಿ, ವಿವಿಧ ಕಚೇರಿಗಳು ಆರಂಭಗೊಳ್ಳಲು ಕಂದಾಯ ಇಲಾಖೆಯೊಂದಿಗೆ ಸಹಕರಿಸುವದಾಗಿ
ತಿಳಿಸಿದರು. ತಹಶೀಲ್ದಾರ್‌ ಎಸ್‌.ಎಚ್‌. ಮೆಳ್ಳಿಗೇರಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ತಾಪಂ ಸದಸ್ಯ ರಾಜು ಝಳಕಿ, ಮುಖಂಡ ಸುರೇಶ ಗೊಣಸಗಿ, ಕಾಂತೂಗೌಡ ಪಾಟೀಲ, ಸಿಪಿಐ ಎಂ.ಬಿ. ಅಸೂಡೆ, ಕರವೇ ತಾಲೂಕಾಧ್ಯಕ್ಷ ಸೋಮು ಬಡಿಗೇರ, ಜಿಲ್ಲಾ ಉಪಾಧ್ಯಕ್ಷ ಮಹಾದೇವ ಬನಸೋಡೆ, ತಾಲೂಕು ದೈಹಿಕ ಶಿಕ್ಷಣಾ ಧಿಕಾರಿ ಎ.ಪಿ. ಠಾಕೂರ, ಎಪಿಎಂಸಿ ನಿರ್ದೇಶಕಿ ದಾನಮ್ಮಗೌಡತಿ ಪಾಟೀಲ, ಹಮೀದ ದಖನಿ ಸೇರಿದಂತೆ ಪಪಂ ಸದಸ್ಯರು ಹಾಗೂ ವಿವಿಧ ಗ್ರಾಮಗಳ ಗ್ರಾಪಂ ಸದಸ್ಯರು, ಅಧ್ಯಕ್ಷರು, ವಿವಿಧ ಇಲಾಖೆಗಳ ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಚಡಚಣ ನೂತನ ತಾಲೂಕು ಕೇಂದ್ರವಾದ ನಿಮಿತ್ಯ ಇದೆ ಪ್ರಥಮ ಬಾರಿಗೆ ಸ್ಥಳಿಯ ಸರಕಾರಿ ಮಾದರಿ ಪ್ರಾಥಮಿಕ
ಶಾಲೆ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ಇದೇ ಮೊದಲ ಬಾರಿಗೆ ಪೊಲೀಸ್‌ ಸಿಬ್ಬಂದಿ ಪರೇಡ್‌ ನಡೆಸಿ
ತಹಶೀಲ್ದಾರ್‌ಗೆ ಗೌರವ ವಂದನೆ ಸಲ್ಲಿಸಿದ ಕ್ಷಣ ಎಲ್ಲರ ಗಮನ ಸೆಳೆಯಿತು. ಪರೇಡ್‌ನ‌ಲ್ಲಿ ಸ್ಥಳಿಯ ಪೊಲೀಸ್‌ ಠಾಣೆ
ಸಿಪಿಐ ಎಂ.ಬಿ. ಅಸೂಡೆ, ಪಿಎಸ್‌ಐ ಗೋಪಾಲ ಹಳ್ಳೂರ, ಝಳಕಿ ಪಿಎಸ್‌ಐ ಸುರೇಶ ಗಡ್ಡಿ, ಪೊಲೀಸ್‌ ಸಿಬ್ಬಂದಿ ಹಾಗೂ
ಗೃಹರಕ್ಷಕ ದಳದ ಸಿಬ್ಬಂದಿ ಪಾಲ್ಗೊಂಡಿದ್ದರು. ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಟ್ಟಣದ ಸರಕಾರಿ,
ಖಾಸಗಿ ಪ್ರಾಥಮಿಕ, ಪ್ರೌಢ ಶಾಲೆಗಳ ಸುಮಾರು 1,500 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next