Advertisement

KSRTC ಯಿಂದ “ನಮ್ಮ ಕಾರ್ಗೋ-ಟ್ರಕ್‌” ಸೇವೆ ಆರಂಭ

11:52 PM Dec 23, 2023 | Team Udayavani |

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ “ನಮ್ಮ ಕಾರ್ಗೋ-ಟ್ರಕ್‌’ ಸೇವೆಯನ್ನು ಆರಂಭಿಸಿದೆ. “ನಿಮ್ಮ ವಿಶ್ವಾಸ-ನಮ್ಮ ಕಾಳಜಿ” ಶೀರ್ಷಿಕೆಯಡಿ ಈ ಸೇವೆಯನ್ನು ಆರಂಭಿಸಲಾಗಿದ್ದು, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಶನಿವಾರ ಈ ಯೋಜನೆಗೆ ಚಾಲನೆ ನೀಡಿ, 20 ನೂತನ ಟ್ರಕ್‌ಗಳಿಗೆ ಹಸುರು ನಿಶಾನೆ ತೋರಿಸಿದರು.

Advertisement

ಬಳಿಕ ಮಾತನಾಡಿದ ಸಚಿವರು, ಮುಂದಿನ ಒಂದು ತಿಂಗಳಿನಲ್ಲಿ 100 ಟ್ರಕ್‌ಗಳು ಸೇವೆಗೆ ಲಭ್ಯವಿರಲಿವೆ. ಒಂದು ವರ್ಷದೊಳಗೆ 500 ಟ್ರಕ್‌ಗಳನ್ನು ಸೇರಿಸಲಾಗುವುದು ಎಂದರು. ಪ್ರಸಕ್ತ ಪೀಣ್ಯದಲ್ಲಿರುವ ನಿಗಮದ ಬಸವೇಶ್ವರ ಬಸ್‌ ನಿಲ್ದಾಣವನ್ನು ನಮ್ಮ ಕಾರ್ಗೋ ಟ್ರಕ್‌ ಟರ್ಮಿನಲ್‌ ಆಗಿ ಪರಿವರ್ತಿಸಲಾಗುವುದು. ಕಾರ್ಯಾಚರಣೆ ಹಾಗೂ ನಿರ್ವಹಣೆಗಾಗಿ ಘಟಕವನ್ನಾಗಿ ಬಳಸಿ, ಬಸ್‌ ನಿಲ್ದಾಣದಲ್ಲಿರುವ ಸ್ಥಳವನ್ನು ಸರಕಾರಿ ಸಂಸ್ಥೆಗಳಿಗೆ ನೀಡಿ ವಾಣಿಜ್ಯ ಅಗತ್ಯಕ್ಕಾಗಿ ಬಳಸಲಾಗುವುದು ಎಂದರು.

ಟ್ರಕ್‌ ಸೇವೆಯು ಬೆಂಗಳೂರು, ಮೈಸೂರು, ತುಮಕೂರು, ಹಾಸನ, ಮಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು, ಕೋಲಾರ, ದಾವಣಗೆರೆಯಿಂದ ಕರ್ನಾಟಕ ರಾಜ್ಯದ ವಿವಿಧ ಸ್ಥಳಗಳಿಗೆ ಲಭ್ಯವಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next