Advertisement

ಕೃಷಿ ಭೂಮಿ ಖರೀದಿ ಸಡಿಲಿಕೆಗೆ ವಿರೋಧ

05:02 AM Jun 14, 2020 | Lakshmi GovindaRaj |

ಯಳಂದೂರು: ಕೃಷಿ ಭೂಮಿ ಖರೀದಿಗೆ ನಿರ್ಬಂಧ ಸಡಿಲಿಸಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ನನ್ನ ವಿರೋಧವಿದೆ ಎಂದು ಶಾಸಕ ಮಹೇಶ್‌ ತಿಳಿಸಿದರು. ತಾಲೂಕಿನ ಕೊಮಾರನಪುರ ಗ್ರಾಮದಲ್ಲಿ ಕಣಿಯ ಸಮುದಾಯ ಭವನಕ್ಕೆ  ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಸಣ್ಣ ಹಾಗೂ ಅತಿ ಸಣ್ಣ ರೈತರು ತುಂಡು ಭೂಮಿಯಲ್ಲಿ ವ್ಯವಸಾಯ ಮಾಡುತ್ತಿದ್ದಾರೆ.

Advertisement

ಮಳೆಯ ಅಭಾವದಿಂದ ಇತ್ತೀಚೆಗೆ ರೈತರು ವ್ಯವಸಾಯದಿಂದ  ವಿಮುಖರಾಗಿದ್ದರು. ಇದರಿಂದ ಹಣವಂತರು ಭೂಮಿ ಖರೀದಿಗೆ ಕೇಳಿದರೆ ಸುಲಭ ವಾಗಿ ಭೂಮಿ ಉಳ್ಳವರ ಪಾಲಾಗುತ್ತದೆ. ರೈತ ಮತ್ತೆ ಬಡತನಕ್ಕೆ ಸಿಲುಕುವ ಅಪಾಯವಿದೆ. ಈ ಬಾರಿ ಉತ್ತಮ ಮಳೆಯಾಗುತ್ತಿದೆ. ವ್ಯವಸಾಯಕ್ಕೆ ಉತ್ತಮ ವಾತಾವರಣವಿದೆ. ಈ ಕಾಯ್ದೆ ಬಗ್ಗೆ ವಿಧಾನಸಭೆಯಲ್ಲಿ ಚರ್ಚಿಸಿ ಸರ್ಕಾರಕ್ಕೆ ಮನದಟ್ಟು ಮಾಡಿಕೊಡುತ್ತೇನೆ ಎಂದು ಹೇಳಿದರು.

ಕಣಿಯ ಸಮಾಜ ಚಿಕ್ಕ ಸಮುದಾಯವಾಗಿದೆ. ಇವರು ಸಮುದಾಯ ಭವನ ನಿರ್ಮಿಸಿಕೊಳ್ಳಲು  12.50 ಲಕ್ಷ  ರೂ. ಅಂದಾಜು ಮಾಡಲಾಗಿದೆ. ಇದರಲ್ಲಿ ಸರ್ಕಾರ 10 ಲಕ್ಷ ರೂ. ಬಿಡುಗಡೆ ಮಾಡಲಿದೆ. ಉಳಿದ 2.5 ಲಕ್ಷ ರೂ.ಗಳನ್ನು ನನ್ನ ಅನುದಾನದಿಂದ ನೀಡುತ್ತೇನೆ. ಈಗಾಗಲೇ 2.5 ಲಕ್ಷ ರೂ. ಹಣ ಬಿಡು ಗಡೆಯಾಗಿದ್ದು ಶೀಘ್ರ ಕಾಮಗಾರಿ  ಆರಂಭಗೊಳ್ಳಲಿದೆ ಎಂದರು.

ತಾಪಂ ಪ್ರಭಾರ ಅಧ್ಯಕ್ಷೆ ಭಾಗ್ಯ, ಗ್ರಾಪಂ ಅಧ್ಯಕ್ಷೆ ಗೌರಮ್ಮ, ಸದಸ್ಯರಾದ ರಂಗಸ್ವಾಮಿ, ಪುಟ್ಟಯ್ಯ,ನಾಗರಾಜು ನಿರ್ಮಿತಿ ಕೇಂದ್ರದ ಜೆಇ ನಂದೀಶ್‌, ಪಿಡಿಒ ಮಹೇಶ್‌, ಗೋವಿಂದ, ಮಹಾ ದೇವಸ್ವಾಮಿ,  ಕೃಷ್ಣಕುಮಾರ್‌, ಕಣಿಯರ ಸಂಘದ ಅಧ್ಯಕ್ಷ ಚೆಲುವರಾಜು, ರೇವಣ್ಣ, ವೃಷಭೇಂದ್ರ, ತಿಲಕ್‌, ಚೆನ್ನರಾಜು ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next