Advertisement

ಆದೇಶ ನೀಡಿದರೂ ಪಾಲನೆಯಾಗುತ್ತಿಲ್ಲ: ಸಚಿವರಿಂದ ತರಾಟೆ

02:08 AM Jul 02, 2020 | Sriram |

ಕುಂದಾಪುರ: ನೀರಿನ ಸಂಪರ್ಕಕ್ಕೆ ಅರ್ಜಿ ನೀಡಿ 4 ತಿಂಗಳಾದರೂ ದೊರೆಯದ ಕುರಿತಾದ ದೂರಿಗೆ ತತ್‌ಕ್ಷಣ ಸ್ಪಂದಿಸುವಂತೆ ಹೇಳಿ ವಾರ ಕಳೆದಿದ್ದರೂ ಯಾವುದೇ ಸ್ಪಂದನೆ ನೀಡಿಲ್ಲ. ಇಂತಹ ನಿರ್ಲಕ್ಷ್ಯ ಮಾಡಿದ ಗುತ್ತಿಗೆದಾರರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

Advertisement

ಬುಧವಾರ ಇಲ್ಲಿನ ಮಿನಿವಿಧಾನ ಸೌಧದಲ್ಲಿ ಸಾರ್ವಜನಿಕರಿಂದ ಅಹವಾಲು ಅವರು ಸ್ವೀಕರಿಸಿದರು.ಕಳೆದ ವಾರ ಪುರಸಭೆಯಲ್ಲಿ ಸಭೆ ನಡೆಸಿದಾಗ ಸದಸ್ಯರಿಂದಲೇ ಜಲಸಿರಿ ಯೋಜನೆ ಕುರಿತು ದೂರುಗಳು ಬಂದಿದ್ದವು. ಎಂಜಿನಿಯರ್‌ ಬಳಿ ತತ್‌ಕ್ಷಣ ಸರಿಪಡಿಸುವಂತೆ ಸೂಚಿಸಿದ್ದರೂ ನಂತರ ಗುತ್ತಿಗೆದಾರರು ಸ್ಪಂದಿಸಲಿಲ್ಲ ಎಂದು ಪುರಸಭೆ ಸದಸ್ಯ ಗಿರೀಶ್‌ ಜಿ.ಕೆ. ಅವರು ತಿಳಿಸಿದಾಗ, ಗುತ್ತಿಗೆದಾರರಿಗೆ ನೋಟಿಸ್‌ ನೀಡುವಂತೆ ಸಚಿವರು ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಅವರಲ್ಲಿ ಸೂಚಿಸಿದರು.

ತಾಲೂಕು ಕಚೇರಿಯಲ್ಲಿ ಸಮ ರ್ಪಕವಾಗಿ ಕೆಲಸ ಕಾರ್ಯಗಳು ನಡೆಯುತ್ತಿಲ್ಲ ಎಂದು ಬಿಜೆಪಿ ಜಿಲ್ಲಾ ಎಸ್‌ಸಿ ಮೋರ್ಚಾ ಅಧ್ಯಕ್ಷ ಗೋಪಾಲ ಕಳೆಂಜಿ ಆರೋಪಿಸಿದರು. ಕೋವಿಡ್-19 ಕಾರಣದಿಂದ ಸಾರ್ವಜನಿಕರ ಕೆಲಸ ಕಾರ್ಯಗಳು ನಿಧಾನವಾಗಬಾರದು ಎಂದು ಸಚಿವರು ಹೇಳಿದರು.

ತಾಲೂಕಿನಲ್ಲಿ ಪಂಜರ ಕೃಷಿ ಮೀನುಗಾರಿಕೆ ನಡೆಸಲು ಅಗತ್ಯವಿರುವ ತರಬೇತಿ ನೀಡಿ. ಈ ತಿಂಗಳಲ್ಲಿ ಕನಿಷ್ಠ 500 ಮೀನುಗಾರರಿಗೆ ಕಿಸಾನ್‌ ಕಾರ್ಡ್‌ ನೀಡಬೇಕು ಎಂದು ಮೀನುಗಾರಿಕಾ ಇಲಾಖೆಗೆ ಸೂಚಿಸಿದರು.

ಸಹಾಯಕ ಕಮಿಷನರ್‌ ಕೆ. ರಾಜು, ತಹಶೀಲ್ದಾರ್‌ ಆನಂದಪ್ಪ ನಾಯ್ಕ ಉಪಸ್ಥಿತರಿದ್ದರು.ತಾ.ಪಂ. ಸದಸ್ಯ ಕರಣ್‌ ಪೂಜಾರಿ, ಎಪಿಎಂಸಿ ನಿರ್ದೇಶಕ ಸುಧೀರ್‌ ಕುಮಾರ್‌, ಪುರಸಭೆ ಮಾಜಿ ಉಪಾಧ್ಯಕ್ಷ ರಾಜೇಶ್‌ ಕಾವೇರಿ ಉಪಸ್ಥಿತರಿದ್ದರು.

Advertisement

ಸೌಲಭ್ಯಗಳಲ್ಲಿ ಲೋಪವಾಗಬಾರದು
ಕಳೆದ 8 ತಿಂಗಳಿನಿಂದ ವೃದ್ಧಾಪ್ಯವೇತನ ಬರುತ್ತಿಲ್ಲ ಎಂಬ ದೂರುಗಳು ಬಂದಾಗ ಅಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತತ್‌ಕ್ಷಣ ಮೇಲಧಿಕಾರಿಗಳ ಗಮನಕ್ಕೆ ತಂದು ವ್ಯವಸ್ಥೆಯನ್ನು ಸರಿಪಡಿಸಬೇಕು. ಯಾವುದೇ ಕಾರಣಕ್ಕೂ ಹಿರಿಯ ನಾಗರಿಕರಿಗೆ ನೀಡುತ್ತಿರುವ ಸೌಲಭ್ಯದಲ್ಲಿ ಲೋಪವಾಗಬಾರದು.
-ಕೋಟ ಶ್ರೀನಿವಾಸ ಪೂಜಾರಿ, ಸಚಿವ

 

Advertisement

Udayavani is now on Telegram. Click here to join our channel and stay updated with the latest news.

Next