Advertisement
10ನೇ ತರಗತಿ ವಿದ್ಯಾರ್ಥಿಗಳ ಹೆತ್ತವರನ್ನು ಕುರ್ಚಿಯಲ್ಲಿ ಕುಳ್ಳಿರಿಸಿ ಅವರಿಗೆ ಸಂಸ್ಥೆಯ ಸಂಚಾಲಕ ಗಿರೀಶ್ ಕೆ.ಎಚ್. ಮತ್ತು ಉಷಾ ಜಿ. ದಂಪತಿ ಹೂಹಾರ ಹಾಕಿದರು. ಬಳಿಕ ಹೆತ್ತವರಿಗೆ ಆರತಿ ಬೆಳಗಿಸಿ ವಿದ್ಯಾರ್ಥಿಗಳು ಕೆಲವು ಹೊತ್ತು ತಂದೆ-ತಾಯಿಯ ಮಡಿಲಿನಲ್ಲಿ ತಲೆಯಿಟ್ಟು ಕ್ಷಮಾಭಾವನೆ ತೋರಿದಾಗ ವಿದ್ಯಾರ್ಥಿಗಳ ಜತೆ ಹೆತ್ತವರೂ ಬಾವುಕರಾದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಗಣಪತಿ ಗಜಾನನ ಶಾಸ್ತ್ರಿ ಮಾತನಾಡಿ, ಪೂರ್ವಜರು ಕಾಣಿಕೆಯಾಗಿ ನೀಡಿರುವ ಮೂಲ ಸಂಸ್ಕೃತಿ, ಸಂಸ್ಕಾರವನ್ನು ಮರೆ ಯುವುದು ಬೇಡ. ಅದನ್ನು ನೆನಪಿಸುವ ಮತ್ತು ಪುನರ್ ಸ್ಥಾಪಿಸುವ ಕಾರ್ಯ ಶ್ಲಾಘನೀಯ. ಸಂಸ್ಕಾರ ಬಂಬಿಸುವ ಇಂತಹ ಕಾರ್ಯಕ್ರಮ ಎಲ್ಲ ವಿದ್ಯಾಸಂಸ್ಥೆ ಗಳಲ್ಲಿ ನಡೆಯುಂತಾಗಲಿ ಎಂದರು. ಕುಕ್ಕೇಡಿ ಗ್ರಾ.ಪಂ. ಅಧ್ಯಕ್ಷೆ ತೇಜಾಕ್ಷಿ, ನಾರಾವಿ ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್, ಅಳದಂಗಡಿ ಜಿ.ಪಂ. ಸದಸ್ಯ ಶೇಖರ ಕುಕ್ಕೇಡಿ, ವೇಣೂರು ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಸುಂದರ ಹೆಗ್ಡೆ ಬಿ.ಇ., ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎ. ಜಯರಾಮ ಶೆಟ್ಟಿ, ವೇಣೂರಿನ ಉದ್ಯಮಿ ಕೆ. ಭಾಸ್ಕರ ಪೈ, ಕುಕ್ಕೇಡಿ ಗ್ರಾ.ಪಂ. ಉಪಾಧ್ಯಕ್ಷ ಅಶೋಕ್ ಪಾಣೂರು, ವೇಣೂರು ಶ್ರೀ ಜೈನ ದಿಗಂಬರ ತೀರ್ಥಕ್ಷೇತ್ರ ಸಮಿತಿ ಕಾರ್ಯದರ್ಶಿ ಎಂ. ವಿಜಯರಾಜ ಅಧಿಕಾರಿ, ವೇಣೂರು ನವೋದಯ ಸಹಕಾರಿ ಬ್ಯಾಂಕ್ ವ್ಯವಸ್ಥಾಪಕ ನಿತೀಶ್ ಎಚ್., ಭಂಡಾರಿ ಸಮಾಜ ಸಂಘದ ಸುಧೀರ್ ಭಂಡಾರಿ, ಗುರುವಾಯನಕೆರೆ ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಹರೀಶ್ ಕಾರಿಂಜ, ನಾವೂರು ಗ್ರಾ.ಪಂ.ನ ಅಭಿವೃದ್ಧಿ ಅಧಿಕಾರಿ ಅಶೋಕ್ ದೇವಾಡಿಗ, ಬೆಳ್ತಂಗಡಿ ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಶನ್ ಅಧ್ಯಕ್ಷ ಸುರೇಶ್ ಕಕ್ಕಿಂಜೆ, ಗೋಳಿಯಂಗಡಿ ಕುಲಾಲರ ಸಂಘದ ಅಧ್ಯಕ್ಷ ಹರೀಶ್ ಕುಲಾಲ್, ಕುಂಡದಬೆಟ್ಟು ಮಂಜುಶ್ರೀ ಭಜನ ಮಂಡಳಿ ಅಧ್ಯಕ್ಷ ಭರತ್‌ರಾಜ್ ಕೆ., ಕುಕ್ಕೇಡಿ-ನಿಟ್ಟಡೆ ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಸದಾನಂದ ಪೂಜಾರಿ, ಗುರುವಾಯನಕೆರೆ ಬಂಟರ ಸಂಘದ ಅಧ್ಯಕ್ಷ ಎಸ್. ಜಯರಾಮ್ ಶೆಟ್ಟಿ, ವೇಣೂರು ಆಟೋ ಚಾಲಕ-ಮಾಲಕರ ಸಂಘದ ಅಧ್ಯಕ್ಷ ಆನಂದ ನಾಯ್ಕ, ನಿವೃತ್ತ ಸೈನಿಕ ರಾಮಚಂದ್ರ ನಾಯಕ್ ಮೂಂಕಾಡಿ, ವೇಣೂರು ಸ.ಪ.ಪೂ. ಕಾಲೇಜಿನ ಉಪನ್ಯಾಸಕ ವೆಂಕಟೇಶ್ ಎಸ್., ಕುಕ್ಕೇಡಿ- ನಿಟ್ಟಡೆ ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಪ್ರಶಾಂತ್ ಕೆ., ಕುಂಡದಬೆಟ್ಟು ಸ್ತ್ರೀಶಕ್ತಿ ಸಂಘದ ಅಧ್ಯಕ್ಷೆ ಸುಜಾತಾ, ಕುಕ್ಕೇಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಧರ್ಣಪ್ಪ ಪೂಜಾರಿ, ವೇಣೂರು ಮಹಿಳಾ ಮಂಡಲದ ಸ್ಥಾಪಕ ಅಧ್ಯಕ್ಷೆ ಶೈಲಜಾ ಎಸ್. ಭಟ್, ಬೆಳ್ತಂಗಡಿ ನಲ್ಕೆ ಸಂಘದ ಅಧ್ಯಕ್ಷ ಪ್ರಭಾಕರ ಶಾಂತಿಗೋಡಿ, ಕಾಮಿಡಿ ಕಿಲಾಡಿ ಖ್ಯಾತೀಯ ಅನೀಶ್ ಅಮೀನ್ ವೇಣೂರು, ಧರ್ಮಸ್ಥಳ ಗ್ರಾ.ಯೋ.ಯ ವೇಣೂರು ವಲಯ ಮೇಲ್ವಿಚಾರಕ ಯೋಗೀಶ್, ಸೇವಾಪ್ರತಿನಿಧಿ ಸುರೇಶ್ ಶೆಟ್ಟಿ, ಶಾಲೆಯ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಹರೀಶ್ ಕುಮಾರ್ ಪೊಕ್ಕಿ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಲೋಕೇಶ್, ಪ್ರಾಚಾರ್ಯ ರಕ್ಷಿತ್ ಕುಲಾಲ್, ಪ್ರೌಢಶಾಲೆ ವಿಭಾಗದ ಮುಖ್ಯ ಶಿಕ್ಷಕಿ ಉಷಾ ಜಿ., ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಅಕ್ಷತಾ, ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶೋಭಾ ಎಲ್.ಎನ್.ರಾವ್ ಮತ್ತಿತರರಿದ್ದರು.
Related Articles
Advertisement
ಅನ್ಯೋನ್ಯ ಭಾವಬೆಳ್ತಂಗಡಿಯ ವಕೀಲ ಮುರಳಿ ಬಲಿಪ ಮಾತ ನಾಡಿ, ಇಂತಹ ಕಾರ್ಯಕ್ರಮಗಳಿಂದ ಹೆತ್ತವರು ಮತ್ತು ಮಕ್ಕಳ ಮಧ್ಯೆ ಮತ್ತಷ್ಟು ಅನ್ಯೋನ್ಯ ಭಾವನೆ ಮೂಡುತ್ತದೆ ಎಂದರು.