Advertisement

Smile Pinki: ಆಸ್ಕರ್ ಪ್ರಶಸ್ತಿ ವಿಜೇತ ‘ಸ್ಮೈಲ್ ಪಿಂಕಿ’ ಕಲಾವಿದೆ ಮನೆ ಕೆಡವಲು ನೋಟಿಸ್

10:49 AM Sep 30, 2023 | Team Udayavani |

ಉತ್ತರ ಪ್ರದೇಶ: ಆಸ್ಕರ್ ಪ್ರಶಸ್ತಿ ವಿಜೇತೆ ‘ಸ್ಮೈಲ್ ಪಿಂಕಿ’ ಖ್ಯಾತಿಯ ಕಲಾವಿದೆ ಪಿಂಕಿ ಸೋಂಕರ್ ಅವರ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿರುವ ಮನೆ ಕೆಡವಲು ಅರಣ್ಯ ಇಲಾಖೆ ನೋಟಿಸ್ ನೀಡಿದೆ.

Advertisement

ಪಿಂಕಿಯ ಜೀವನವನ್ನು ಆಧರಿಸಿದ ಸ್ಮೈಲ್ ಪಿಂಕಿ ಸಾಕ್ಷ್ಯಚಿತ್ರವು 2008 ರಲ್ಲಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಅಕ್ರಮ ಅಸ್ತಿ ಹೊಂದಿರುವ ವಿಚಾರವಾಗಿ ಪಿಂಕಿ ಜೊತೆಗೆ ಆ ಗ್ರಾಮದಲ್ಲಿ ವಾಸಿಸುವ ಸುಮಾರು 30 ಕುಟುಂಬಗಳಿಗೆ ಅರಣ್ಯ ಇಲಾಖೆ ನೋಟಿಸ್ ನೀಡಿದೆ.

ಪಿಂಕಿ ಮಿರ್ಜಾಪುರ ಜಿಲ್ಲೆಯ ರಾಂಪುರ ಧಾಭಿ ಗ್ರಾಮದ ನಿವಾಸಿ. ಪಿಂಕಿ ಹಾಗೂ ಇತರ ಕೆಲವು ಗ್ರಾಮಸ್ಥರು ಮನೆ ಕಟ್ಟಿಕೊಂಡಿದ್ದ ಜಮೀನು ಅರಣ್ಯ ಇಲಾಖೆಗೆ ಸೇರಿದ್ದು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಈ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಪಿಂಕಿಯ ತಂದೆ, ಮನೆ ನಿರ್ಮಾಣ ಮಾಡುವಾಗ ಈ ಜಾಗ ಅರಣ್ಯ ಇಲಾಖೆಗೆ ಸೇರಿದ್ದು ಎಂದು ಗ್ರಾಮಸ್ಥರಿಗೆ ಹೇಳಿರಲಿಲ್ಲ ಎಂದು ಹೇಳಿದ್ದಾರೆ.

ಅಲ್ಲದೆ ಪಿಂಕಿ ಸೋಂಕರ್ ಅವರ ಸಾಕ್ಷ್ಯಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಜಮೀನು ನೀಡಿದ್ದಾರೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಮನೆ ಕೆಡಹುವ ಕುರಿತು ನೋಟಿಸ್ ಪರಿಶೀಲಿಸಲು ಸಮಿತಿಯನ್ನು ರಚಿಸಲಾಗಿದ್ದು, ನ್ಯಾಯಯುತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮಿರ್ಜಾಪುರ ಜಿಲ್ಲಾಧಿಕಾರಿ ಪ್ರಿಯಾಂಕಾ ನಿರಂಜನ್ ಹೇಳಿದ್ದಾರೆ. ತಾರ್ಕಿಕ ಮತ್ತು ನ್ಯಾಯಸಮ್ಮತ ಪರಿಹಾರದ ಮೂಲಕ ಸಮಸ್ಯೆ ಬಗೆಹರಿಸಲಾಗುವುದು ಎಂದು ತಿಳಿಸಿದ ಜಿಲ್ಲಾಧಿಕಾರಿ, ಯಾರಿಗೂ ತೊಂದರೆಯಾಗದಂತೆ ಸಮಸ್ಯೆ ಬಗೆಹರಿಸವಂತೆ ಕಂದಾಯ ಹಾಗೂ ಅರಣ್ಯ ಇಲಾಖೆಗಳಿಗೆ ತಿಳಿಸಿದ್ದಾರೆ.

Advertisement

ಇದನ್ನೂ ಓದಿ: Viral: ಶಾಲೆಯಲ್ಲೇ ಶಿಕ್ಷಕಿಯರ ರೀಲ್ಸ್, ವಿದ್ಯಾರ್ಥಿಗಳು ಶೇರ್ ಮಾಡಬೇಕಂತೆ, ಇಲ್ಲದಿದ್ದರೆ…

Advertisement

Udayavani is now on Telegram. Click here to join our channel and stay updated with the latest news.

Next