Advertisement
ಸುಮಾರು 5 ಗಂಟೆ ಕಾಲ ರಸ್ತೆ ತಡೆ ನಡೆಸಿದ ಪ್ರತಿಭಟನಕಾರರು, ಒಂದೂವರೆ ಗಂಟೆ ಕಾಲ ಮಡಿಕೇರಿ ರಕ್ಷಿತಾರಣ್ಯ ಅಧಿಕಾರಿಗಳಾದ ಸಿಸಿಎಫ್ ಸೀಮಾ, ರೇಂಜರ್ ಮರಿಸ್ವಾಮಿ ಕೆ.ಎಂ. ಮತ್ತು ಸಿಬಂದಿಗೆ ದಿಗ್ಬಂಧನ ವಿಧಿಸಿ ತರಾಟೆಗೆತ್ತಿಕೊಂಡರು.
ತಾ.ಪಂ. ಸದಸ್ಯ ಉದಯ ಕೊಪ್ಪಡ್ಕ ಅವರು ಮಾತನಾಡಿ, 15 ವರ್ಷಗಳಿಂದ ಕಡಮಕಲ್‌ನಲ್ಲಿ ತಮ್ಮ ಇಲಾಖೆಯ ಸಿಬಂದಿ ಗ್ರಾಮಸ್ಥರ ಸಹಕಾರ ದೊಂದಿಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಒಂದು ಬಾರಿಯೂ ಇಲಾಖೆಯ ಸಿಬಂದಿಗೆ ಒಂದಿಷ್ಟೂ ಅಸಹಕಾರ ವ್ಯಕ್ತಪಡಿಸಿಲ್ಲ. ಆದರೆ ಇದೀಗ ಅರಣ್ಯ ಇಲಾಖೆ ಸೂಕ್ಷ್ಮ ಪರಿಸರವನ್ನು 1 ಕಿ.ಮೀ.ನಿಂದ 10 ಕಿ.ಮೀ. ವರೆಗೆ ವಿಸ್ತರಿಸಿ 5 ಗ್ರಾಮಗಳನ್ನು ಸೇರಿಸುವ ಮೂಲಕ ಗ್ರಾಮಸ್ಥರನ್ನು ಓಡಿಸುವ ಷಡ್ಯಂತ್ರ ನಡೆಸಿದೆ. ಸಮಸ್ಯೆ ಇತ್ಯರ್ಥವಾಗುವ ವರೆಗೆ ಇಲಾಖೆಯ ಯಾವುದೇ ಅಧಿಕಾರಿ ಮತ್ತು ಸಿಬಂದಿ ಗ್ರಾಮಕ್ಕೆ ಆಗಮಿಸುವುದನ್ನು ತಡೆಯುವುದ
ರೊಂದಿಗೆ ಆಹಾರ, ವಸತಿ ಸಹಿತ ಇತರ ಅಗತ್ಯಗಳನ್ನು ಪೂರೈಸಲು ಅವಕಾಶ ನೀಡದಿರಲು ನಿರ್ಧರಿಸಿದ್ದೇವೆ ಎಂದು ವಿವರಿಸಿದರು. ಸಿಸಿಎಫ್ ಸೀಮಾ ಹಾಗೂ ರೇಂಜರ್ ಮರಿಸ್ವಾಮಿ ಅವರು ಸೂಕ್ಷ್ಮ ಪರಿಸರ ವ್ಯಾಪ್ತಿಯಿಂದ ಸಮಸ್ಯೆ ಇಲ್ಲವೆಂದು ಸಮಜಾಯಿಷಿ ನೀಡಲು ಯತ್ನಿಸಿದಾಗ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಸ್ಥಳದಿಂದ ತೆರಳಲು ಬಿಡೆವು ಎಂದು ಪಟ್ಟುಹಿಡಿದರು.
Related Articles
ಪ್ರತಿಭಟನೆ ವಿಚಾರ ತಿಳಿದು ಶಾಸಕ ಅಂಗಾರ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ ಆಗಮಿಸಿ, ಜನರ ಆಕ್ರೋಶ ಮತ್ತು ಭಾವನೆಗಳನ್ನು ಗೌರವಿಸಿ ಮೇಲಾಧಿಕಾರಿಗಳಿಗೆ ವರದಿ ನೀಡಿ ಗಮನಕ್ಕೆ ತರುವಂತೆ ಅಧಿಕಾರಿಗಳಿಗೆ ತಿಳಿಸಿದರು. ಅಂತಿಮವಾಗಿ ಮುಂದೆ ಮೇಲಾಧಿಕಾರಿಗಳನ್ನು ಕರೆಸಿ ವಿಶೇಷ ಗ್ರಾಮ ಸಭೆ ನಡೆಸಲು ಪ್ರಯತ್ನಿಸುವುದಾಗಿ ತಿಳಿಸಿ ಗ್ರಾಮಸ್ಥರ ಮನವಿಯನ್ನು ಸ್ವೀಕರಿಸಿದ ಬಳಿಕ ಅಧಿಕಾರಿಗಳು ಕಡಮಕಲ್ ಕಚೇರಿಗೆ ತೆರಳದೇ ಮಡಿಕೇರಿಗೆ ವಾಪಸಾದರು.
Advertisement
ಮೂರು ದಿನಗಳಿಂದ ಹೋರಾಟಜೂ. 6ರಂದು ಕಲ್ಮಕಾರು ಗ್ರಾಮಸ್ಥರು ದಿಢೀರ್ ಸಭೆ ಸೇರಿ ಕಡಮಕಲ್ ಸಮೀಪದ ರಕ್ಷಿತಾರಣ್ಯ ಕಚೇರಿಯ ಸಿಬಂದಿಗೆ ಎಚ್ಚರಿಕೆ ನೀಡಿ ಸ್ಥಳದಿಂದ ತೆರಳುವಂತೆ ಸೂಚಿಸಿದ್ದರು. ಬೆದರಿದ ಸಿಬಂದಿ ಕಚೇರಿಗೆ ಬೀಗ ಜಡಿದು ತೆರಳಿದ್ದರು. ಈ ಹಿನ್ನೆಲೆಯಲ್ಲಿ ಜೂ. 7ರಂದು ಫಾರೆಸ್ಟರ್ ಹಾಗೂ ರೇಂಜರ್‌ಗಳು ಕಡಮಕಲ್‌ಗೆ ಆಗಮಿಸಿದ್ದರು. ಅವರನ್ನು ಕೂಡ ಸ್ಥಳಕ್ಕೆ ತೆರಳಲು ಕಲ್ಮಕಾರು ಪೇಟೆಯಲ್ಲಿ ಗ್ರಾಮಸ್ಥರು ಅವಕಾಶ ನೀಡದೆ ಹಿಂದಿರುಗುವಂತೆ ಪ್ರತಿರೋಧ ತೋರಿದ್ದರು. ಜೂ. 8ರಂದು ಮಡಿಕೇರಿಯಿಂದ ಸಿಸಿಎಫ್ ಸೀಮಾ, ರೇಂಜರ್ ಮರಿಸ್ವಾಮಿ ಹಾಗೂ ಸಿಬಂದಿ ಆಗಮಿಸುವ ಕುರಿತು ಬೆಳಗ್ಗೆ ಈ ಭಾಗದ ತಾ.ಪಂ. ಸದಸ್ಯ ಉದಯ್ ಕೊಪ್ಪಡ್ಕ ಮಾಹಿತಿ ಪಡೆದು, ಗ್ರಾಮಸ್ಥರನ್ನು ಒಗ್ಗೂಡಿಸಿ ಪ್ರತಿಭಟನೆಗೆ ಮುಂದಾದರು. ದೂರವಾಣಿ ಮೂಲಕ ಗ್ರಾಮಸ್ಥರನ್ನು ಸಂಪರ್ಕಿಸಿ ಹರಿಹರಪಳ್ಳತ್ತಡ್ಕ ಪೇಟೆಯಲ್ಲಿ ಮನವಿ ನೀಡಲು ಮುಂದಾದರು. 10.30Ã ವೇಳೆಗೆ ಹರಿಹರ ಜಂಕ್ಷನ್‌ನಲ್ಲಿ ರಸ್ತೆ ತಡೆ ಆರಂಭಗೊಂಡಿತು. ಮೂರು ಗಂಟೆಗಳ ಬಳಿಕ ಸ್ಥಳಕ್ಕಾಗಮಿಸಿದ ಅಧಿಕಾರಿಗಳನ್ನು ಒಂದೂವರೆ ಗಂಟೆಗಳ ಕಾಲ ದಿಗ್ಬಂಧನ ವಿಧಿಸಿ ಮುಖಂಡರು ತರಾಟೆಗೆತ್ತಿಕೊಂಡರು.