Advertisement

ಪರಿದಂತ ಕಾಯಿಲೆಗಳ ಸ್ಥೂಲ ಚಿತ್ರಣ

03:10 PM Aug 02, 2020 | Suhan S |

ಪ್ರತೀ ವರ್ಷ ಆಗಸ್ಟ್‌ 1ರಂದು ನಾವು “ಬಾಯಿಯ ಆರೋಗ್ಯ ದಿನ’ವನ್ನು ಆಚರಿಸುತ್ತೇವೆ. ಈ ಲೇಖನದಲ್ಲಿ ಪರಿದಂತೀಯ ಆರೋಗ್ಯ ಮತ್ತು ನಮ್ಮ ಬದುಕಿನಲ್ಲಿ ಅದರ ಮಹತ್ವದ ಬಗ್ಗೆ ವಿವರಿಸಲಾಗಿದೆ. ಪರಿದಂತ ಪ್ರದೇಶವನ್ನು ಬಾಧಿಸಬಹುದಾದ ಅನಾರೋಗ್ಯಗಳು ಮತ್ತು ಬಾಯಿಯ ನೈರ್ಮಲ್ಯವನ್ನು ಹೇಗೆ ಚೆನ್ನಾಗಿ ಇರಿಸಿಕೊಳ್ಳಬಹುದು ಎಂಬುದನ್ನೂ ಇಲ್ಲಿ ವಿವರಿಸಲಾಗಿದೆ.

Advertisement

ಉತ್ತಮ ಬಾಯಿಯ ನೈರ್ಮಲ್ಯ ಮತ್ತು ಒಳ್ಳೆಯ ಜೀವನ ಶೈಲಿಗಳು ಉತ್ತಮ ಬಾಯಿ ಆರೋಗ್ಯ ಹಾಗೂ ಒಟ್ಟಾರೆ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಮಹತ್ವಪೂರ್ಣವಾಗಿವೆ. ಬಾಯಿಯ ಆರೋಗ್ಯ ಚೆನ್ನಾಗಿರುವುದು ಒಟ್ಟಾರೆ ಆರೋಗ್ಯ ಚೆನ್ನಾಗಿರುವುದಕ್ಕೆ ಹೆಬ್ಟಾಗಿಲು ಇದ್ದಂತೆ, ಹಾಗೆಯೇ ಸ್ವಂತ ಆರೈಕೆಯೇ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಮೊದಲ ಹೆಜ್ಜೆ. ಆರೋಗ್ಯಪೂರ್ಣವಾದ ಬಾಯಿ ಕುಹರವು ಅನೇಕ ಸಾಂಕ್ರಾಮಿಕ ರೋಗಗಳಿಗೆತಡೆಯಂತೆ ಕಾರ್ಯನಿರ್ವಹಿಸುತ್ತದೆ. ಬಾಯಿಯ ಆರೋಗ್ಯದ ಬಗ್ಗೆ ಗಮನ ಕೊಡದಿದ್ದರೆ

ಬಾಯಿಯೊಂದೇ ಅಲ್ಲ, ಮಾತು, ಜಗಿಯುವಿಕೆಗಳ ಸಹಿತ ಜೀವನದ ಎಲ್ಲ ಚಟುವಟಿಕೆಗಳ ಮೇಲೂ ಅದು ಪರಿಣಾಮ ಬೀರುತ್ತದೆ. ಬಾಯಿಯ ಆರೋಗ್ಯವನ್ನು ನಿರ್ಲಕ್ಷಿಸುವುದರಿಂದ ಅನೇಕ ತೊಂದರೆಗಳನ್ನು ಅನುಭವಿಸುವ ಜನರನ್ನು ನಾವು ನೋಡುತ್ತೇವೆ. ಉದಾಹರಣೆಗೆ, ಲಘು ನೋವು, ವಸಡುಗಳಲ್ಲಿ ರಕ್ತ ಅಥವಾ ಕೀವು ಸ್ರಾವ, ಹಲ್ಲು ಅಲುಗಾಡುವುದು ಮತ್ತು ಕೆಲವೇ ತಿಂಗಳುಗಳಲ್ಲಿ ಹಲ್ಲು ಬಿದ್ದುಹೋಗುವುದು ಇತ್ಯಾದಿ. ವಸಡು ಮತ್ತು ಹಲ್ಲುಗಳನ್ನು ಆಧರಿಸುವ ಅಂಗಾಂಶಗಳನ್ನು ಬಾಧಿಸುವ ಈ ಕಾಯಿಲೆಗಳನ್ನು ಪರಿದಂತ ಕಾಯಿಲೆಗಳು (ಪೆರಿಡೋಂಟಲ್‌ ಡಿಸೀಸ್‌) ಎನ್ನುತ್ತಾರೆ.

ಪರಿದಂತ ಕಾಯಿಲೆಗಳು ಉಂಟಾಗಲು ಏನು ಕಾರಣ? :  ಪರಿದಂತ ಕಾಯಿಲೆಗಳಿಗೆ ಪ್ರಧಾನ ಕಾರಣ ಹಲ್ಲುಗಳ ಮೇಲೆ ಸಂಗ್ರಹವಾಗುವ ಜಿಗುಟು ಲೋಳೆ ಅಥವಾ ಪ್ಲೇಕ್‌. ಇದು ಜಿಗುಟು ಲೋಳೆಯ ಪದರವಾಗಿದ್ದು, ಬ್ಯಾಕ್ಟೀರಿಯಾಗಳಿಂದ ಕೂಡಿರುತ್ತದೆ. ಇದು ಹಲ್ಲಿನ ಮೇಲ್ಮೆ„ಗೆ ಅಂಟಿಕೊಂಡಿದ್ದು, ಬಳಿಕ ಬಾಯಿಯ ಕುಹರದೊಳಗೆ ಸಾಮಾನ್ಯವಾಗಿ ಕಂಡುಬರುವ ಬ್ಯಾಕ್ಟೀರಿಯಾಗಳೊಂದಿಗೆ ಪ್ರತಿವರ್ತಿಸುತ್ತದೆ. ಹಲ್ಲುಜ್ಜುವ ಮೂಲಕ ಇದನ್ನು ತೆಗೆದುಹಾಕದೆ ಇದ್ದರೆ ಇದು ಮತ್ತಷ್ಟು ಶೇಖರವಾಗುತ್ತದೆ, ಆಗ ಇದನ್ನು ಕ್ಯಾಲ್ಕುéಲಸ್‌ ಎಂದು ಕರೆಯಲಾಗುತ್ತದೆ. ಒಮ್ಮೆ ಕ್ಯಾಲ್ಕುéಲಸ್‌ ರೂಪುಗೊಂಡರೆ ಆ ಬಳಿಕ ಅದನ್ನು ಸಾಮಾನ್ಯ ಹಲ್ಲುಜ್ಜುವಿಕೆ ಮತ್ತು ಫ್ಲೋಸಿಂಗ್‌ನಿಂದ ತೆಗೆದುಹಾಕುವುದು ಕಷ್ಟ. ಪರಿದಂತ ಕಾಯಿಲೆಗಳ ಮೃದು ರೂಪ ಜಿಂಜಿವೈಟಿಸ್‌. ಹೀಗೆಂದರೆ ವಸಡುಗಳ ಉರಿಯೂತ. ಹಲ್ಲುಗಳ ಸುತ್ತ ಲೋಳೆ ಜಿಗುಟು ಸಂಗ್ರಹ ಹೆಚ್ಚುವುದು, ಬ್ಯಾಕ್ಟೀರಿಯಾ ಹೆಚ್ಚಳ ಉರಿಯೂತಕ್ಕೆ ಕಾರಣವಾಗುತ್ತದೆ. ಜಿಂಜಿವೈಟಿಸ್‌ಗೆ ಚಿಕಿತ್ಸೆ ನೀಡದೆ ಇದ್ದರೆ ಸೋಂಕು ಎಲುಬುಗಳಿಗೆ ಮತ್ತು ಸುತ್ತಲ ಅಂಗಾಂಶಗಳಿಗೆ ಹರಡಲು ಕಾರಣವಾಗುತ್ತದೆ. ಇದನ್ನು ಪೀರಿಯೋಡಾಂಟೈಟಿಸ್‌ ಎಂದು ಕರೆಯಲಾಗುತ್ತದೆ. ಪೀರಿಯೋಡಾಂಟೈಟಿಸ್‌ ಒಂದು ಅಥವಾ ಹೆಚ್ಚು ಹಲ್ಲು ಬಿದ್ದುಹೋಗಲು ಕಾರಣವಾಗುತ್ತದೆ.

ಪರಿದಂತೀಯ ಕಾಯಿಲೆಗಳ ಲಕ್ಷಣಗಳೇನು? :  ರೋಗಿಗಳು ಸಾಮಾನ್ಯವಾಗಿ ಹಲ್ಲುಜ್ಜುವಾಗ ರಕ್ತಸ್ರಾವವನ್ನು, ಊದಿಕೊಂಡ, ಕಡು ಕೆಂಬಣ್ಣದ ಅಥವಾ ನೇರಳೆ ಬಣ್ಣದ ವಸಡುಗಳನ್ನು ಹೊಂದಿರುತ್ತಾರೆ. ಇವೆಲ್ಲವೂ ಜಿಂಜಿವೈಟಿಸ್‌ ಲಕ್ಷಣಗಳು. ನಿರ್ಲಕ್ಷಿಸದೆ ಇದ್ದರೆ ಅಥವಾ ಶೀಘ್ರವಾಗಿ ಚಿಕಿತ್ಸೆಗೆ ಒಳಪಡಿಸಿದರೆ ಜಿಂಜಿವೈಟಿಸನ್ನು ಗುಣಪಡಿಸಬಹುದು. ಆದರೆ ಪೀರಿಯೋಡಾಂಟೈಟಿಸ್‌ನಲ್ಲಿ ಅಂಗಾಂಶ ಎತ್ತರ ಮತ್ತು ಹಲ್ಲುಗಳ ಎತ್ತರ ಶಾಶ್ವತವಾಗಿ ನಷ್ಟ ಹೊಂದುತ್ತದೆ.

Advertisement

ಸೋಂಕು ಹಲ್ಲುಗಳ ಆಧಾರಕ ಅಂಗಾಂಶಗಳಿಗೆ ಸೋಂಕು ಹರಡಿರುವ ರೋಗಿಗಳು ಕೆಳಕಂಡಿರುವ ಲಕ್ಷಣಗಳನ್ನು ಹೊಂದಿರುತ್ತಾರೆ :

  • ವಸಡುಗಳಲ್ಲಿ ರಕ್ತಸ್ರಾವ ಊದಿಕೊಂಡ, ಕಡು ಕೆಂಪು ವಸಡುಗಳು
  • ವಸಡುಗಳಲ್ಲಿ ನೋವು
  • ಉಸಿರಿನಲ್ಲಿ ದುರ್ಗಂಧ/ ಹ್ಯಾಲಿಟೋಸಿಸ್‌
  • ಹಲ್ಲುಗಳ ಸುತ್ತ ಪದೇಪದೇ ನೋವು
  • ಆ ಭಾಗದಲ್ಲಿ ಟೂತ್‌ಪಿಕ್‌ ಉಪಯೋಸಿ ಸ್ವತ್ಛಗೊಳಿಸಿದರೆ ನೋವಿನಿಂದ ಮುಕ್ತಿ
  • ಆ ಪ್ರದೇಶದಲ್ಲಿ ಆಹಾರ ಸೇರಿಕೊಳ್ಳುವುದು ಸೋಂಕು ಮುಂದುವರಿದಂತೆ ಹಲ್ಲು ಅಲುಗಾಡುವುದು/ ಹಲ್ಲಿನ ಸ್ಥಾನ ಬದಲಾಗುವುದು
  • ವಸಡುಗಳಿಂದ ಸ್ರಾವ
  • ವಸಡುಗಳಿಂದ ರಕ್ತಸ್ರಾವ
  • ಶೀತ ಮತ್ತು ಬಿಸಿ ಆಹಾರ/ ಪಾನೀಯಕ್ಕೆ ಸೂಕ್ಷ್ಮ ಪ್ರತಿಸ್ಪಂದನೆ

ಪರಿದಂತ ಕಾಯಿಲೆ ಸಂಬಂಧಿ ಅಪಾಯಾಂಶಗಳು ಯಾವುವು? :  ಕಾಯಿಲೆಯೊಂದು ಉಂಟಾಗಲು ಕಾರಣವಾಗಬಲ್ಲ ಅಂಶಗಳೇ ಆಯಾ ಕಾಯಿಲೆಯ ಅಪಾಯಾಂಶಗಳು.

  • ಬಾಯಿಯ ಕಳಪೆ ನೈರ್ಮಲ್ಯ ಕ್ರಮಗಳು – ಹಲ್ಲುಜ್ಜುವ ತಪ್ಪು ಅಥವಾ ಅಸಮರ್ಪಕ ಅಭ್ಯಾಸ.
  • ಧೂಮಪಾನ ಮತ್ತು ತಂಬಾಕು ಜಗಿಯುವುದು.
  • ವಯಸ್ಸಿಗೆ ಬರುವ, ಗರ್ಭಧಾರಣೆಯ ಅಥವಾ ಋತುಚಕ್ರ ಬಂಧ
  • ಸಂದರ್ಭದಂತಹ ಹಾರ್ಮೋನ್‌ ಬದಲಾವಣೆಗಳು.
  • ಒತ್ತಡ
  • ವಯಸ್ಸು
  • ಬೊಜ್ಜು ಪೌಷ್ಟಿಕಾಂಶ ಕೊರತೆ
  • ಔಷಧ, ದೇಹಾಂಗ ರೋಗಗಳು ಮತ್ತು ರಕ್ತದ ಕ್ಯಾನ್ಸರ್‌, ಎಚ್‌ಐವಿ/ಏಡ್ಸ್‌ ಮತ್ತು ಇಮ್ಯುನೊಕಾಂಪ್ರಮೈಸ್ಡ್ ಸ್ಥಿತಿಯಂತಹ ರೋಗ ನಿರೋಧಕ ಶಕ್ತಿ ಕುಂದಿದ ಸ್ಥಿತಿಗಳು. ವಂಶವಾಹಿ ಅಂಶಗಳು
  • ಹಲ್ಲುಗಳಿಂದ ಸೋಂಕು ಕೂಡ ವಸಡಿನ ಸೋಂಕುಗಳಿಗೆ ಕಾರಣವಾಗಬಲ್ಲುದು.

 

ಡಾ| ಮಾಧುರ್ಯ ಎನ್‌. ಕೆದ್ಲಾಯ

ಅಸಿಸ್ಟೆಂಟ್‌ ಪ್ರೊಫೆಸರ್‌, ಪೆರಿಡೊಂಟಾಲಜಿ

ವಿಭಾಗ, ಮಣಿಪಾಲ ದಂತ ವಿಜ್ಞಾನಗಳ

ಕಾಲೇಜು, ಮಾಹೆ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next