Advertisement

ತುಳುನಾಡು ಸಾಮರಸ್ಯಕ್ಕೆ ಮಾದರಿ: ಮೊಗ್ರಾಲ್‌

05:36 PM Apr 10, 2017 | Team Udayavani |

ಮುಳ್ಳೇರಿಯಾ: ಪರಸ್ಪರ ಅರ್ಥೈಸಿಕೊಂಡು ಗೌರವಿಸುವುದನ್ನು ರೂಢಿಸುವುದರಿಂದ ಶಾಂತಿ, ನೆಮ್ಮದಿ ನೆಲೆಗೊಳ್ಳುತ್ತದೆ. ಪ್ರಾಚೀನ ಕಾಲದಿಂದಲೂ ತುಳುನಾಡು ಸೌಹಾರ್ದ, ಸಾಮರಸ್ಯಗಳಿಗೆ ಮಾದರಿ ಯಾಗಿದ್ದು, ಆಧುನಿಕ ಯುವ ತಲೆಮಾರು ವಿದ್ಯಾಭ್ಯಾಸ, ತಂತ್ರಜ್ಞಾನಗಳ ಮರೆಯಲ್ಲಿ ಮಾನವೀಯತೆಯಂತಹ ಜೀವನ ಪಾಠಗಳನ್ನು ಮರೆಯುತ್ತಿರುವುದು ಸಲ್ಲದು. ತುಳುನಾಡಿನ ಆಚರಣೆ, ನಂಬಿಕೆಗಳು ಶಕ್ತಿಯುತವಾಗಿ ಸಮಗ್ರ ಸಮಾಜ ನಿರ್ಮಾಣದ ಗಟ್ಟಿತನವನ್ನು ಬೆಳೆಸಿವೆ ಎಂದು ಸೈಯ್ಯದ್‌ ಮೊಹಮ್ಮದ್‌ ಮದನಿ ತಂಙಳ್‌ ಅಲ್‌ ಬುಖಾರಿ ಮೊಗ್ರಾಲ್‌ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ನೆಟ್ಟಣಿಗೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದ ನೇತೃತ್ವದಲ್ಲಿ ಎ. 27ರಿಂದ ಮೇ 3ರ ವರೆಗೆ ನಡೆಯಲಿರುವ ವಾರ್ಷಿಕ ಶ್ರೀ ಭೂತಬಲಿ ಉತ್ಸವ, ಅತಿರುದ್ರ ಮಹಾಯಾಗ ಮತ್ತು 12 ವರ್ಷಗಳಿಗೊಮ್ಮೆ ಬಂಟಮಲೆ ವನ ಪ್ರದೇಶದಲ್ಲಿರುವ ಐತಿಹಾಸಿಕ ಜಾಂಬ್ರಿ ಗುಹಾ ಪ್ರವೇಶ ಸಮಾರಂಭದ ಅಂಗವಾಗಿ ಬೆಳ್ಳೂರು ಸಮೀಪದ ನೂಂಜ  ಮೊಹಿಯುದ್ದೀನ್‌ ಜುಮಾ ಮಸೀದಿಗೆ ನೆಟ್ಟಣಿಗೆ ಶ್ರೀ ಕ್ಷೇತ್ರದ ಆಡಳಿತ ಮೊಖೆ¤àಸರರ ಸಹಿರೈಸಿ ಅವರು ಮಾತನಾಡಿದರು.

ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಅಬ್ದುಲ್ಲ ಬಾನಕಂಡಂ, ಉಪಾಧ್ಯಕ್ಷ ಮೊದು ಮೌಲವಿ, ಕಾರ್ಯದರ್ಶಿ ಮೂಸಾನ್‌ ನೇಜಿಕಾರ್‌, ಇಬ್ರಾಹಿಂ ಹಾಜಿ ಅಡ್ಕಾರ್ ಮಜಾಲ್‌, ಇಬ್ರಾಹಿಂ ಕಾನಂ, ನೆಟ್ಟಣಿಗೆ ಕ್ಷೇತ್ರದ ಆಡಳಿತ ಮೊಖೆ¤àಸರ ಎಂ.ದಾಮೋದರ ಮಣಿಯಾಣಿ ನಾಕೂರು, ಪ್ರವೇಶೋತ್ಸವ ಸಮಿತಿ ಸಂಚಾಲಕ ಮಾಧವ ನೆಟ್ಟಣಿಗೆ, ಸ್ವಾಗತ ಸಮಿತಿ ಸಂಚಾಲಕ ಲಕ್ಷಿನಾರಾಯಣ ರೈ, ಆಹಾರ ಸಮಿತಿ ಸಂಚಾಲಕ ಪ್ರಶಾಂತ್‌ ಭಟ್‌ ಮುಳ್ಳಂಕೊಚ್ಚಿ, ನವೀನ್‌ ಫೋಕ್ಸ್‌ ಸ್ಟಾರ್‌ ಈ ಸಂದರ್ಭ ಉಪಸ್ಥಿತರಿದ್ದರು.

ಮಸೀದಿ ಸಮಿತಿಯ ಪದಾಧಿಕಾರಿಗಳು ಜಾಂಬ್ರಿ ಗುಹಾ ಪ್ರವೇಶ ಸಹಿತ ಎಲ್ಲ ಕಾರ್ಯಕ್ರಮಗಳಿಗೆ ಪೂರ್ಣ ಬೆಂಬಲ ವ್ಯಕ್ತಪಡಿಸಿ ಅಗತ್ಯ ನೆರವು ನೀಡುವ ಭರವಸೆ ನೀಡಿ, ಹಾರೈಸಿದರು.

Advertisement

Udayavani is now on Telegram. Click here to join our channel and stay updated with the latest news.

Next