ಮೈಸೂರು: ಎಪಿಎಂಸಿ ತಿದ್ದುಪಡಿ ಕಾಯ್ದೆ ರೈತ ವಿರೋಧಿಯಾಗಿದ್ದು, ಅದನ್ನು ಕೈ ಬಿಟ್ಟು ಸ್ವಾಮಿನಾಥ್ ವರದಿ ಜಾರಿ ಸೇರಿ ದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ, ರೈತ ಸಂಘ ಹಾಗೂ ಹಸಿರು ಸೇನೆಯಿಂದ ಮೌನ ಪ್ರತಿಭಟನೆ ನಡೆಯಿತು. ನಗರದ ಡೀಸಿ ಕಚೇರಿ ಮುಂದೆ ಪ್ರತಿಭಟನಾಕಾರರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರತಿಭಟನೆ ನಡೆಸಿ, ವಿವಿಧ ಬೇಡಿಕೆ ಈಡೇರಿಸುವಂತೆ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ಡೀಸಿ ಮೂಲಕ ಪ್ರಧಾನಿಗೆ ಮನವಿ ಸಲ್ಲಿಸಿದರು.
ಕೊರೊನಾ ಜನರ ಪಾಲಿಗೆ ಮಾರ ಣಾಂ ತಿಕ ಪರಿಸ್ಥಿತಿ ಸೃಷ್ಟಿಸಿದೆ. ರೈತ ಬೆಳೆದ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಪಸ್ವಲ್ಪ ಜನ ರೈತರು ಕಡಿಮೆ ಬೆಲೆಗೆ ಕೃಷಿ ಉತ್ಪನ್ನ ಮಾರಾಟ ಮಾಡಿ, ನಷ್ಟ ಅನುಭ ವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರೈತರು, ಕೃಷಿ ಕೂಲಿಕಾರರು ಹಾಗೂ ಗ್ರಾಮೀಣ ಕಸುಬುದಾರರನ್ನು ತಕ್ಷಣ ಹಸಿವು ನಿರುದ್ಯೋಗ. ಆರ್ಥಿಕ ದಿವಾಳಿಯಿಂದ ರಕ್ಷಿಸಲು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ವಿವಿಧ ಬೇಡಿಕೆಗಳು: ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಸಂಬಂಧಿಸಿ ಸುಗ್ರಿವಾಜ್ಞೆಗಳ ಮೂಲಕ ಸರ್ಕಾರ ಕೂಡಲೇ ಕಾಯ್ದೆ ಅಂಗೀಕಾರ ಮಾಡಬೇಕೆಂದು ಒತ್ತಾಯಿಸುವ ಕ್ರಮ ಕೈಬಿಡಬೇಕು. ಗೋದಾಮುಗಳಲ್ಲಿ ಇರುವ ಆಹಾರ ಪದಾರ್ಥಗಳನ್ನು ಬಿಪಿಎಲ್, ಎಪಿಎಲ್ ಎನ್ನುವ ತಾರತಮ್ಯವಿಲ್ಲದೆ ಕನಿಷ್ಠ 1 ವರ್ಷ ಮಾಸಿಕ ಪ್ರತಿಯೊಬ್ಬ ವ್ಯಕ್ತಿಗೆ ತಲಾ 15 ಕೆ.ಜಿ ರೇಷನನ್ನು ನೀಡಬೇಕು.
ಕೇರಳ ಮಾದರಿಯಂತೆ ಆಹಾರ ಸಾಮಗ್ರಿ ನೀಡಬೇಕು. ರೈತರು ಕೃಷಿ ಕೂಲಿಕಾರರು. ಕಸುಬುದಾರರು ಮತ್ತು ಸ್ತ್ರೀ ಶಕ್ತಿ ಗುಂಪು ಗಳ ಸಾಲಗಳನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ಕೃಷಿ ಸಾಲಗಳ ವಸೂಲಾತಿ ನಿಲ್ಲಿಸಬೇಕು ಹಾಗೂ ಮುಂಗಾರು ಹಿನ್ನೆಲೆಯಲ್ಲಿ ಹೊಸ ಸಾಲಗಳನ್ನು ಕೂಡಲೇ ನೀಡಬೇಕು. ಉದ್ಯೋಗ ಖಾತ್ರಿ ಕಾಯ್ದೆಯನ್ನು ಸಮ ರ್ಪಕ ವಾಗಿ ಜಾರಿ ಮಾಡಬೇಕು.
ಕೆಲಸದ ಮಿತಿಯನ್ನು ತೆಗೆದು ಕೂಲಿಯನ್ನು ಹೆಚ್ಚಳ ಮಾಡಬೇಕು ಉದ್ಯೋಗ ಖಾತ್ರಿ ಯೋಜನೆಯನ್ನು ಕೃಷಿ ಕ್ಷೇತ್ರಕ್ಕೂ ವಿಸ್ತರಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಸಂಘದ ತಾಲೂಕು ಸಮಿತಿ ಅಧ್ಯಕ್ಷ ಪಿ.ಮರಂಕಯ್ಯ, ಪ್ರಧಾನ ಕಾರ್ಯದರ್ಶಿ ಪ್ರಭಾಕರ್, ಸಂಘಟನಾ ಕಾರ್ಯದರ್ಶಿ ನಾಗನಹಳ್ಳಿ ವಿಜಯೇಂದ್ರ, ಸಹ ಕಾರ್ಯದರ್ಶಿ ಮಹೇಶ್, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೆ.ಬಸವರಾಜ್, ಮುಖಂಡರಾದ ಅಶ್ವತ್ಥ್ ನಾರಾಯಣರಾಜೇ ಅರಸ್ ಇದ್ದರು.