Advertisement

ಸಂವಿಧಾನಾತ್ಮಕ ಹಕ್ಕುಗಳಿಗಾಗಿ ಸಂಘಟಿತರಾಗಿ

03:59 PM Jul 19, 2022 | Team Udayavani |

ಶಿಡ್ಲಘಟ್ಟ: ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳು ಹಾಗೂ ಅಲ್ಪ ಸಂಖ್ಯಾತರು ಸಂಘಟಿತರಾಗಿ ಸಂವಿಧಾನವನ್ನು ಉಳಿಸಿ ನ್ಯಾಯಬದ್ದ ಹಕ್ಕುಗಳಿಗಾಗಿ ಹೋರಾಟ ನಡೆಸಬೇಕೆಂದು ಮಾನವ ಬಂದುತ್ವ ವೇದಿಕೆಯ ಅಧ್ಯಕ್ಷರು ಹಾಗೂ ಶಾಸಕ ಸತೀಶ್‌ ಜಾರಕಿಹೊಳಿ ಸಲಹೆ ನೀಡಿದರು.

Advertisement

ನಗರದ ನೆಹರು ಕ್ರೀಡಾಂಗಣದಲ್ಲಿ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರ ಒಕ್ಕೂಟದ ಆಶ್ರಯದಲ್ಲಿ ಏರ್ಪಡಿಸಿದ ವಿಶ್ವಜ್ಞಾನಿ ಭೀಮೋತ್ಸವ 2022 ಹಾಗೂ ಸಂವಿಧಾನ ಜನ ಜಾಗೃತಿ ಬೃಹತ್‌ ಐಕ್ಯತಾ ಸಮಾವೇಶದಲ್ಲಿ ಮಾತನಾಡಿದರು. ಈ ದೇಶದಲ್ಲಿ ಎಸ್‌ಸಿ, ಎಸ್‌ಟಿ,ಒಬಿಸಿ ಹಾಗೂ ಅಲ್ಪಸಂಖ್ಯಾತರ ಮೇಲೆ ಅಚ್ಚೇದಿನ್‌ಬರುವ ಮೊದಲೇ ಶೋಷಣೆ ನಿರಂತರವಾಗಿನಡೆಯುತ್ತಿದೆ. ಇಡೀ ಜಗತ್ತಿನಲ್ಲಿ ಶ್ರೇಷ್ಟವಾಗಿರುವಸಂವಿಧಾನವನ್ನು ಬದಲಾವಣೆ ಮಾಡಲು ಹುನ್ನಾರ ನಡೆಸುತ್ತಿದ್ದಾರೆ ಎಂದು ದೂರಿದರು.

ಸಮಾಜದಲ್ಲಿ ಅನೇಕ ರೀತಿಯ ಕಷ್ಟಗಳನ್ನು ಅನುಭವಿಸಿ ಶ್ರೇಷ್ಠ ಸಂವಿಧಾನವನ್ನು ನೀಡಿರುವಅಂಬೇಡ್ಕರ್‌ ಅವರ ಆಶಯಗಳನ್ನು ಈಡೇರಿಸುವನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ. ಎಸ್‌ಸಿ,ಎಸ್‌ಟಿ, ಒಬಿಸಿ ಹಾಗೂ ಅಲ್ಪಸಂಖ್ಯಾತರ ಸಂಘಟಿತರಾದಾಗ ಮಾತ್ರ ಶಕ್ತಿ ಆಗಲು ಸಾಧ್ಯ ಹೀಗಾಗಿ ಎಲ್ಲರೂಒಂದಾಗಿ ಡಾ.ಬಿಆರ್‌ ಅಂಬೇಡ್ಕರ್‌ ಬಸವಣ್ಣ,ಟಿಪ್ಪುಸುಲ್ತಾನ್‌ ಅವರ ಜಯಂತಿಗಳನ್ನು ಆಚರಣೆಮಾಡಿ ಜಾತಿ ಮತ್ತು ಧರ್ಮವನ್ನು ಮೀರಿ ಮಾನವತ್ವ ಕಾಪಾಡುವ ಕೆಲಸವನ್ನು ಮಾಡಬೇಕು ಎಂದರು.

ಸಂವಿಧಾನದ ಆಶಯಗಳನ್ನು ಚಿಂತಿಸುವ, ಮನವರಿಕೆ ಮಾಡುವ ಸಲುವಾಗಿ ಪ್ರತಿಯೊಂದುತಾಲೂಕು ಮತ್ತು ಗ್ರಾಮಗಳಲ್ಲಿ ಭೀಮೊತ್ಸವಕಾರ್ಯಕ್ರಮವನ್ನು ಆಯೋಜಿಸಿ ಜನರನ್ನುಜಾಗೃತಿಗೊಳಿಸುವ ಕೆಲಸವನ್ನು ಮಾಡಬೇಕು. ಶಾಂತಿಸೌಹಾರ್ದತೆ ಪ್ರೀತಿ ವಿಶ್ವಾಸವನ್ನು ಬೆಳೆಸುವ ಕೆಲಸವನ್ನು ಮಾಡಬೇಕು. ಈ ನಿಟ್ಟಿನಲ್ಲಿಶಿಡ್ಲಘಟ್ಟ ತಾಲೂಕಿನಲ್ಲಿ ಒಂದು ಐತಿಹಾಸಿಕಕಾರ್ಯಕ್ರಮವನ್ನು ಆಯೋಜನೆ ಮಾಡಿರುವುದಕ್ಕೆ ಸಂಘಟಕರನ್ನು ಅಬಿನಂದಿಸಿದರು.

ಮೈಸೂರಿನ ಊರಲಿಂಗ ಪೆದ್ದಿಮಠದ ಶ್ರೀ ಜ್ಞಾನಪ್ರಕಾಶ್‌ ಸ್ವಾಮೀಜಿ, ಮಾಜಿ ಕೇಂದ್ರ ಸಚಿವಕೆ.ಹೆಚ್‌. ಮುನಿಯಪ್ಪ, ದಸಂಸ ಮುಖಂಡವೆಂಕಟೇಶ್‌, ನಗರಸಭೆಯ ಅಧ್ಯಕ್ಷೆ ಸುಮಿತ್ರಾರಮೇಶ್‌, ಪ್ರಗತಿಪರ ಚಿಂತಕ ಮೊಹಮ್ಮದ್‌ ಕಾಸಿಂ,ಎಬಿಡಿ ಗ್ರೂಪ್‌ ಅಧ್ಯಕ್ಷ ರಾಜೀವ್‌ಗೌಡ, ಆಂಜಿನಪ್ಪ,ಅಲ್ಪಸಂಖ್ಯಾತರ ಒಕ್ಕೂಟದ ಮುಖಂಡ ಮೇಲೂರುಮಂಜುನಾಥ್‌, ವೆಂಕಟೇಶ್‌, ನಾಗನರಸಿಂಹ, ಜಿಪಂಮಾಜಿ ಸದಸ್ಯ ಎನ್‌.ಮುನಿಯಪ್ಪ, ಕೆಸಿ ರಾಜಾಕಾಂತ್‌, ಬಂಕ್‌ ಮುನಿಯಪ್ಪ, ಜಾಮಿಯಾ ಮಸೀದಿಯ ಕಾರ್ಯದರ್ಶಿ ಸೈಯದ್‌ ಸಲಾಂ, ಎಚ್‌,ಎಸ್‌ ಫಯಾಜ್‌, ಚಲಪತಿ, ಮುನೀಂದ್ರ, ಮುತ್ತೂರು ವೆಂಕಟೇಶ್‌, ಅಣ್ಯಪ್ಪ, ಗಿರೀಶ್‌, ಮುನಿರಾಜು (ಕಿಟ್ಟಿ), ಮುನಿನರಸಿಂಹ, ಕೃಷ್ಣಮೂರ್ತಿ ಇತರರಿದ್ದರು.

Advertisement

ಮತದಾನದ ಹಕ್ಕನ್ನು ಮಾರಿಕೊಳ್ಳದಿರಿ: ಸ್ವಾಮೀಜಿ :

ಮತವನ್ನು ಮಾರಿಕೊಂಡರೆ ಪತ್ನಿ ಮತ್ತು ಮಗಳನ್ನು ಮಾರಿಕೊಳ್ಳಬೇಕಾಗುತ್ತದೆ ಎಂದು ಡಾ. ಅಂಬೇಡ್ಕರ್‌ ಅವರು ಹೇಳಿದ್ದಾರೆ. ಹೀಗಾಗಿ ಹಣದ ಆಸೆಗಾಗಿ ಯಾರು ಸಹ ಪವಿತ್ರ ಮತದಾನದ ಹಕ್ಕನ್ನು ಮಾರಾಟ ಮಾಡಿಕೊಳ್ಳಬಾರದು ಬದಲಿಗೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರುಸಂಘಟಿತರಾಗಿ ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವಂತಾಗಬೇಕು ಎಂದು ಶ್ರೀ ಜ್ಞಾನ ಪ್ರಕಾಶ್‌ ಸ್ವಾಮೀಜಿ ಸಲಹೆ ನೀಡಿದರು.

ಮೌಡ್ಯದಿಂದ ಹೊರಬನ್ನಿ :

ಈ ಸಮಾಜದಲ್ಲಿ ಒಂದು ಪ್ರಾಣಿ ನೀರಿನಲ್ಲಿ ಮುಳುಗಿದ್ದರೆ ಏನು ಆಗುವುದಿಲ್ಲ ಆದರೆ ಒಬ್ಬಮನುಷ್ಯ ನೀರಿನಲ್ಲಿ ಮುಳುಗಿದರೆ ಅದಕ್ಕೆ ಬಣ್ಣ ಕಟ್ಟುವ ಕೆಲಸ ನಡೆಯುತ್ತಿದೆ. ಜಾತಿಯ ನೆಪದಲ್ಲಿ ಆ ದೇಗುಲಗಳಲ್ಲಿ ಪ್ರವೇಶವನ್ನು ನಿರ್ಬಂಧಿಸಲಾಗುತ್ತಿದೆ. ಕುಡಿವ ನೀರು ಸಹ ಪಡೆಯಲು ಹೋರಾಟ ಮಾಡುವಂತಹ ಸ್ಥಿತಿ ಈಗಲೂ ಜೀವಂತವಾಗಿದೆ. ಮನುಷ್ಯ ಪ್ರಾಣಿಗಿಂತಕಡೆಯಲ್ಲ ಮೌಡ್ಯದಿಂದ ಹೊರಬಂದು ನವಸಮಾಜ ನಿರ್ಮಿಸಬೇಕು ಎಂದು ಶಾಸಕ ಸತೀಶ್‌ ಜಾರಕಿಹೊಳಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next