Advertisement

ನ್ಯಾಯಾಂಗ ತನಿಖೆಗೆ ಆದೇಶ

08:26 AM Oct 21, 2018 | |

ಅಮೃತಸರ/ಹೊಸದಿಲ್ಲಿ: ಪಂಜಾಬ್‌ನ ಅಮೃತಸರದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ರೈಲು ದುರಂತಕ್ಕೆ ಕಾರಣ ತಿಳಿಯಲು ಮುಖ್ಯಮಂತ್ರಿ ಕ್ಯಾ| ಅಮ ರಿಂದರ್‌ ಸಿಂಗ್‌ ನ್ಯಾಯಾಂಗ ತನಿಖೆಗೆ ಆದೇಶ ನೀಡಿದ್ದಾರೆ. ನಾಲ್ಕು ವಾರಗಳ ಒಳಗಾಗಿ ವರದಿ ನೀಡುವಂತೆ ಸೂಚಿಸಿದ್ದಾರೆ. ಜಲಂಧರ್‌ನ ವಿಭಾಗೀಯ ಆಯುಕ್ತರು ತನಿಖೆ ನಡೆಸಿ ವರದಿ ನೀಡಲಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ತಮ್ಮ ಟೆಲ್‌ ಅವೀವ್‌ ಪ್ರವಾಸ ರದ್ದು ಮಾಡಿದ್ದಾರೆ. ಜತೆಗೆ ಅಮೃತಸರಕ್ಕೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಇದೇ ವೇಳೆ ಘಟನೆ ಯಿಂದಾಗಿ ಅಸುನೀಗಿದವರ ಅಧಿಕೃತ ಸಂಖ್ಯೆ 59. ಅವರಲ್ಲಿ ಹೆಚ್ಚಿನವರು ಉತ್ತರ ಪ್ರದೇಶ, ಬಿಹಾರ ದಿಂದ ಕೆಲಸ ಅರಸಿಕೊಂಡು ಬಂದವರಾಗಿದ್ದಾರೆ.

Advertisement

ಅನುಮತಿಯನ್ನೇ ಪಡೆದಿರಲಿಲ್ಲ: ಇದೇ ವೇಳೆ ದಸರಾ ಕಾರ್ಯಕ್ರಮ ಆಯೋಜಕರು ಪೊಲೀಸ್‌ ಇಲಾಖೆಯಿಂದ ಮತ್ತು ಅಮೃತಸರ ಮಹಾನಗರ ಪಾಲಿಕೆಯಿಂದ ಅನುಮತಿಯನ್ನೇ ಪಡೆದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಹೀಗಾಗಿ, ಕಾರ್ಯ  ಕ್ರಮ ಆಯೋಜಕರ ವಿರುದ್ಧ ಕೇಸು ದಾಖಲಿಸಲಾಗಿದೆ.

ರೈಲ್ವೇಯಿಂದ ತನಿಖೆ ಇಲ್ಲ: ಪಂಜಾಬ್‌ನಲ್ಲಿ ಉಂಟಾ ಗಿರುವುದು ರೈಲ್ವೇ ಇಲಾಖೆಯಿಂದ ಉಂಟಾದ ತಪ್ಪಲ್ಲ. ಹೀಗಾಗಿ ರೈಲ್ವೇ ಸುರಕ್ಷಾ ಆಯುಕ್ತರ ವತಿ ಯಿಂದ ತನಿಖೆ ನಡೆಸಲು ಸಾಧ್ಯವಿಲ್ಲ ಎಂದಿದೆ ರೈಲ್ವೇ ಮಂಡಳಿ. ಜತೆಗೆ ರೈಲು ಚಾಲಕನ ವಿಚಾರಣೆ ವೇಳೆ ತನಗೆ ಗ್ರೀನ್‌ ಸಿಗ್ನಲ್‌ ಸಿಕ್ಕಿದ್ದರಿಂದಲೇ ರೈಲು ಚಲಿಸಿದ್ದಾಗಿ ಹೇಳಿ ಕೊಂಡಿದ್ದಾನೆ. ಹೀಗಾಗಿ ಆತನ ವಿರುದ್ಧ ಕ್ರಮವಿಲ್ಲ ಮತ್ತು ರೈಲು ಅಪಘಾತವಲ್ಲ. ಹಾಗಾಗಿ, ಘಟನೆಯಲ್ಲಿ ಮೃತಪಟ್ಟವರಿಗೆ ತನ್ನ ಕಡೆಯಿಂದ ಪರಿಹಾರವಿಲ್ಲ ಎಂದು ಸ್ಪಷ್ಟಪಡಿಸಿದೆ. 

ಸಾಮೂಹಿಕ ಸಂಸ್ಕಾರ: ಅಸುನೀಗಿದವರ ಪೈಕಿ 36 ಶವಗಳನ್ನು ಸಾಮೂಹಿಕವಾಗಿ ದಹನ ಮಾಡಲಾಗಿದೆ. 

ಆಯೋಜಕರೇ ಹೊಣೆ?: ಧೋಬಿ ಘಾಟ್‌ ಕಾರ್ಯಕ್ರಮ ನೋಡಲು ಬಂದಿದ್ದ ಜನರು ರೈಲ್ವೆ ಹಳಿಗಳ ಮೇಲೆ ನಿಂತಿದ್ದು ಆಯೋಜಕರಿಗೆ ಗೊತ್ತಿತ್ತು ಎನ್ನಲಾಗಿದೆ. ಭಾಷಣ ಮಾಡಿದ ಆಯೋಜಕರ ಲ್ಲೊಬ್ಬ ಕಾರ್ಯಕ್ರಮದ ಅತಿಥಿ ನವಜೋತ್‌ ಕೌರ್‌ ಸಿಧು ಅವರನ್ನು ಉದ್ದೇಶಿಸಿ  “ನೋಡಿ ಮೇಡಂ, ನಿಮ್ಮನ್ನು ನೋಡಲು ಜನ ರೈಲು ಹಳಿ ಹತ್ತಿದ್ದಾರೆ. 500 ರೈಲು ಹೋದರೂ ಅವರು ಅಂಜದೇ ಅಲ್ಲೇ ಇರುತ್ತಾರೆ’ ಎಂದಿರುವ ವೀಡಿಯೊ ತುಣುಕೊಂದು ಹರಿದಾಡುತ್ತಿದೆ.

Advertisement

ಜೀವ ಉಳಿಸಿದ ರಾವಣ ವೇಷಧಾರಿ ಸಾವು 
ಧೋಬಿ ಘಾಟ್‌ ಮೈದಾನದಲ್ಲಿ ರಾವಣ ಪ್ರತಿಕೃತಿ ದಹನಕ್ಕೂ ಮುನ್ನ ಅದೇ ಮೈದಾನದಲ್ಲಿ ನಡೆದಿದ್ದ ರಾಮಲೀಲಾ ನಾಟಕದಲ್ಲಿ ರಾವಣನ ಪಾತ್ರ ಮಾಡಿದ್ದ 20ರ ಹರೆಯದ ದಲ್ಬಿàರ್‌ ಸಿಂಗ್‌ ರೈಲು ಅಪಘಾತದಲ್ಲಿ ಜೀವ ತೆತ್ತಿದ್ದಾನೆ. ದುರಂತದ ಸುದ್ದಿ ಕೇಳಿ ಧಾವಿಸಿದ ಆತ ಹಲವಾರು ಮಂದಿಯ ಜೀವ ರಕ್ಷಿಸಿದ್ದಾರೆ. ಪತ್ನಿ ಹಾಗೂ ಎಂಟು ತಿಂಗಳ ಮಗುವಿದ್ದು ಘಟನೆ ನಡೆದ ವೇಳೆ ಅವರು ಮನೆಯಲ್ಲಿದ್ದರು. ದಲ್ಬಿàರ್‌ ಬಗ್ಗೆ ಕಣ್ಣೀರಿಟ್ಟ ಆತನ ತಾಯಿ, ಐದಾರು ವರ್ಷಗಳಿಂದ ತನ್ನ ಮಗ ರಾಮಲೀಲಾದಲ್ಲಿ ವಿವಿಧ ಪಾತ್ರಗಳನ್ನು ನಿಭಾಯಿಸುತ್ತಿದ್ದ. ಈಗ ಆತನ ಸಾವಿನಿಂದ ನಮಗೆ ದಿಕ್ಕೇ ತೋಚದಾಗಿದೆ. ಸರಕಾರ ಪರಿಹಾರ ಧನ ವಿತರಿಸುವವರೆಗೂ ದಲ್ಬಿàರ್‌ ಅಂತ್ಯಸಂಸ್ಕಾರ ಮಾಡುವುದಿಲ್ಲ. ಮಗನ ಸಾವಿನಿಂದ ದಿಕ್ಕೆಟ್ಟಿರುವ ತನ್ನ ಸೊಸೆ ಹಾಗೂ ಆಕೆಯ ಮಗುವಿನ ಪೋಷಣೆಗಾಗಿ ಆಕೆಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಆಗ್ರಹಿಸಿದರು. 

ಕೇರಳದಲ್ಲೂ ಆಗಿತ್ತು
ಶುಕ್ರವಾರದ ಈ ರೈಲು ದುರಂತವನ್ನೇ ಹೋಲುವ ಘಟನೆ 1986ರಲ್ಲಿ ಕೇರಳದ ತಲಸ್ಸೆರಿಯಲ್ಲಿ ನಡೆದಿತ್ತು. ಹಬ್ಬವೊಂದರ ಹಿನ್ನೆಲೆಯಲ್ಲಿ ತಲಸ್ಸೆರಿಯ ಜಗನ್ನಾಥ ದೇಗುಲದ ಪಕ್ಕದ ಮೈದಾನದಲ್ಲಿ “ಕರ್ಬಂ ಕಲಾಕಿ’ ಎಂಬ ಮಧ್ಯರಾತ್ರಿ ಪಟಾಕಿ ಸಿಡಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ದೃಶ್ಯವನ್ನು ಎತ್ತರದ ಜಾಗದಿಂದ ನೋಡಲು ಜನರು ಹತ್ತಿರದಲ್ಲಿದ್ದ ರೈಲ್ವೇ ಹಳಿಯ ಮೇಲೆ ಹೋಗಿ ಕುಳಿತಿದ್ದರು. ಆಗ ಬಂದ ರೈಲು ಅನೇಕರ ಮೇಲೆ ಹರಿದುಹೋಗಿತ್ತು. ಪಟಾಕಿ ಸದ್ದಿನಡಿ ರೈಲಿನ ಸೈರನ್‌ ಕೇಳಿಸಿರಲಿಲ್ಲ. ಘಟನೆಯಲ್ಲಿ 26 ಜನರು ಮೃತಪಟ್ಟಿದ್ದರು.

ಘಟನೆ ಆಘಾತ ತಂದಿದೆ. ಮೃತರಿಗೆ ನನ್ನ ಸಾಂತ್ವನ. ಗಾಯಗೊಂಡವರು ಬೇಗನೇ ಗುಣಮುಖರಾಗಲೆಂದು ಹಾರೈಸುತ್ತೇನೆ. 
ವ್ಲಾದಿಮಿರ್‌ ಪುಟಿನ್‌, ರಷ್ಯಾ ಅಧ್ಯಕ್ಷ 

ಟಾಪ್‌ 5 ದುರಂತ
1981 – ಬಿಹಾರದಲ್ಲಿಸಂಭವಿಸಿದ ಅಪಘಾತದಲ್ಲಿ  800 ಜನರು ಮೃತ. 
1999 – ಅವಧ್‌-ಅಸ್ಸಾಂ ರೈಲು, ಬ್ರಹ್ಮಪುತ್ರಾ ರೈಲು ಢಿಕ್ಕಿ; 269 ಸಾವು
2015 – ನಲಗೊಂಡದಲ್ಲಿ ನದಿಗೆ ಬಿದ್ದ ರೈಲು; 865 ಮರಣ. 
2016 – ಕಾನ್ಪುರದಲ್ಲಿ ನಡೆದಿದ್ದ ಅಪಘಾತದಲ್ಲಿ 127 ಮೃತ
2002 – ಗಯಾದಲ್ಲಿ  ರೈಲು ದುರಂತ; 140 ದುರ್ಮರಣ. 

Advertisement

Udayavani is now on Telegram. Click here to join our channel and stay updated with the latest news.

Next