Advertisement

ವೇತನ ತಡೆಗೆ ವಿರೋಧ

03:55 PM Nov 03, 2017 | Team Udayavani |

ರಾಯಚೂರು: ಅನಗತ್ಯ ಕಾರಣವೊಡ್ಡಿ ನೌಕರರ ವೇತನ ತಡೆಹಿಡಿದ ಕ್ರಮ ಖಂಡಿಸಿ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನೌಕರರ ಸಂಘದ ಸದಸ್ಯರು ಗುರುವಾರ ಜೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Advertisement

ಈ ಕುರಿತು ಜೆಸ್ಕಾಂ ಇಇಗೆ ಮನವಿ ಸಲ್ಲಿಸಿ, ನಗರದ ವಿಭಾಗದಲ್ಲಿ ಸುಮಾರು 1971ರಿಂದ ಈವರೆಗೆ ಹುದ್ದೆ ನೇಮಕವಾಗಿಲ್ಲ. ಇರುವ ಸಿಬ್ಬಂದಿಯಲ್ಲೇ ಒತ್ತಡದ ಮಧ್ಯೆ ಕೆಲಸ ನಿರ್ವಹಿಸಲಾಗುತ್ತಿದೆ. ಕಾರ್ಯಭಾರಕ್ಕೆ ತಕ್ಕಂತೆ
ನಿರ್ವಹಣಾ ಸಿಬ್ಬಂದಿ, ಸಹಾಯಕ ಮಾರ್ಗದಾಳು, ಮಾರ್ಗದಾಳು, ಮೆಕ್ಯಾನಿಕ್‌, ಸೂಪರ್‌ ಮೆಕ್ಯಾನಿಕ್‌ ಹಾಗೂ ಆಪರೇಟರ್‌ ಸೇರಿದಂತೆ ವಿವಿಧ ಹುದ್ದೆಗಳ ಮಂಜೂರು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಹಲವು ವರ್ಷದಿಂದ ಬಡ್ತಿ ನೀಡಿಲ್ಲ. ನಿರಂತರ ಸೇವಾ ಕೇಂದ್ರದಲ್ಲಿ ಮೂಲ ಸೌಕರ್ಯ ಕಲ್ಪಿಸಬೇಕು. ಕೇಂದ್ರದಲ್ಲಿ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಕಳೆದ ಮೂರು ವರ್ಷದಿಂದಲೂ ಪಾಳೆಯ ಭತ್ಯೆ ನೀಡಿಲ್ಲ. ಕೂಡಲೇ ಮಂಜೂರು ಮಾಡಬೇಕು. ನಗರ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ನಿರ್ವಹಣಾ ಸಾಮಗ್ರಿ, ಸಮವಸ್ತ್ರ, ಸುರಕ್ಷಾ ಪರಿಕರಗಳನ್ನು, ಗುರುತಿನ ಚೀಟಿ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಎಲ್ಲ ನೌಕರರಿಗೆ ವೇತನ ಪಟ್ಟಿ ನೀಡಬೇಕು. ಕಂದಾಯ ಶಾಖೆ ಸಿಬ್ಬಂದಿಗೆ ಕೆಲಸದ ಒತ್ತಡವಿದ್ದು, ಹೆಚ್ಚುವರಿ ಸಿಬ್ಬಂದಿ
ನಿಯೋಜಿಸಬೇಕು. ಗಣಕಯಂತ್ರಗಳ ವ್ಯವಸ್ಥೆ ಮಾಡಬೇಕು. ನಗದು ಹಣ ಬ್ಯಾಂಕ್‌ಗೆ ಜಮಾ ಮಾಡಲು ವಾಹನದ
ವ್ಯವಸ್ಥೆ ಮಾಡಬೇಕು. ನಗರದ ಉಪ ವಿಭಾಗದ ಎರಡು ಮುಖ್ಯ ಕ್ಯಾಶ್‌ ಕೌಂಟರ್‌ಗೆ ಮೂಲ ಸೌಲಭ್ಯ ಒದಗಿಸಬೇಕು.
ಕ್ಯಾಶ್‌ ಕೌಂಟರ್‌ಗಳ ಕಾರ್ಯನಿರ್ವಹಣೆ ಮಾಡುತ್ತಿರುವ ಸಿಬ್ಬಂದಿಗೆ ಆಡಳಿತಾತ್ಮಕ ಮಂಜೂರಾತಿ ನೀಡಬೇಕು
ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next