Advertisement

37ನೇ ರಾಷ್ಟ್ರೀಯ ನೃತ್ಯೋತವ್ಸ ಮಡಿಕೇರಿಯಲ್ಲಿ ಆಯೋಜನೆ

12:45 PM Jan 27, 2021 | Team Udayavani |

ಬೇಲೂರು: ನಮ್ಮ ಕಲೆ ಸಂಸ್ಖತಿಯನ್ನು ಬೆಳೆಸುವ ಉದ್ದೇಶದಿಂದ ರಾಜ್ಯದ ಹಲವು  ಭಾಗಗಳಲ್ಲಿ ಭರತನಾಟ್ಯ ಕಲೆಯನ್ನು ಪ್ರದರ್ಶಿಸಿದ್ದೇವೆ. ಅಲ್ಲದೆ, ಹೊರದೇಶದಲ್ಲೂ ನಮ್ಮ ಕಲೆ ಪ್ರಚಾರ ಪಡಿಸಲಿದ್ದು, ಇದರ ಉದ್ದೇಶ ತಳಮಟ್ಟದಲ್ಲಿರುವ ಪ್ರತಿಭಾವಂತ ಕಲಾವಿದರನ್ನು ಗುರುತಿಸಿ ಅವರನ್ನು ಮುಖ್ಯವಾಹಿನಿಗೆ ತರುವುದಾಗಿ ಎಂದು ಅಂತಾರಾಷ್ಟ್ರೀಯ ಭರತನಾಟ್ಯ ಕಲಾವಿದೆ ವಿದೂಷಿ ಡಾ.ಸ್ವಾತಿ ಪಿ. ಭಾರದ್ವಾಜ್‌ ಹೇಳಿದರು.

Advertisement

ಇದನ್ನೂ ಓದಿ:FAU-G ಭಾರತದಲ್ಲಿ ಬಿಡುಗಡೆಯಾಗಿದೆ. ಭಾರತದಲ್ಲಿ PUBGಯ ಭವಿಷ್ಯ..?

ಪಟ್ಟಣದಲ್ಲಿ ನಡೆದ ನೃತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಈಗಾಗಲೇ 36ನೇ ಅಂತಾರಾಷ್ಟ್ರೀಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಮುಂದೆ ಮಡಿಕೇರಿಯಲ್ಲಿ 37ನೇ ಕಾರ್ಯಕ್ರಮ ಆಯೋಜಿಸುವುದರ ಜೊತೆಗೆ ದೇಶದ ಹಲವು ಭಾಗಗಳಿಂದ ಕಲಾವಿದರನ್ನು ಕರೆತಂದು ದೇವಾಲಯದ ಒಳ ಪ್ರಾಂಗಣದಲ್ಲಿ ವಿಶೇಷ ಶಾಂತಲ ನೃತ್ಯವೈಭವವನ್ನು ಪ್ರದರ್ಶಿಸಲಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next