Advertisement

2024ರಲ್ಲೂ ವಿಪಕ್ಷಗಳಿಗೆ ಸೋಲೇ ಗತಿ: ಮೋದಿ

11:55 PM Dec 19, 2023 | Team Udayavani |

ಹೊಸದಿಲ್ಲಿ: ಸಂಸತ್ತಿನಲ್ಲಿ ವಿಪಕ್ಷಗಳು ತೋರಿದ ನಡವಳಿಕೆಗೆ 2024ರ ಲೋಕಸಭೆ ಚುನಾವಣೆಯಲ್ಲಿ ಉತ್ತರ ಸಿಗಲಿದೆ. ಭದ್ರತಾ ಲೋಪಕ್ಕೆ “ಪರೋಕ್ಷ’ವಾಗಿ ಬೆಂಬಲ ನೀಡುತ್ತಿರುವ ಪಕ್ಷಗಳು ಲೋಕ ಚುನಾವಣೆಯ ಬಳಿಕ ಮತ್ತಷ್ಟು ಕಡಿಮೆ ಸಂಖ್ಯೆಯೊಂದಿಗೆ ವಿಪಕ್ಷಗಳಾಗಿಯೇ ಉಳಿಯಲಿವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Advertisement

ಮಂಗಳವಾರ ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಗಳ ಸೋಲಿನ ಹತಾಶೆಯಿಂದ ವಿಪಕ್ಷಗಳು ಹೊರಬಂದಿಲ್ಲ. ಅದೇ ಕಾರಣದಿಂದ ಸಂಸತ್‌ ಘಟನೆಗೆ ರಾಜಕೀಯ ಬಣ್ಣ ನೀಡಲು ಯತ್ನಿಸುತ್ತಿವೆ. ರಾಹುಲ್‌ ಗಾಂಧಿ ಅವರು ಇತ್ತೀಚೆಗೆ ಸಂಸತ್‌ನಲ್ಲಿ ನಡೆದ ಘಟನೆಗೆ ನಿರುದ್ಯೋಗ, ಬೆಲೆ ಏರಿಕೆಯ ಸಮಸ್ಯೆ ಕಾರಣ ಎನ್ನುವಂಥ ಸಮರ್ಥನೆ ನೀಡಿದರು. ಇತ್ತ ಪ್ರಜಾಪ್ರಭುತ್ವದ ಮೇಲೆ ನಮ್ಮ ಪಕ್ಷಕ್ಕೆ ನಂಬಿಕೆ ಇದೆ ಎಂದೂ ಹೇಳಿಕೊಳ್ಳುತ್ತಾರೆ. ಹಾಗಾದರೆ, ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇರುವ ಪಕ್ಷವು ಅಂಥ ಕೃತ್ಯವನ್ನು ಬಹಿರಂಗವಾಗಿಯೇ ಸಮರ್ಥಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಬಹುಶಃ ವಿಪಕ್ಷಗಳು ಅದೇ ಸ್ಥಾನದಲ್ಲಿರಲು ನಿಶ್ಚಯಿಸಿ ಈಗಲೇ ಅಭ್ಯಾಸ ಮಾಡುತ್ತಿವೆ, ರಾಷ್ಟ್ರವು ಅದನ್ನೇ ನೆರವೇರಿಸಲಿದೆ ಎಂದೂ ಮೋದಿ ಹೇಳಿದ್ದಾರೆ. ಅಲ್ಲದೇ ವಿಪಕ್ಷಗಳಿಗೆ ನಮ್ಮ ಸರಕಾರವನ್ನು ಕೆಳಗಿಳಿಸುವುದು ಮಾತ್ರವೇ ಗುರಿ! ಆದರೆ ನಮ್ಮ ಸರಕಾರಕ್ಕೆ ದೇಶದ ಉಜ್ವಲ ಭವಿಷ್ಯವನ್ನು ಖಾತರಿಪಡಿಸುವುದೇ ಗುರಿ ಎಂದೂ ಹೇಳಿದ್ದಾರೆ. ಜತೆಗೆ ಸಭೆಯಲ್ಲಿ ಖಾಲಿ ಉಳಿದಿದ್ದ ಕುರ್ಚಿಗಳನ್ನು ಉಲ್ಲೇಖೀಸಿ, 2024ರ ಚುನಾವಣೆಯು ಬಿಜೆಪಿಯ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲಿದೆ. ಆಗ ಈ ಎಲ್ಲ ಕುರ್ಚಿಗಳನ್ನೂ ಭರ್ತಿ ಮಾಡುತ್ತೇವೆ ಎಂದೂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next