ಅಂತಿಮ ಕ್ಷಣದಲ್ಲಿ ಕರಗ ಹೊರುವ ಪೂಜಾರಿಯೇ ಬದಲಾಗಿ ಮನು ಬದಲಿಗೆ ಜ್ಞಾನೇಂದ್ರ ಎಂಬುವರು ಕರಗ ಹೊತ್ತಿದ್ದು, ನಸುಕಿನ 3.30ರ ನಂತರ ದೇವಾಲಯದಿಂದ ಕರಗ ಹೊರಡಿದ್ದು ಭಕ್ತರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ರೀತಿಯ ಘಟನೆಯ ಅಪರೂಪದ ಎಂದು ಹೇಳಲಾಗುತ್ತಿದ್ದು ಕಾರಣವೇನು ಎಂಬ ಪ್ರಶ್ನೆಗಳು ಮೂಡಿವೆ.
Advertisement
ಕಳೆದ ಎಂಟು ದಿನಗಳಿಂದ ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗಿಯಾಗಿದ್ದ ಅರ್ಚಕ ಎನ್.ಮನು ಅವರು ಕರಗ ಹೊರಲು ಶನಿವಾರ ತಡರಾತ್ರಿ 1.30ರ ಸುಮಾರಿಗೆ ದೇವಸ್ಥಾನ ಪ್ರವೇಶಿಸಿದ್ದಾರೆ. ಆದರೆ, ಎರಡು ಗಂಟೆ ಕಳೆದರೂ ಅವರು ಕರಗ ಹೊತ್ತು ದೇವಾಲಯದಿಂದ ಹೊರಬಂದಿಲ್ಲ. ಆದರೆ, ನುಸುಕಿನ 3.50ರ ಸುಮಾರಿಗೆ ದೇವಸ್ಥಾನದಿಂದ ಕರಗ ಹೊತ್ತು ಹೊರಬಂದಿದ್ದು ಮನು ಅಲ್ಲ, ಜ್ಞಾನೇಂದ್ರ ಎಂದು ಹೇಳಲಾಗುತ್ತಿದೆ.
Related Articles
Advertisement
-ವಾರದಿಂದ ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗಿಯಾಗಿದ್ದ ಮನು-ಮನು ಬದಲಿಗೆ ಕರಗ ಹೊತ್ತು ಹೊರಬಂದ ಜ್ಞಾನೇಂದ್ರ
-ಅಪರೂಪದ ಘಟನೆಗೆ ಸಾಕ್ಷಿಯಾದ ಜಗತøಸಿದ್ಧ ಕರಗ ಮಹೋತ್ಸವ
-ಅರ್ಚಕ ಬದಲಾಗಲು ಕಾರಣವೇನು ಎಂಬ ಗೊಂದಲದಲ್ಲಿ ಭಕ್ತರು
-ಸೋಮವಾರ ಎಲ್ಲ ಗೊಂದಲ ಬಗೆಹರಿಸುವುದಾಗಿ ಹೇಳಿದ ಸಮಿತಿ
-1.30 (ರಾತ್ರಿ): ದೇವಸ್ಥಾನ ಪ್ರವೇಶಿಸಿದ ಅರ್ಚಕ ಎನ್.ಮನು
-3.50 (ನಸುಕು): ದೇವಸ್ಥಾನದಿಂದ ಕರಗ ಹೊತ್ತು ಹೊರಬಂದ ಜ್ಞಾನೇಂದ್ರ ಕರಗ ಹೊರಲು ಮನು ಅವರು ಮಾನಸಿಕವಾಗಿ ಸಿದ್ಧರಾಗಿರಲಿಲ್ಲ. ಆದ ಕಾರಣ ಜ್ಞಾನೇಂದ್ರ ಅವರು ಕರಗ ಹೊತ್ತಿದ್ದಾರೆ. ಇದೇ ಕಾರಣದಿಂದಾಗಿ ದೇವಾಲಯದಿಂದ ಕರಗ ಹೊರಡುವುದು ಸಹ ತಡವಾಯಿತು.
-ಪಿ.ಆರ್.ರಮೇಶ್, ವಿಧಾನ ಪರಿಷತ್ ಸದಸ್ಯ