Advertisement

ಕಡ್ಡಾಯ ಮಾಸ್ಕ್ ಧರಿಸಲು ಆದೇಶ ನೀಡಿ

08:28 AM Jul 21, 2020 | Suhan S |

ಕೊರಟಗೆರೆ: ತಾಲೂಕಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಜನರು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ತಾಲೂಕು ಆಡಳಿತ ಕಡ್ಡಾಯ ಮಾಸ್ಕ್ ಧರಿಸಬೇಕೆಂದು ಆದೇಶ ಜಾರಿಗೊಳಿಸ ಬೇಕು ಎಂದು ಫ್ರೆಂಡ್ಸ್‌ ಗ್ರೂಪ್‌ ಅಧ್ಯಕ್ಷ ಕೆ.ಎನ್‌.ರವಿಕುಮಾರ್‌ ಒತ್ತಾಯಿಸಿದ್ದಾರೆ.

Advertisement

ಪಟ್ಟಣದಲ್ಲಿ ಕಳೆದ 15 ದಿನಗಳಿಂದ ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮಗಳಲ್ಲಿ ಪ್ರತಿಯೊಬ್ಬರೂ ಮಾಸ್ಕ್ ಹಾಕಿಕೊಂಡು ಓಡಾಡುವಂತೆ ಮನವಿ ಮಾಡಿ ಮಾಸ್ಕ್ ಇಲ್ಲದವರಿಗೆ ಉಚಿತ ಮಾಸ್ಕ್ ವಿತರಿಸಿ ಮಾತನಾಡಿದರು.

ಕಟ್ಟುನಿಟ್ಟಿನ ಆದೇಶ ನೀಡಿ: ಮಾಸ್ಕ್ ಜಾಥಾ ಕಾರ್ಯಕ್ರಮದ ಮೂಲಕ ಜನರಲ್ಲಿ ಅರಿವು ಮೂಡಿಸುತ್ತಿದ್ದು, ಇದರೊಂದಿಗೆ ಕೋವಿಡ್ ವೈರಸ್‌ ಹರಡುವುದನ್ನು ತಡೆಗಟ್ಟಲು ಪಟ್ಟಣದ ವರ್ತಕರು ಸ್ವಯಂ ಲಾಕ್‌ಡ್‌ನ್ ಕಳೆದ ಒಂದು ವಾರಗಳಿಗೆ ಘೋಷಿಸಿದರೂ ತಾಲೂಕಿನಲ್ಲಿ ಪ್ರತಿನಿತ್ಯ ಪ್ರಕರಣಗಳು ಹೆಚ್ಚಾಗುತ್ತಿದೆ. ಇದನ್ನು ಮನಗೊಂಡಿರುವ ತಾಲೂಕು ಆಡಳಿತ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಒಡಾಡುವಂತೆ ಕಟ್ಟುನಿಟ್ಟಿನ ಆದೇಶ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ವಿಶೇಷ ಕಾಳಜಿವಹಿಸಿ: ಜನತೆಯಲ್ಲಿ ಅರಿವು ಮೂಡಿಸಿ ಫೇಸ್‌ಮಾಸ್ಕ್ಗಳನ್ನು ಕಡ್ಡಾಯವಾಗಿ ಧರಿಸುವಂತಾಗಬೇಕು. ಕೈಗಳಿಗೆ ಸ್ಯಾನಿಟೈಸರ್‌ ಬಳಸಿ ಆಗಾಗ ಸೋಪಿನಿಂದ ಕೈಗಳನ್ನು ತೊಳೆಯಬೇಕು. ಸಾಮಾಜಿಕ ಅಂತರ ವನ್ನು ಕಾಪಾಡಲು ಗಮನಹರಿಸಬೇಕು. ಅನ ಗತ್ಯವಾಗಿ ಓಡಾಡುವುದನ್ನು ನಿಲ್ಲಿಸಬೇಕು. ವಸ್ತು ಅಥವಾ ವ್ಯಕ್ತಿಗಳನ್ನು ಅನಾವಶ್ಯಕವಾಗಿ ಮುಟ್ಟಬಾರದು. ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ಕಷಾಯ ಮತ್ತು ಬಿಸಿ ನೀರು ಕುಡಿಯಬೇಕು. ಮನೆಯಲ್ಲಿ ಚಿಕ್ಕ ಮಕ್ಕಳು, ವೃದ್ಧರ ಬಗ್ಗೆ ವಿಶೇಷ ಕಾಳಜಿವಹಿಸಿ ಎಂದು ಸಲಕೆ ನೀಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ಅನೇಕ ಮಾರ್ಗ ಸೂಚಿಗಳ ಮೂಲಕ ಕಾರ್ಯನಿರ್ವಹಿಸುತ್ತಿದ್ದು ಅದರಂತೆ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು. ಜಗ್ಗೇಶ್‌ ಅಭಿಮಾನಿ ಸಂಘದ ಅಧ್ಯಕ್ಷ ಮಲ್ಲಣ್ಣ, ಫ್ರೆಂಡ್ಸ್‌ ಗ್ರೂಪ್‌ನ ಸದಸ್ಯರಾದ ಶಿವಶಂಕರ್‌, ಜಗದೀಶ್‌, ಗಿರೀಶ್‌, ಶ್ರೀಕಾಂತ್‌, ಕೆ.ಎಲ್‌.ಮಂಜುನಾಥ್‌, ಗೋಪಿನಾಥ್‌ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next