Advertisement

ಅಫ್ಘಾನ್ ಗೆ ಮರಳಿದ ಒಸಾಮ ಬಿನ್ ಲಾಡೆನ್ ಆಪ್ತ ಅಮಿನ್ ಉಲ್ ಹಖ್

03:57 PM Aug 30, 2021 | Team Udayavani |

ಕಾಬೂಲ್: ಅಫ್ಘಾನಿಸ್ಥಾನ ದೇಶವನ್ನು ತಾಲಿಬಾನ್ ಸಂಘಟನೆ ವಶಕ್ಕೆ ಪಡೆದ ಕೆಲ ದಿನಗಳ ಬಳಿಕ ಅಲ್ ಖೈದಾ ನಾಯಕ, ಒಸಾಮ ಬಿನ್ ಲಾಡೆನ್ ಆಪ್ತ ಅಮಿನ್ ಉಲ್ ಹಖ್ ಮರಳಿ ಅಫ್ಘಾನಿಸ್ಥಾನಕ್ಕೆ ಬಂದಿದ್ದಾರೆ ಎಂದು ವರದಿ ತಿಳಿಸಿದೆ.

Advertisement

ಅಲ್ ಖೈದಾ ಸಂಘಟನೆಯ ಮಾಜಿ ಮುಖ್ಯಸ್ಥ ಒಸಾಮ ಬಿನ್ ಲಾಡೆನ್ ಗೆ ಅಮಿನ್ ಉಲ್ ಹಖ್ ಆಪ್ತನಾಗಿದ್ದ. ಒಸಾಮ ಬಿನ್ ಲಾಡನ್ ರನ್ನು ಅಮೆರಿಕ ಸೈನ್ಯವು 2011ರಲ್ಲಿ ಪಾಕಿಸ್ಥಾನದಲ್ಲಿ ಹತ್ಯೆ ಮಾಡಿತ್ತು.

ಇದನ್ನೂ ಓದಿ:ನಿಮ್ಮ ಆಂತರಿಕ ಜಗಳಕ್ಕೆ ಅಫ್ಘಾನಿಸ್ತಾನವನ್ನು ಎಳೆದು ತರಬೇಡಿ: ಭಾರತ, ಪಾಕ್ ಗೆ ತಾಲಿಬಾನ್

ಅಮೀನ್-ಉಲ್-ಹಕ್ ತೊರಾ ಬೋರಾದಲ್ಲಿ ಒಸಾಮಾ ಬಿನ್ ಲಾಡೆನ್‌ನ ಭದ್ರತೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ. 80 ರ ದಶಕದಲ್ಲಿ ಮಕ್ತಾಬಾ ಅಖಿದ್‌ಮತ್‌ ನಲ್ಲಿ ಅಬ್ದುಲ್ಲಾ ಅಜಾಮ್‌ ನೊಂದಿಗೆ ಕೆಲಸ ಮಾಡಿದಾಗ ಆತನಿ ಒಸಾಮಾ ಬಿನ್ ಲಾಡೆನ್‌ ಗೆ ಆಪ್ತ ಅಮಿನ್ ಉಲ್ ಹಖ್ ಹತ್ತಿರವಾಗಿದ್ದ.

Advertisement

ತಾಲಿಬಾನ್ ಹೊಸ ಕಾನೂನು: ಅಫ್ಘಾನಿಸ್ತಾನ್ ದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ತಾಲಿಬಾನ್ ಹಂತ ಹಂತವಾಗಿ ಷರಿಯಾ ಕಾನೂನನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತಿದೆ.

ಭಾನುವಾರವಷ್ಟೆ ಹುಡುಗ-ಹುಡುಗಿಯರು ಒಟ್ಟಿಗೆ ಕಲಿಯುವುದಕ್ಕೆ ನಿರ್ಬಂಧ ಹೇರಿರುವ ತಾಲಿಬಾನ್ ಇಂದು( ಆ.30) ವಿದ್ಯಾರ್ಥಿನಿಯರಿಗೆ ಪುರುಷ ಶಿಕ್ಷಕ ಪಾಠ ಮಾಡುವಂತಿಲ್ಲ ಎಂದು ಆದೇಶ ಹೊರಡಿಸಿದೆ. ಮಹಿಳೆಯರು ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ನಡೆಸಲು ತಾಲಿಬಾನ್ ಅವಕಾಶ ನೀಡಿದೆ. ಆದರೆ, ಹೊಸ ನಿಯಮಗಳ ಅಡಿಯಲ್ಲಿ ಯುವಕ ಮತ್ತು ಯುವತಿಯರು ಒಟ್ಟಿಗೆ ಕಲಿಕೆಯಲ್ಲಿ ಭಾಗಿಯಾಗಲು ಅವಕಾಶ ಇರುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next