Advertisement

ಆರ್ಡರ್‌ ಆರ್ಡರ್‌ ಈಟಿಂಗ್‌ ಡಿಸಾರ್ಡರ್‌ ಆದ್ರೆ ಭಾಳಾ ಕಷ್ಟ…

03:45 AM Feb 15, 2017 | Harsha Rao |

– ಹಸಿವಿಲ್ಲದಿದ್ದರೂ ಏನನ್ನಾದರೂ ತಿನ್ನುತಿರುತ್ತೀರಿ. ಎಷ್ಟು ತಿಂದರೂ ಹೊಟ್ಟೆ ಸಾಕು ಎಂದು ಹೇಳುವುದೇ ಇಲ್ಲ. ಇಂಥ ಪರಿಸ್ಥಿತಿಯಲ್ಲಿ ನೀವಿದ್ದೀರಾ? ಅನಗತ್ಯವಾಗಿ ಆಹಾರ ಸೇವಿಸುವಾಗ ನಮ್ಮ ಮನಸ್ಥಿತಿ ಹೇಗಿರುತ್ತದೆ ಎಂದು ಎಂದಾದರೂ ಗಮನಿಸಿದ್ದೀರಾ? 

Advertisement

ತೂಕ ಹೆಚ್ಚುತ್ತಲೇ ಇದೆ. ತೂಕ ಇಳಿಸುವ ಯಾವೆಲ್ಲಾ ಮಾರ್ಗಗಳಿವೆಯೋ ಎಲ್ಲದರ ಕುರಿತೂ ಯೋಚಿಸಿಯಾಗಿದೆ. ಸಾಲದಕ್ಕೆ ಜಿಮ್‌, ಏರೋಬಿಕ್ಸ್‌ ಎಂದೆಲ್ಲಾ ಕಸರತ್ತುಗಳನ್ನೂ ಮಾಡಲಾರಂಭಿಸಿದ್ದೀರಿ. ತೂಕ ಇಳಿಸಲು ಮುಖ್ಯವಾಗಿ ಮತ್ತು ಪ್ರಪ್ರಥಮವಾಗಿ ಮಾಡಬೇಕಿರುವುದು ಸೇವಿಸುವ ಆಹಾರದಲ್ಲಿ ನಿಯಂತ್ರಣ. ಆದರೆ ನಿಮ್ಮಿಂದ ಅದೇ ಸಾಧ್ಯವಾಗುತ್ತಿಲ್ಲ. ನಿಮ್ಮ ಆಹಾರ ಕ್ರಮವನ್ನು ನೀವು ಗಮನಿಸಿದಂತೆಲ್ಲಾ ನಿಮಗೆ ಆತಂಕವಾಗುತ್ತಿದೆ. ನಿಮಗೆ ಅಗತ್ಯವಿರುವುದಕ್ಕಿಂತ ಹೆಚ್ಚು ಆಹಾರ ಸೇವಿಸುತ್ತಿದ್ದೀರಿ. ಹೋಗಿ ಬಂದು ಅಡುಗೆ ಮನೆ ಎಡತಾಕುತ್ತೀರಿ.

ಹಸಿವಿಲ್ಲದಿದ್ದರೂ ಏನನ್ನಾದರೂ ತಿನ್ನುತಿರುತ್ತೀರಿ. ಎಷ್ಟು ತಿಂದರೂ ಹೊಟ್ಟೆ ಸಾಕು ಎಂದು ಹೇಳುವುದೇ ಇಲ್ಲ. ಇಂಥ ಪರಿಸ್ಥಿತಿಯಲ್ಲಿ ನೀವಿದ್ದೀರಾ? ಅನಗತ್ಯವಾಗಿ ಆಹಾರ ಸೇವಿಸುವಾಗ ನಮ್ಮ ಮನಸ್ಥಿತಿ ಹೇಗಿರುತ್ತದೆ ಎಂದು ಎಂದಾದರೂ ಗಮನಿಸಿದ್ದೀರಾ? ಇಲ್ಲವೆಂದಾದರೆ, ವಿಪರೀತವಾಗಿ ತಿನ್ನುವ ಮೊದಲು ನಿಮ್ಮ ಮಾನಸಿಕ ಸ್ಥಿತಿ, ಮನಸ್ಸಿನಲ್ಲಾಗುವ ಏರುಪೇರಿನ ಕುರಿತು ನೀವೇ ಒಮ್ಮೆ ಗಮನಿಸಿಕೊಳ್ಳಿ. 

ಮಾನ‌ಸಿಕ ಆರೋಗ್ಯ ಮತ್ತು ಅತಿಯಾದ ಆಹಾರ ಸೇವನೆಗೆ ದೊಡ್ಡದೊಂದು ನಂಟಿದೆ. ಅತಿಯಾದ ಆಹಾರ ಸೇವನೆಯನ್ನು ಮನಃಶಾಸ್ತ್ರಜ್ಞರು ಈಟಿಂಗ್‌ ಡಿಸಾರ್ಡರ್‌(ಆಹಾರ ಸೇವನೆ ಸಂಬಂಧಿ ಖಾಯಿಲೆ) ಅಡಿ ಸೇರಿಸುತ್ತಾರೆ. ವ್ಯಕ್ತಿಯೊಬ್ಬರ ಮಾನಸಿಕ ಆರೋಗ್ಯದಲ್ಲಿ ಉಂಟಾಗುವ ಏರುಪೇರು ಅಗತ್ಯಕ್ಕಿಂತ ಹೆಚ್ಚು ಆಹಾರ ಸೇವಿಸುವಂತೆ ಪ್ರೇರೇಪಿಸುತ್ತದೆ.

ಅತಿಯಾದ ಆಹಾರ ಸೇವನೆಗೆ ವೈದ್ಯರು ನೀಡುವ ಕಾರಣಗಳಲ್ಲಿ ಹಲ ಬಗೆಗಳಿವೆ.

Advertisement

ಮನೋವೈಜ್ಞಾನಿಕ ಕಾರಣಗಳು: 
– ಮೊದಲು ಅಥವಾ ಸದ್ಯದ ದೈಹಿಕ ಮತ್ತು ಭಾವನಾತ್ಮಕ ಆಘಾತ. ಅಲ್ಲದೇ ಲೈಂಗಿಕ ಕಿರುಕುದಂಥ ಕಹಿ ನೆನಪು.
-ಆತಂಕ 
-ಖನ್ನತೆ
-ಬದುಕಿನಲ್ಲಿ ಕೆಲ ನಿರ್ದಿಷ್ಟ ವಿಷಯಗಳಲ್ಲಿ ಹಿಡಿತ ಸಾಧಿಸಲು ಪ್ರಯತ್ನಿಸಿ ಸೋಲನಪ್ಪಿರುವುದು. ಅಥವಾ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿರುವುದು.
-ಕಡಿಮೆ ಮಟ್ಟದ ಸ್ವ-ಗೌರವ, ಸ್ವ-ಪ್ರತಿಷ್ಟೆ ಮತ್ತು ಕೀಳರಿಮೆ.
-ಕಳೆದುಹೋದ ಭಾವ.
-ಒಬೆÕಸೀವ್‌ ಕಂಪಲ್ಸಿàವ್‌ ಡಿಸಾರ್ಡರ್‌(ಅತಿಯಾದ ಆಲೋಚನೆ, ಅನಿಯಂತ್ರಿತ, ಅನವಶ್ಯಕ ಯೋಚನಾ ಲಹರಿ) 

ಇವುಗಳಲ್ಲದೇ ಸಾಮಾಜಿಕ ಜೀವನ ತಂದೊಡ್ಡುವ ಒತ್ತಡ, ಅನಿವಾರ್ಯತೆಗಳೂ ಕೂಡ ನಮ,¾ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿ ಹೆಚ್ಚು ಆಹಾರ ಸೇವಿಸುವಂತೆ ಪ್ರೇರೇಪಿಸುತ್ತವೆ.

ಸಾಮಾಜಿಕ ಕಾರಣಗಳು:
– ಸಂಬಂಧದಲ್ಲಿ ಬಿರುಕು, ಅಸ್ಥಿರತೆಯಿಂದ ಉಂಟಾಗುವ ಭಾವನಾತ್ಮಕ ಒತ್ತಡ ಮತ್ತು ಭಾವನೆಗಳ ಮೇಲೆ ನಿಯಂತ್ರಣ ತಪ್ಪುವಿಕೆ.
– ಕೆಲಸ ಮಾಡುವ ಸ್ಥಳ, ಕಾಲೇಜು ಅಥವಾ ಶಾಲೆಯಲ್ಲಿ ಸಾಮರ್ಥ್ಯ ಪ್ರದರ್ಶಿಸುವ ಅನಿವಾರ್ಯತೆ ಮತ್ತು ಒತ್ತಡ.
-ಸಮಾಜ ಹೇರುವ ನಿರ್ದಿಷ್ಟ ವರ್ತನೆ(ಉದಾ. ಮಹಿಳೆ ಅಥವಾ ಯುವತಿಯರ ಮೇಲೆ ದಿರಿಸು, ಹಾವಭಾವ ಹೀಗೆಯೇ ಇರಬೇಕೆಂದು ಒತ್ತಡ ತರುವುದು)

ನಮ್ಮ ಶರೀರದಲ್ಲುಂಟಾಗುವ ಬದಲಾವಣೆಯೂ ಕೂಡ ಈ ಸಮಸ್ಯೆಗೆ ಒಂದು ಕಾರಣ ಇದೆ. 

ಜೈವಿಕ ಕಾರಣ: 
– ಕುಟುಂಬದಲ್ಲಿ ಯಾರಿಗಾದರೂ ಈಟಿಂಗ್‌ ಡಿಸಾರ್ಡರ್‌ನಂಥ ಖಾಯಿಲೆಯಿದ್ದರೆ ಅದು ಅನುವಂಶಿಕವಾಗುವ ಸಾಧ್ಯತೆ ಇದೆ.
– ಮೆದುಳಿನಲ್ಲಿ ಹಸಿವು, ಜೀರ್ಣಕ್ರಿಯೆ, ಆಹಾರದ ಅಪೇಕ್ಷೆ ನಿಯಂತ್ರಿಸುವ ರಾಸಾಯನಿಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುದು.  

ಚಿಕಿತ್ಸೆ: ಸಮಸ್ಯೆಯ ಗಂಭೀರತೆ ಆಧಾರದ ಮೇಲೆ ಮನೋವೈದ್ಯಕೀಯ ಚಿಕಿತ್ಸೆ ಲಭ್ಯವಿದೆ. ಸಮಸ್ಯೆ ಈಗಿನ್ನೂ ಶುರುವಿನಲ್ಲಿದೆ ಅಷ್ಟೇನೂ ಗಂಭೀರವಾಗಿಲ್ಲ ಎಂದಾದರೆ ಆಪ್ತ ಸಮಾಲೋಚನೆ ಸಾಕು. ಸಮಸ್ಯೆ ಗಂಭೀರವಾಗಿದ್ದರೆ ಔಷಧೋಪಚಾರದ ನೆರವು ಇದೆ. ಒಟ್ಟಿನಲ್ಲಿ ಅತಿಯಾದ ಆಹಾರ ಸೇವನೆ ಸಮಸ್ಯೆಯನ್ನು ನಿರ್ಲಕ್ಷಿಸದೇ ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ.

– ಚೇತನ. ಜೆ.ಕೆ.

Advertisement

Udayavani is now on Telegram. Click here to join our channel and stay updated with the latest news.

Next