Advertisement

ಜಿಮ್‌ಗೆ ಚಕ್ಕರ್‌ ಹೊಡೆದ್ರಾ?

09:13 AM Apr 25, 2019 | Team Udayavani |

ಜಿಮ್‌ ಅಥವಾ ಫಿಟ್‌ನೆಸ್‌ ಕ್ಲಾಸ್‌ಗೆ ಹೊಸದಾಗಿ ಸೇರಿದವರ ಉತ್ಸಾಹ ನೋಡಬೇಕು. ಇನ್ಮೇಲಿಂದ ದಿನಾ ಜಿಮ್‌ಗೆ ಹೋಗ್ತೀನಿ, ಮೂರು ತಿಂಗಳಲ್ಲಿ ಬೊಜ್ಜು ಕರಗಿಸ್ತೀನಿ ಅಂತೆಲ್ಲಾ ಪ್ರತಿಜ್ಞೆ ಮಾಡಿಕೊಳ್ತಾರೆ. ಆದ್ರೆ, ಒಂದೇ ವಾರಕ್ಕೆ ಸೋಮಾರಿತನ ಮತ್ತೆ ಹೆಗಲ ಮೇಲೆ ಬಂದು ಕೂತಿರುತ್ತೆ. ಇವತ್ಯಾಕೋ ಸುಸ್ತಾಗಿದೆ ಅಂತಲೋ, ಭಾನುವಾರ ವರ್ಕ್‌ಔಟ್‌ಗೂ ರಜ ಅಂತಲೋ ಜಿಮ್‌ಗೆ ಚಕ್ಕರ್‌ ಹೊಡೆಯುತ್ತಾರೆ.

Advertisement

ಒಂದು ದಿನ ಜಿಮ್‌ ಮಿಸ್‌ ಮಾಡಿದರೆ ಓಕೆ. ಆದ್ರೆ, ಸತತವಾಗಿ ಎರಡು ಅಥವಾ ಹೆಚ್ಚು ದಿನ ವರ್ಕ್‌ಔಟ್‌ ಮಾಡದೇ ಇರೋದು ಒಳ್ಳೆಯದಲ್ಲ ಅಂತಾರೆ ಫಿಟ್‌ನೆಸ್‌ ಟ್ರೇನರ್‌ಗಳು. ಹಾಗೆ ಮಾಡಿದರೆ, ಅಷ್ಟೂ ದಿನ ಜಿಮ್‌ನಲ್ಲಿ ನೀವು ಬೆವರಿಳಿಸಿದ್ದು ಕೂಡಾ ವ್ಯರ್ಥ­ವಾಗುತ್ತಂತೆ. ವಾರಗಟ್ಟಲೆ ಜಿಮ್‌ ತಪ್ಪಿಸಿದರೆ ದೇಹ ಮತ್ತೆ ತನ್ನ ತೂಕವನ್ನು ಹೆಚ್ಚಿಸಿಕೊಳ್ಳಲೂಬಹುದು!

ಜಿಮ್‌ ಬದಲಿಗೆ ಏನು?
ಅನಿವಾರ್ಯ ಸಂದರ್ಭಗಳಲ್ಲಿ ಜಿಮ್‌ಗೆ ಹೋಗಲು ಸಾಧ್ಯವಾಗದೇ ಇರಬಹುದು. ಆಗೇನು ಮಾಡಬೇಕು ಗೊತ್ತಾ?
– ಮನೆಯಲ್ಲಿಯೇ 15-20 ನಿಮಿಷ ವರ್ಕ್‌ಔಟ್‌ ಮಾಡಿ
– ವಾಕ್‌ ಅಥವಾ ಜಾಗಿಂಗ್‌ಗೆ ಹೋಗಿ
– ಜಿಮ್‌ಗೆ ಹೋಗದ ದಿನ ಆಫೀಸ್‌ನಲ್ಲಿ ಲಿಫ್ಟ್ ಬಳಸಬೇಡಿ. ಮೆಟ್ಟಿಲು ಹತ್ತಿ- ಇಳಿಯುವುದು ಕೂಡಾ ಒಳ್ಳೆಯ ವ್ಯಾಯಾಮವೇ
– ಹಸಿರು ತರಕಾರಿ, ಸಲಾಡ್‌, ಹಣ್ಣು, ಹಣ್ಣಿನ ರಸ… ಹೀಗೆ ಆರೋಗ್ಯಕರ ಡಯಟ್‌ ಪರಿಪಾಲಿಸಿ.
– ಸಕ್ಕರೆ, ಸಿಹಿ ತಿನಿಸುಗಳನ್ನು ಜಾಸ್ತಿ ತಿನ್ನಬೇಡಿ

Advertisement

Udayavani is now on Telegram. Click here to join our channel and stay updated with the latest news.

Next