Advertisement
ನಗರದ ಅರಮನೆಯಲ್ಲಿ ಶುಕ್ರವಾರ ಆರಂಭಗೊಂಡ ಮೂರು ದಿನಗಳ ಸಾವಯವ ಮತ್ತು ಸಿರಿಧಾನ್ಯಗಳ ಅಂತಾರಾಷ್ಟ್ರೀಯ ವಾಣಿಜ್ಯ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ರಾಜ್ಯದ ಪ್ರಯತ್ನಕ್ಕೆ ಕೇಂದ್ರ ಕೂಡ ಸ್ಪಂದಿಸಿದೆ. 2018ನ್ನು ರಾಷ್ಟ್ರೀಯ ಸಿರಿಧಾನ್ಯಗಳ ವರ್ಷವನ್ನಾಗಿ ಘೋಷಿಸಲು ಈಗಾಗಲೇ ನಿರ್ಧರಿಸಿದ್ದು, ಇದಕ್ಕೆ ಕೇಂದ್ರ ಕೃಷಿ ಸಚಿವರು ಅನುಮತಿ ನೀಡಿದ್ದಾರೆ’ ಎಂದು ಹೇಳಿದರು.
Related Articles
Advertisement
ವಿಪುಲ ಅವಕಾಶ- ಸಿಎಂ: ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸಿರಿಧಾನ್ಯಗಳ ಉತ್ಪಾದನೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ದೇಶದಲ್ಲಿ ಸಿರಿಧಾನ್ಯ ಮತ್ತು ಸಾವಯವಕ್ಕೆ ಬೆಂಗಳೂರು ಅತಿ ದೊಡ್ಡ ಮಾರುಕಟ್ಟೆಯಾಗಿ ಪರಿವರ್ತನೆಯಾಗಿದೆ. ಜನರಲ್ಲಿ ಕೂಡ ಆರೋಗ್ಯದ ಬಗ್ಗೆ ಜಾಗೃತಿ ಮೂಡಿದೆ. ರಾಜಸ್ಥಾನ ಹೊರತು ಪಡಿಸಿದರೆ, ದೇಶದಲ್ಲಿ ಕರ್ನಾಟಕ ಅತಿ ಹೆಚ್ಚು ಒಣಭೂಮಿ ಹೊಂದಿರುವ ರಾಜ್ಯ. ಈ ನಿಟ್ಟಿನಲ್ಲಿ ರೈತರಿಗೆ ವಿಪುಲ ಅವಕಾಶಗಳಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಸರ್ಕಾರ ಸಾವಯವ ಮತ್ತು ಸಿರಿಧಾನ್ಯಗಳಿಗೆ ಹೆಚ್ಚು ಉತ್ತೇಜನ ನೀಡುತ್ತಿದೆ. ಇದರಿಂದ 2004ರಲ್ಲಿ ಕೇವಲ 2,500 ಹೆಕ್ಟೇರ್‌ಗೆ ಸೀಮಿತವಾಗಿದ್ದ ಸಾವಯವ ಮತ್ತು ಸಿರಿಧಾನ್ಯ ಬೆಳೆಯುವ ಪ್ರದೇಶ ಈಗ ಒಂದು ಲಕ್ಷ ಹೆಕ್ಟೇರ್‌ಗೆ ವಿಸ್ತರಿಸಿದೆ. ಸುಸ್ಥಿರ ಬೇಸಾಯಕ್ಕೆ ಈ ಪದಟಛಿತಿ ಅತ್ಯಗತ್ಯ ಎಂದರು.
ಸಿರಿಧಾನ್ಯ ವರ್ಷಕ್ಕೆ ಪ್ರಸ್ತಾವನೆ: ಕೃಷಿ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ಯುಎನ್‌ಒ ಮೂಲಕ “ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ’ ಎಂದು ಘೋಷಿಸುವಂತೆ ಈಗಾಗಲೇ ಕೇಂದ್ರಕ್ಕೆ ಮನವಿ ಮಾಡಲಾಗಿದೆ.ಕೇಂದ್ರವೂ ಇದಕ್ಕೆ ಸ್ಪಂದಿಸಿ ಯುಎನ್‌ಒಗೆ ಪ್ರಸ್ತಾವನೆ ಸಲ್ಲಿಸಿದೆ. ಅಲ್ಲದೆ, ಪಡಿತರ ವ್ಯವಸ್ಥೆಯಲ್ಲಿ ಮತ್ತು
ಬಿಸಿಯೂಟದಲ್ಲಿ ಸಿರಿಧಾನ್ಯ ವಿತರಿಸುವಂತೆಯೂ ಮನವಿ ಮಾಡಲಾಗಿದೆ ಎಂದು ತಿಳಿಸಿದರು. ಸಚಿವ ರೋಷನ್ ಬೇಗ್, ಶಾಸಕರಾದ ಬಿ.ಆರ್. ಪಾಟೀಲ್, ಅಜಯ್ ಸಿಂಗ್, ಲೆಹರ್‌ಸಿಂಗ್, ರಾಜ್ಯಮಟ್ಟದ ಸಾವಯವ ಕೃಷಿ ಉನ್ನತಮಟ್ಟದ ಸಮಿತಿ ಅಧ್ಯಕ್ಷ ಬಿ.ಸೋಮಶೇಖರ್, ಉಪಾಧ್ಯಕ್ಷ ಎಚ್.ಟಿ. ಕೃಷ್ಣೇಗೌಡ, ಕೃಷಿ ಇಲಾಖೆ ಕಾರ್ಯದರ್ಶಿ ಮಹೇಶ್ವರ ರಾವ್, ಆಯುಕ್ತ ಜಿ. ಸತೀಶ್,ನಿರ್ದೇಶಕ ಬಿ.ವೈ. ಶ್ರೀನಿವಾಸ್, ಇಕ್ರಿಸ್ಯಾಟ್
ಮಹಾನಿರ್ದೇಶಕ ಡಾ.ಡೇವಿಡ್ ಬರ್ಗಿನ್‌ಸನ್ ಮತ್ತಿತರರು ಉಪಸ್ಥಿತರಿದ್ದರು. ನಮ್ಮನೇಲೂ ಸಿರಿಧಾನ್ಯಗಳ ಅಡುಗೆ
ನಮ್ಮ ಮನೆಯಲ್ಲೂ ಇತ್ತೀಚೆಗೆ ಸಿರಿಧಾನ್ಯಗಳ ಅಡುಗೆಯನ್ನೇ ಮಾಡುತ್ತಾರೆ. ಬೆಳಿಗ್ಗೆ ಸಿರಿಧಾನ್ಯ ಮೇಳಕ್ಕೆ ಬರುವ ಮುನ್ನ ನವಣೆ ರೊಟ್ಟಿ ತಿಂದು ಬಂದೆ… ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿರಿಧಾನ್ಯಗಳ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ ರೀತಿ ಇದು. ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಜಾಗೃತಿ ಮೂಡುತ್ತಿದೆ.ಆದ್ದರಿಂದ ಸಿರಿಧಾನ್ಯಗಳಿಗೆ ಜನ ಮೊರೆಹೋಗುತ್ತಿದ್ದಾರೆ. ನಮ್ಮ ಮನೆಯಲ್ಲೂ ಇದನ್ನೇ ತಂದು ಅಡಿಗೆ ಮಾಡುತ್ತಾರೆ. ಬೆಳಿಗ್ಗೆ ಕೂಡ ನವಣೆ ರೊಟ್ಟಿ ತಿಂದು ಬಂದೆ. ಮಧುಮೇಹ ಇರುವುದರಿಂದ ಇದು ಒಳ್ಳೆಯದು ಕೂಡ. ಮೇಳದಲ್ಲಿರುವ
“ಖಾನಾವಳಿ’ಯಲ್ಲಿ ಕೂಡ ಸಿರಿಧಾನ್ಯ ಮತ್ತು ಸಾವಯವ ಉತ್ಪನ್ನಗಳಿಂದ ತಯಾರಿಸಿದ್ದ ಮಸಾಲೆ ದೋಸೆ ಮತ್ತು
ಈರುಳ್ಳಿ ದೋಸೆ ರುಚಿ ಸವಿದು ಬಂದೆ ಎಂದರು.