Advertisement
2019ರ ಮಹಾ ಚುನಾವಣೆಯಲ್ಲಿ ಶತಾಯಗತಾಯ ಬಿಜೆಪಿಗೆ ಅಧಿಕಾರ ತಪ್ಪಿಸುವ ಉದ್ದೇಶದಿಂದ ರಚನೆ ಯಾಗುತ್ತಿರುವ ವಿಪಕ್ಷಗಳ ಮಹಾ ಘಟ ಬಂಧನವನ್ನು ಕಟುವಾಗಿ ಟೀಕಿಸಿರುವ ಅವರು, “”ವಿಪಕ್ಷಗಳಂತೆ ಸಮಾಜವನ್ನು ಒಡೆದು ಆಳುವ, ವೋಟ್ ಬ್ಯಾಂಕ್‌ಗಳನ್ನು ನಿರ್ಮಿಸುವ ಆಶಯದೊಂದಿಗೆ ಬಿಜೆಪಿ ರಾಜಕಾರಣಕ್ಕೆ ಕಾಲಿಟ್ಟಿಲ್ಲ. ಬಿಜೆಪಿ ಕಾರ್ಯಕರ್ತನೊಬ್ಬ ಸ್ವಹಿತಾಸಕ್ತಿ ಯಿಂದ ಎಂದಿಗೂ ಕಾರ್ಯ ನಿರ್ವಹಿಸಲಾರ. ದೇಶಸೇವೆಯ ಗುರಿಯೊಂದಿಗೆ ಮಾತ್ರ ಕಾರ್ಯ ನಿರ್ವಹಿಸುತ್ತಾನೆ” ಎಂದು ಅವರು ಹೇಳಿದ್ದಾರೆ. ತಮಿಳುನಾಡಿನ ಬಿಜೆಪಿ ಕಾರ್ಯ ಕರ್ತರೊಂದಿಗೆ ಸಂವಾದ ನಡೆಸುವ ವೇಳೆ ಅವರು ಈ ರೀತಿ ಟೀಕೆ ಮಾಡಿದ್ದು, ಎಸ್‌ಪಿ, ಬಿಎಸ್‌ಪಿ ಮೈತ್ರಿ ಏರ್ಪಟ್ಟ ಮರುದಿನವೇ ಈ ಹೇಳಿಕೆ ಗಮನಾರ್ಹ.
ದೇಶ ವಿಭಜನೆ ವೇಳೆ ಕರ್ತಾರ್ಪುರ ಸಾಹಿಬ್ ಅನ್ನು ಭಾರತದ ಭಾಗವಾಗಿಸುವಲ್ಲಿ ವಿಫಲವಾದ ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ಕಿಡಿಕಾರಿದ್ದಾರೆ. ರವಿವಾರ ಹೊಸದಿಲ್ಲಿಯ ತಮ್ಮ ನಿವಾಸದಲ್ಲಿ 10ನೇ ಸಿಕ್ಖ್ ಗುರು ಗೋವಿಂದ ಸಿಂಗ್ 350ನೇ ಜನ್ಮ ದಿನದ ಸ್ಮರಣಾರ್ಥ ನಾಣ್ಯ ಬಿಡುಗಡೆ ಮಾಡಿದ ಅವರು, ಕಾಂಗ್ರೆಸ್ ವಿರುದ್ಧ ಹರಿಹಾಯ್ದು. 1947ರಲ್ಲೇ ನಡೆದ ತಪ್ಪು ಇದು. ನಮ್ಮ ಗುರುವಿನ ಪ್ರಮುಖ ತಾಣ ಕೆಲವೇ ಕೆಲವು ಕಿ.ಮೀ. ದೂರದಲ್ಲಿದೆ. ಅದನ್ನು ಭಾರತದ ಭಾಗವಾಗಿಸುವಲ್ಲಿ ಕಾಂಗ್ರೆಸ್ ವಿಫಲವಾಯಿತು ಎಂದು ಹೇಳಿದ್ದಾರೆ ಪ್ರಧಾನಿ. ಈ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರೂ ಉಪಸ್ಥಿತರಿದ್ದರು.