Advertisement

ಮೆಸ್ಕಾಂ ಶಾಖಾ ಕಚೇರಿ ಸ್ಥಳಾಂತರಕ್ಕೆ ವಿರೋಧ

09:01 AM Jun 15, 2020 | Suhan S |

ಮೂಡಿಗೆರೆ: ತಾಲೂಕಿನ ದಾರದಹಳ್ಳಿ ಫ್ರಿಡರ್‌ ವ್ಯಾಪ್ತಿಯ ಮೆಸ್ಕಾಂ ಶಾಖಾ ಕಚೇರಿಯನ್ನು ಮೂಡಿಗೆರೆಗೆ ವರ್ಗಾಯಿಸುವುದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.

Advertisement

ಕಿತ್ತಳೆಗಂಡಿ ಗ್ರಾಮದಲ್ಲಿ ಮೆಸ್ಕಾಂ ಶಾಖಾ ಕಚೇರಿಯಿದ್ದು, ಇದರಿಂದಾಗಿ ಗೌಡಹಳ್ಳಿ, ಪಟ್ಟದೂರು, ಊರುಬಗೆ, ದಾರದಹಳ್ಳಿ, ಬಿಳ್ಳೂರು ಸೇರಿದಂತೆ ಹಲವು ಹಳ್ಳಿಗಳ ಜನರಿಗೆ ಉಪಯೋಗವಾಗುತ್ತಿತ್ತು. ಶಾಖಾ ಕಚೇರಿಯಲ್ಲಿ ಗ್ರಾಹಕರು ವಿದ್ಯುತ್‌ ಬಿಲ್‌ ಪಾವತಿ ಮಾತ್ರವಲ್ಲದೆ, ದೂರು ದಾಖಲಿಸಲು, ಹೊಸ ಸಂಪರ್ಕಕ್ಕೆ ನೋಂದಣಿ, ಆಡಳಿತಾತ್ಮಕ ವಿಚಾರಗಳಿಗೆ ಸಂಬಂ ಧಿಸಿದ ಹಲವು ಕಾರ್ಯಗಳಿಗೆ ಅನುಕೂಲ ಕಲ್ಪಿಸುತ್ತಿತ್ತು. ಆದರೆ ಇಲ್ಲಿನ ಶಾಖಾ ಕಚೇರಿಯನ್ನು ಸ್ಥಳಾಂತರ ಮಾಡಲು ಉದ್ದೇಶಿಸಿರುವುದರಿಂದ ಸುತ್ತಮುತ್ತಲ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಬಗ್ಗೆ ಮಾತನಾಡಿದ ಸ್ಥಳೀಯರು, ಮೆಸ್ಕಾಂ ಶಾಖಾ ಕಚೇರಿ ವಿದ್ಯುತ್‌ ಇಲಾಖೆಗೆ ಸಂಬಂಧಪಟ್ಟ ಹತ್ತು ಹಲವು ಕಾರ್ಯಗಳಿಗೆ ಸ್ಥಳೀಯರಿಗೆ ಅನುಕೂಲ ಕಲ್ಪಿಸುತ್ತಿತ್ತು. ಆದರೆ ಇದೀಗ ಮೆಸ್ಕಾಂ ಅಧಿಕಾರಿಗಳು ಇಲ್ಲಿನ ಶಾಖಾ ಕಚೇರಿಯನ್ನು ಮೂಡಿಗೆರೆ ಪಟ್ಟಣದ ಮೆಸ್ಕಾಂ ಮುಖ್ಯ ಕಚೇರಿಗೆ ಸ್ಥಳಾಂತಸರಿಸಲು ನಿರ್ಧಾರ ಮಾಡಿದ್ದಾರೆ. ಇದು ಸ್ಥಳೀಯರಿಗೆ ತೀವ್ರ ಅನಾನುಕೂಲ ಮಾಡುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರತೀ ತಿಂಗಳು ಬಿಲ್‌ ಪಾವತಿ ಮಾಡಲು ಸುಮಾರು 30ಕಿಮೀನಷ್ಟು ದೂರ ಪ್ರಯಾಣ ಮಾಡಬೇಕಾಗುತ್ತದೆ. ಈಗಾಗಲೇ ಮೆಸ್ಕಾಂ ಉನ್ನತ ಅಧಿಕಾರಿಗಳಿಗೆ ಸ್ಥಳಾಂತರದ ಉದ್ದೇಶವನ್ನು ಕೈಬಿಡುವಂತೆ ಕೇಳಿಕೊಳ್ಳಲಾಗಿದೆ. ನಮ್ಮ ಮನವಿಗೆ ಸ್ಪಂದಿಸದಿದ್ದಲ್ಲಿ ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಪತ್ರಿಕೆಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next