Advertisement

ಸಂಘಟಿತರಾಗಿ ಸರ್ಕಾರಿ ಸೌಲಭ್ಯ ಪಡೆಯಿರಿ: ಮಾದೇಶ

06:28 AM Jan 11, 2019 | Team Udayavani |

ಚಿತ್ತಾಪುರ: ಕೊರಮ ಸಮಾಜದವರೆಲ್ಲ ಒಗ್ಗೂಡಿದಾಗ ಮಾತ್ರ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಅಖೀಲ ಕರ್ನಾಟಕ ಕೊರಮ ಸಮಾಜದ ರಾಜ್ಯ ಘಟಕ ಅಧ್ಯಕ್ಷ ಜಿ. ಮಾದೇಶ ಹೇಳಿದರು.

Advertisement

ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕು ಕೊರಮ (ಭಜಂತ್ರಿ) ಸಮಾಜದಿಂದ ಕಾಯಕಯೋಗಿ ನೂಲಿಯ ಚಂದಯ್ಯನವರ 911ನೇ ಜಯಂತ್ಯುತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಕೊರಮ ಸಮಾಜ ತಾಲೂಕು ಮಟ್ಟದ ಪ್ರಥಮ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೊರಮ ಸಮಾಜ ರಾಜಕೀಯ ಅಧಿಕಾರ, ಸಾಮಾಜಿಕ ನ್ಯಾಯ ಸೌಲಭ್ಯ ಪಡೆಯಲು ಸಮಾಜದ ಮುಖಂಡರು ಹೋರಾಟಕ್ಕೆ ಮುಂದಾಗಬೇಕು ಎಂದು ಹೇಳಿದರು.

ಶತಮಾನದಿಂದ ಸಮಾಜದ ಕೆಲಸವನ್ನು ಶ್ರದ್ಧೆ, ನಿಷ್ಠೆಯಿಂದ ಮಾಡುತ್ತಿರುವ ಕೊರಮ ಸಮಾಜ ಶೋಷಣೆಗೆ ಒಳಗಾಗಿದೆ. ಸರ್ಕಾರಿ ಸವಲತ್ತುಗಳಿಂದ ವಂಚಿತಗೊಂಡಿದೆ. ರಾಜಕೀಯ ಅಧಿಕಾರ ಇಲ್ಲದ ಕಾರಣ ಸರ್ಕಾರದಲ್ಲಿ ಧ್ವನಿ ಇಲ್ಲದ ಸಮಾಜವಾಗಿದೆ. ಸಮಾಜಕ್ಕೆ ರಾಜಕೀಯ ನ್ಯಾಯ ಒದಗಿಸಲು ಯಾರೂ ಮುಂದಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಾಮಾಜಿಕ ವ್ಯವಸ್ಥೆಯಲ್ಲಿ ವ್ಯಕ್ತಿಯ ಹುಟ್ಟಿನಿಂದ ಸಾವಿನವರೆಗೆ ಬೇಕಾದ ಸೌಲಭ್ಯ ಸೇವೆಯನ್ನು ಸಮಾಜ ನೀಡುತ್ತಿದೆ. ಆದರೆ ಕೊರಮ ಸಮಾಜವನ್ನು ಪ್ರೀತಿಯಿಂದ ಕಾಣದ ದೃಷ್ಟಿಕೋನ ಬದಲಲಾಗಬೇಕಿದೆ ಎಂದರು.

Advertisement

ಸಾನ್ನಿಧ್ಯ ವಹಿಸಿದ್ದ ದಿಗ್ಗಾಂವ ಹಿರೇಮಠದ ಶ್ರೀ ಸಿದ್ದವೀರ ಶಿವಾಚಾರ್ಯರು, ಯಳಸಂಗಿಯ ಸಿದ್ದಾರೂಢ ಮಠದ ಪರಮಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಭೀಮಣ್ಣ ಸಾಲಿ, ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ, ಎಐಬಿಎಸ್‌ ರಾಜ್ಯಾಧ್ಯಕ್ಷ ಸುಭಾಷ ರಾಠೊಡ, ಕೊರಮ ಸಮಾಜದ ಬೆಳಗಾವಿ ಜಿಲ್ಲಾಧ್ಯಕ್ಷ ರಾಮೋಜಿ ಭಜಂತ್ರಿ, ಜಿಲ್ಲಾಧ್ಯಕ್ಷ ಗಿರೀಶ ಭಜಂತ್ರಿ, ಅಖೀಲ ಕರ್ನಾಟಕ ಅಲೆಮಾರಿ ಜನಾಂಗದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಮಾನ್ಪಡೆ ಮಾತನಾಡಿದರು.

ಮಾಜಿ ಶಾಸಕ ವಾಲ್ಮೀಕಿ ನಾಯಕ ಉದ್ಘಾಟಿಸಿದರು. ತೆಂಗಿನನಾರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ನಂಜಪ್ಪ ಕಡೂರ ಅವರು ನೂಲಿ ಚಂದಯ್ಯನವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಪುರಸಭೆ ಸದಸ್ಯರಾದ ನಾಗರಾಜ ಭಂಕಲಗಿ, ವಿನೋದ ಗುತ್ತೇದಾರ, ಧರ್ಮಣ್ಣ ದೊಡ್ಡಮನಿ, ಶಾಂತಮಲ್ಲಪ್ಪ ಚಾಳೀಕಾರ, ಗೋವಿಂದರಾಜ ಭಜಂತ್ರಿ, ಹಣಮಂತ ಭಜಂತ್ರಿ, ಭಾಗೇಶ ಭಜಂತ್ರಿ, ಜಕ್ಕಣಾಚಾರಿ ಗಣಾಪುರ, ಹೊನ್ನಪ್ಪ ಮಾನ್ಪಡೆ, ಖಂಡಪ್ಪ ಭಜಂತ್ರಿ, ಸಾಬಣ್ಣ ಭಜಂತ್ರಿ, ಬಿಚ್ಚಪ್ಪ ಭಜಂತ್ರಿ ಇದ್ದರು.

ಕೊರಮ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಭಜಂತ್ರಿ ಹಲಕರ್ಟಿ ಪ್ರಾಸ್ತಾವಿಕ ಮಾತನಾಡಿದರು. ಪ್ರಕಾಶ ಭಜಂತ್ರಿ ಸ್ವಾಗತಿಸಿದರು, ಶಿಕ್ಷಕ ಈರಣ್ಣ ಚವಡಾಪುರ ನಿರೂಪಿಸಿದರು, ನೂಲಿಯ ಚಂದಯ್ಯನವರ 911ನೇ ಜಯಂತ್ಯುತ್ಸವ ನಿಮಿತ್ತ ಪಟ್ಟಣದ ನಾಗಾವಿ ವೃತ್ತದಿಂದ ಸಮಾರಂಭದ ವೇದಿಕೆವರೆಗೆ ಕಳಸ, ಕುಂಭ ಸಕಲ ಮಂಗಳ ವಾದ್ಯಮೇಳೊಂದಿಗೆ ಅದ್ಧೂರಿ ಮೆರವಣಿಗೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next