Advertisement

ವಿಂಡೀಸ್ ಕ್ರಿಕೆಟಿಗ ಒಶಾನೆ ಥೋಮಸ್ ಇದ್ದ ಕಾರು ಭೀಕರ ಅಪಘಾತ

11:02 AM Feb 19, 2020 | keerthan |

ಜಮೈಕಾ: ವೆಸ್ಟ್ ಇಂಡೀಸ್ ವೇಗಿ ಒಶಾನೆ ಥೋಮಸ್ ಅವರಿದ್ದ ಕಾರು ಅಪಘಾತವಾಗಿದ್ದು, ಥೋಮಸ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಜಮೈಕಾದ ಸೈಂಟ್ ಕ್ಯಾಥರಿನ್ ನ ರಾಷ್ಟ್ರೀಯ ಹೆದ್ದಾರಿ 2000ರಲ್ಲಿ ರವಿವಾರ ಈ ಅಪಘಾತ ನಡೆದಿದೆ ಎನ್ನಲಾಗಿದೆ. ಕೂಡಲೇ ಅವರನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಅಪಘಾತದಲ್ಲಿ ಗಾಯಗೊಂಡಿರುವ ವೆಸ್ಟ್ ಇಂಡೀಸ್ ಮತ್ತು ಜಮೈಕಾದ ವೇಗಿ ಒಶಾನೆ ಥೋಮಸ್ ಅವರು ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತೇವೆ ಎಂದು ವೆಸ್ಟ್ ಇಂಡೀಸ್ ಆಟಗಾರರ ಒಕ್ಕೂಟ ಹೇಳಿದೆ.

23ರ ಹರೆಯದ ಒಶಾನೆ ಥೋಮಸ್ ವಿಂಡೀಸ್ ಪರವಾಗಿ 20 ಏಕದಿನ ಮತ್ತು 10 ಟಿ20 ಪಂದ್ಯಗಳನ್ನಾಡಿದ್ದಾರೆ. ಮುಂಬರುವ ಐಪಿಎಲ್ ನಲ್ಲಿ ಥೋಮಸ್ ರಾಜಸ್ಥಾನ ರಾಯಲ್ಸ್ ಪರವಾಗಿ ಆಡಲು ಸಜ್ಜಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next