Advertisement
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಕುರುಬ ಸಮುದಾಯದ ಹೋರಾಟಕ್ಕೆ ಮಾರ್ಗದರ್ಶನ ಮಾಡಿದ್ದರೇ, ಈ ಹೋರಾಟ ಇನ್ನೂ ಎತ್ತರಕ್ಕೆ ಬೆಳೆಯುತ್ತಿತ್ತು. ಕನಕಗೋಪುರ ಬಿದ್ದಾಗ, ಮಠ ಕಟ್ಟಿದಾಗ ಕೂಡ ಅವರು ಇರಲಿಲ್ಲ. ಮಠ ಕಟ್ಟುವುದು ಅಷ್ಟು ಸುಲಭವಲ್ಲ. ಕಾಗಿನೆಲೆ ಮಹಾಸಂಸ್ಥಾಪಕ ಅಧ್ಯಕ್ಷ ನಾನೇ ಆಗಿದ್ದೇನೆ. ಆಗೆಲ್ಲ ನೀವು (ಸಿದ್ದರಾಮಯ್ಯ) ಬರದಿದ್ದರೂ ನಿಮ್ಮ ಹೆಸರು ಹಾಕಲಾಗಿತ್ತು. ಈ ಹೋರಾಟಕ್ಕೆ ಬೆಂಬಲ ಸೂಚಿಸಬೇಕಿತ್ತು ಎಂದು ಅವರು ತಿಳಿಸಿದ್ದಾರೆ.
Related Articles
Advertisement
ಉಪಚುನಾವಣೆ ಸಮಯದಲ್ಲಿ ಯೋಗೇಶ್ವರ್ ಹಾಗೂ ಸಂತೋಷ್, ಸಿಎಂ ಯಡಿಯೂರಪ್ಪ ಕೊಟ್ಟ ಹಣ ಎತ್ತಿಕೊಂಡು ಹೋದರು ಎಂಬ ಎಂ.ಎಲ್.ಸಿ ಎಚ್ ವಿಶ್ವನಾಥ್ ಹೇಳಿಕೆ ವಿಚಾರವಾಗಿ ಮಾತನಾಡಿ, ಹೌದು ! ನಾನು ಹೇಳಿದ್ದು ಸತ್ಯ. ನಾನು ಹೇಳಿದ ದೊಡ್ಡ ಮೊತ್ತ 5 ಲಕ್ಷ ರೂ. ಗಳು. ಆ ಹಣ ಎತ್ತಿಕೊಂಡು ಹೋದರು ಎಂದು ಆರೋಪಿಸಿದ್ದೆ. ನನಗೆ ಅದೇ ದೊಡ್ಡ ಮೊತ್ತ. ಸಿಎಂ ಆಗಿದ್ದ ನಿಮಗೆ ( ಸಿದ್ದರಾಮಯ್ಯ) ಕೋಟಿ ಕೋಟಿ ಇರಬಹುದು ಎಂದು ವ್ಯಂಗ್ಯವಾಡಿದರು.
ಜಿ.ಟಿ. ದೇವೇಗೌಡ ಹಣ ಪಡೆದು ಬಿಜೆಪಿಗೆ ಕೆಲಸ ಮಾಡಿದ್ದರೇ, ಅದು ಎಷ್ಟು ಹಣ ಎಂದು ತಿಳಿಸಿ. ಅದು ವೈಟೋ, ಬ್ಲಾಕೋ ಎಂಬುದನ್ನು ಮೊದಲು ಸ್ಪಷ್ಟಪಡಿಸಿ ಎಂದು ಸಿದ್ದರಾಮಯ್ಯಗೆ ಹೆಚ್. ವಿಶ್ವನಾಥ್ ತಿರುಗೇಟು ನೀಡಿದರು.