ಬೆಂಗಳೂರು: ಉತ್ತರ ಒಳನಾಡಿನಲ್ಲಿ ನೈರುತ್ಯ ಮುಂಗಾರು ತೀವ್ರವಾಗಿದ್ದು, ಬೀದರ್, ಕಲಬುರ್ಗಿ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಯ ಕೆಲವೆಡೆ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಜೂನ್ 28ರಂದು (ಮುಂದಿನ 24 ಗಂಟೆ)ಆರೆಂಜ್ ಅಲರ್ಟ್ ಹಾಗೂ ಕೊಪ್ಪಳ ಜಿಲ್ಲೆಗೆ ಯೆಲ್ಲೋ ಅಲರ್ಟ್ ಕೊಡಲಾಗಿದೆ.
ಕರಾವಳಿ ಜಿಲ್ಲೆಯಲ್ಲಿ ಜೂನ್ 27ರಿಂದ ಜುಲೈ 1ರವರೆಗೆ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನಲ್ಲಿ ಜೂನ್ 27 ಮತ್ತು 28 ರಂದು ಬಹುತೇಕ ಎಲ್ಲ ಸ್ಥಳಗಳಲ್ಲಿ ಮಳೆಯಾಗುವ ನಿರೀಕ್ಷೆ ಇದೆ. ಜೂನ್ 29ರಿಂದ ಜುಲೈ 1 ರವರೆಗೆ ಕೆಲವು ಕಡೆ ಮಾತ್ರ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನಲ್ಲಿ ಜುಲೈ 1ರವರೆಗೆ ಬಹುತೇಕ ಎಲ್ಲ ಸ್ಥಳಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.
ರಾಜ್ಯಾದ್ಯಂತ ಭಾನುವಾರ ವ್ಯಾಪಕ ಮಳೆಯಾಗಿದೆ. ಮುಖ್ಯವಾಗಿ ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ 14 ಸೆಂ.ಮೀ, ಮುದ್ಗಲ್, ಕೊಪ್ಪಳದ ತಾವರಗೆರೆಯಲ್ಲಿ ತಲಾ 7 ಸೆಂ.ಮೀ, ಕಾರ್ಕಳ, ದಾವಣಗೆರೆ, ಮಂಗಳೂರು, ವಿಜಯಪುರದ ಇಂಡಿ, ಕೊಪ್ಪಳದ ಯಲಬುರ್ಗಾ, ರಾಯಚೂರಿನ ಲಿಂಗಸುಗೂರ್, ಯಾದಗಿರಿಯ ಸೈದಾಪುರದಲ್ಲಿ ತಲಾ 6 ಸೆಂ.ಮೀ. ಮಳೆಯಾಗಿದೆ.
ಇದನ್ನೂ ಓದಿ :ಕರಾವಳಿಯಲ್ಲಿ ಮತ್ತೆ ವಾಣಿಜ್ಯ ಬಂದರು ನಿರ್ಮಾಣದ ಸದ್ದು!
ಉಳಿದಂತೆ, ದಕ್ಷಿಣ ಕನ್ನಡದ ಪಣಂಬೂರು, ಸುಬ್ರಮಣ್ಯ, ವಿಜಯಪುರದ ದೇವರಹಿಪ್ಪರಗಿ, ಯಾದಗಿರಿಯ ಭೀಮರಾಯನಗುಡಿ, ಕೊಪ್ಪಳದ ಕುಷ್ಟಗಿ, ರಾಯಚೂರಿನ ದಡೇಸುಗೂರ್, ಬೆಂಗಳೂರು ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ತಲಾ 5 ಸೆಂ.ಮೀ, ಕೊಪ್ಪಳ, ಕವಡಿಮಟ್ಟಿ, ಯಾದಗೀರಿಯ ಕೆಂಭಾವಿ, ರಾಯಚೂರಿನ ಡಿಯೋಡರ್ಗ್, ಬೆಂಗಳೂರು ನಗರದ ಗೋಪಾಲ್ ನಗರದಲ್ಲಿ ತಲಾ 4 ಸೆಂ.ಮೀ. ಮಳೆಯಾಗಿದೆ.