ಪ್ಯಾರಿಸ್: ಯಾಕೋ ಜಪಾನಿನ ಪ್ರಖ್ಯಾತ ಮಹಿಳಾ ಟೆನಿಸ್ ತಾರೆ ನವೋಮಿ ಒಸಾಕಗೆ ಗ್ರಹಚಾರ ಸರಿಯಿದ್ದಂತಿಲ್ಲ. ಇತ್ತೀಚೆಗೆ ಸತತವಾಗಿ ಹಲವಾರು ನೋವಿನ ವಿಚಾರಗಳನ್ನೇ ಕೇಳುತ್ತಿರುವ ಅವರು, ಹೊಸತಾಗಿ ಮತ್ತೂಂದು ಬೇಸರಕ್ಕೆ ಮುಖಾಮುಖೀ ಯಾಗಿ ದ್ದಾರೆ. 2018ರ ನಂತರ ಇದೇ ಮೊದಲ ಬಾರಿಗೆ ವಿಶ್ವ ಅಗ್ರ 10ರ ಶ್ರೇಯಾಂಕದಿಂದ ಹೊರಬಿದ್ದಿದ್ದಾರೆ. ಇದಕ್ಕೆಲ್ಲ ಕಾರಣ, ಆಕೆ ಸತತವಾಗಿ ಟೆನಿಸ್‌ನಿಂದ ಬಿಡುವು ತೆಗೆದುಕೊಳ್ಳುತ್ತಲೇ ಹೋದದ್ದು.
ಈ ಬಾರಿ ಟೋಕ್ಯೊ ಒಲಿಂಪಿಕ್ಸ್ ಯಶಸ್ವಿಯಾಗಿ ಮುಕ್ತಾಯವಾಗಿದ್ದು ಎಲ್ಲರಿಗೂ ಗೊತ್ತಿದೆ. ಜಪಾನಿನವರೇ ಆದ ನವೋಮಿ ಒಸಾಕ ಚಿನ್ನ ಗೆಲ್ಲುತ್ತಾರೆಂಬ ನಿರೀಕ್ಷೆಯಿತ್ತು. ಅದು ಹುಸಿಯಾಯಿತು. ಅದು ಅವರಿಗೆ ಎದುರಾದ ದೊಡ್ಡ ಆಘಾತ. ಇವೆಲ್ಲ ಶುರುವಾಗಿದ್ದು ಬಹಳ ಮುನ್ನ. ಟೋಕ್ಯೊ ಒಲಿಂಪಿಕ್ಸ್ ಸಂಘಟನಾ ಸಮಿತಿ ಅಧ್ಯಕ್ಷರಾಗಿದ್ದ ಯೊಶಿರೊ ಮೊರಿ; ಸಮಿತಿಯ ಮಹಿಳಾ ಸದಸ್ಯರನ್ನು ಸಭೆಯೊಂದರಲ್ಲಿ ಆಡಿಕೊಂಡಿದ್ದರು.
ಇದನ್ನೂ ಓದಿ:ಪ್ಲೇ ಆಫ್: ಒಂದು ಸ್ಥಾನಕ್ಕೆ ನಾಲ್ಕು ತಂಡಗಳ ರೇಸ್
ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಒಸಾಕ ಅದನ್ನು ಟೀಕಿಸಿದ್ದರು. ಅದಾದ ಮೇಲೆ ಮೊರಿ ಸಮಿತಿಗೆ ರಾಜೀನಾಮೆ ನೀಡಿದ್ದರು. ಅಲ್ಲಿಂದ ವಿವಾದ ಶುರುವಾಯಿತು. ಮುಂದೆ ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾéಮ್‌ನಿಂದ ಹೊರಬಿದ್ದರು. ವಿಂಬಲ್ಡನ್ ನಿಂದಲೂ ಹಿಂದೆ ಸರಿದರು. ಫ್ರೆಂಚ್ ಓಪನ್ ನಲ್ಲಿ ಪತ್ರಕರ್ತರ ಜೊತೆಗೆ ಮಾತನಾಡುವುದಿಲ್ಲ ಎಂಬ ಕಾರಣದಿಂದ ಹಿಂದೆ ಸರಿದರು. ಅದು ಗಲಾಟೆಗೆ ಕಾರಣವಾಯಿತು. ಆಮೇಲೆ ಟೋಕೊÂ ಒಲಿಂಪಿಕ್ಸ್ ಕಾರಣ ನೀಡಿ, ವಿಂಬಲ್ಡನ್ ತ್ಯಜಿಸಿದ್ದರು.
ಒಲಿಂಪಿಕ್ಸ್ ಮುಗಿದ ಮೇಲೆ ಯುಎಸ್ ಓಪನ್ ಆಡಿ, ಅಲ್ಲೂ ಸೋತರು. ಕಡೆಗೆ ಸದ್ಯ ಟೆನಿಸ್ ಆಡುವುದಿಲ್ಲ, ವಿಶ್ರಾಂತಿ ಪಡೆಯುತ್ತೇನೆ ಎಂದು ಘೋಷಿಸಿದರು. ಅದರ ಪರಿಣಾಮ ಈಗ ವಿಶ್ವ ನಂ.12ನೇ ಸ್ಥಾನಕ್ಕೆ ಕುಸಿದಿದ್ದಾರೆ.