Advertisement

ಸ್ವಯಂ ಘೋಷಿತ ತೆರಿಗೆ ಹೆಚ್ಚಳಕ್ಕೆ ವಿರೋಧ

11:46 AM May 25, 2020 | Suhan S |

ಹುನಗುಂದ: ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳ ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಏಕಾಏಕಾಗಿ ಶೇ. 25 ಏರಿಕೆ ಮಾಡಿರುವುದು ಕೊರೊನಾ ವೈರಸ್‌ ನಿಂದ ಕೆಂಗೆಟ್ಟ ಜನರ ಜೀವನದ ಮೇಲೆ ಸರ್ಕಾರ ಗಾಯದ ಮೇಲೆ ತೆರಿಗೆಯ ಬರೆ ಎಳೆದಂತಾಗಿದೆ ಎಂದು ಜನ ಜಾಗೃತಿ ವೇದಿಕೆಯ ಪ್ರಧಾನ ಕಾರ್ಯದರ್ಶಿ ಮತ್ತು ಸಾಮಾಜಿಕ ಹೋರಾಟಗಾರ ನಾಗರಾಜ ಹೊಂಗಲ್‌ ಹೇಳಿದರು.

Advertisement

ರವಿವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟ ಎದುರುಸುತ್ತಿರುವ ರೈರು ಹಾಗೂ ಮತ್ತಿತರ ಜನರ ಮೇಲೆ ಮತ್ತಷ್ಟು ಭಾರವನ್ನು ಏರಿದಂತಾಗಿದೆ. ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ದತಿಯಂತೆ ಏ. 30ರೊಳಗೆ ಪಾವತಿಸುವ ಆಸ್ತಿದಾರರಿಗೆ ಮೊದಲ ಹಂತದ ಲಾಕ್‌ಡೌನ್‌ ಗಮನದಲ್ಲಿಟ್ಟುಕೊಂಡು ಶೇ. 5 ರಿಯಾಯತಿ ನೀಡಿ ಮೇ 31ರವರೆಗೆ ಆಸ್ತಿತೆರಿಗೆ ಕಟ್ಟಲು ಕಾಲಮಿತಿ ವಿಸ್ತರಿಸಿ ಪೌರಾಡಳಿತ ನಿರ್ದೇಶನಾಲಯ ಸುತ್ತೋಲೆ ಹೊರಡಿಸಿತ್ತು. ಆದರೆ, ಎಲ್ಲ ವರ್ಗದ ಜನತೆ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ಈ ನೀತಿಯನ್ನು ಹಿಂಪಡೆದು ಹಳೆಯ ತೆರಿಗೆ ಪದ್ದತಿ ಮುಂದುವರಿಸಬೇಕು. ಸರ್ಕಾರ ಮೇಲ್ನೋಟಕ್ಕೆ ಶೇ. 25 ತೆರಿಗೆ ಏರಿಕೆ ಮಾಡಿರುವುದು ವಾಸ್ತವದಲ್ಲಿ ಶೇ. 40ರಿಂದ 60 ತೆರಿಗೆ ಹೆಚ್ಚಳವಾಗಿರುತ್ತದೆ. 2005-06ರಲ್ಲಿ ಸ್ವಯಂ ಘೋಷಿತ ತೆರಿಗೆ ಅನುಸಾರ ಕನಿಷ್ಟ ಶೇ. 15 ದರವನ್ನು ಪ್ರತಿ 3 ವರ್ಷಕ್ಕೊಮ್ಮೆ ಹೆಚ್ಚಳ ಮಾಡುವ ನಿಯಮವಿದ್ದು ಅದನ್ನು ಲೆಕ್ಕಿಸದೇ ತೆರಿಗೆ ಹೆಚ್ಚಳ ಮಾಡಿದೆ ಎಂದು ಆರೋಪಿಸಿದರು.

ಸರ್ಕಾರ ಕೋವಿಡ್ ವೈರಸ್‌ ಭೀಕರತೆ ಗಣನೆಗೆ ತಗೆದುಕೊಂಡು ಏಕಾಏಕಿಯಾಗಿ ಶೇ. 25 ತೆರಿಗೆ ಹೆಚ್ಚಳದ ಕ್ರಮ ಕೈ ಬಿಡಬೇಕು ಮತ್ತು ಪ್ರಸಕ್ತ ವರ್ಷದ ತೆರಿಗೆ ಪಾವತಿಗಾಗಿ ಮೇ 31ರವರೆಗೆ ನೀಡಿರುವ ಶೇ. 5ರ ರಿಯಾಯಿತಿ ಅವ ಧಿಯನ್ನು ಡಿ. 31ರವರೆಗೆ ವಿಸ್ತರಿಸಬೇಕು. ಈ ಕುರಿತು ಈಗಾಗಲೇ ಮುಖ್ಯಮಂತ್ರಿ, ಪೌರಾಡಳಿತ ಸಚಿವರು, ಪೌರಾಡಳಿತ ಇಲಾಖೆಯ ಕಾರ್ಯದರ್ಶಿ ಮತ್ತು ನಿರ್ದೇಶನಾಲಯದ ನಿರ್ದೇಶಕರಿಗೆ ಹಾಗೂ ಬಾಗಲಕೋಟೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದು. ತೆರಿಗೆ ಹೆಚ್ಚಳದ ನಿರ್ಧಾರ ಸರ್ಕಾರ ಕೈಬಿಡದಿದ್ದರೇ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ನ್ಯಾಯವಾದಿ ವಿ.ಡಿ. ಜನಾದ್ರಿ, ಜಿ.ಬಿ.ಕಂಬಾಳಿಮಠ, ರೈತ ಮುಖಂಡ ಶ್ರೀಕೃಷ್ಣ ಜಾಲಿಹಾಳ, ಚನ್ನಬಸಪ್ಪ ಇಲಕಲ್ಲ, ವಿಜಯ ಚಿನ್ನನವರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next