Advertisement

ಚಿನ್ನದಗಣಿ ಖಾಸಗೀಕರಣಕ್ಕೆ ವಿರೋಧ

07:14 PM Mar 23, 2021 | Team Udayavani |

ಹಟ್ಟಿಚಿನ್ನದಗಣಿ : ಚಿನ್ನದ ಅದಿರು ಹೊರತೆಗೆಯುವ ಕಾರ್ಯವನ್ನು ಖಾಸಗಿಯವರಿಗೆ ನೀಡುವ ಮೂಲಕ ಸರಕಾರಿ ಸ್ವಾಮ್ಯದ ಹಟ್ಟಿ ಚಿನ್ನದ ಗಣಿ ಕಂಪನಿಯನ್ನು ಖಾಸಗೀಕರಣ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಕರುನಾಡ ವಿಜಯ ಸೇನೆ ಹಟ್ಟಿ ಪಟ್ಟಣ ಘಟಕದ ವತಿಯಿಂದ ಸೋಮವಾರ ಪ್ರತಿಟಭನೆ ನಡೆಸಲಾಯಿತು.

Advertisement

ಪಟ್ಟಣದ ಕ್ಯಾಂಪ್‌ ಬಸ್‌ ನಿಲ್ದಾಣದಿಂದ ಗಣಿ ಕಂಪನಿ ಕಾರ್ಯಾಲಯದವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ಸಾಗಿದ ಪ್ರತಿಭಟನಾಕಾರರು, ಸಚಿವ ಮುರುಗೇಶ ನಿರಾಣಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕರುನಾಡ ವಿಜಯ ಸೇನೆ ಜಿಲ್ಲಾಧ್ಯಕ್ಷ ಎಂ.ಸಿ. ಚಂದ್ರಶೇಖರ ನಾಯಕ ಮಾತನಾಡಿ, ಕಂಪನಿಯ ಸೇವೆಯಲ್ಲಿರುವಾಗಲೇ ಮೃತಪಟ್ಟ ಕಾರ್ಮಿಕರ ಕುಟುಂಬ ಸದಸ್ಯರಿಗೆ ಉದ್ಯೋಗ ನೀಡಬೇಕು. ಶೌಚಾಲಯ, ಒಳಚರಂಡಿ, ಉದ್ಯಾನವನ ಸೇರಿದಂತೆ ತುಂಡು ಕೆಲಸಗಳನ್ನು ಟೌನ್‌ ಶಿಪ್‌ ಮ್ಯಾನೇಜ್‌ಮೆಂಟ್‌ ಯೋಜನೆಯಡಿ ಗುತ್ತಿಗೆ ಪಡೆದು ಕಾರ್ಯನಿರ್ವಹಿಸುತ್ತಿರುವ ಸಿಐಎಸ್‌ಬಿ ಕಂಪನಿ ಸ್ವಂತ ಸಾಮಗ್ರಿಗಳನ್ನು ಖರೀದಿಸದೆ ಎಲ್ಲಾ ಸಾಮಗ್ರಿಗಳನ್ನು ಕಂಪನಿಯಿಂದಲೇ ಪಡೆದು ಬಳಸುತ್ತಿದ್ದಾರೆ.

ಈ ಕಾರ್ಯನಿರ್ವಹಿಸಲು 10 ಕೋಟಿ ಕೊಡಬೇಕೆ? ಎಂದು ಪ್ರಶ್ನಿಸಿದರು. ಗಣಿ ಕಂಪನಿ ಅಭಿವೃದ್ಧಿಗೆ ಭೂಮಿ ನೀಡಿದರೈತರಿಗೆ ಭೂಸಂತ್ರಸ್ತ ಅನುಕಂಪದ ಆಧಾರದಡಿ ಉದ್ಯೋಗ, ವಿಆರ್‌ಎಸ್‌ ಅಥವಾ ಮೇಡಿಕಲ್‌ ಅನ್‌ ಫಿಟ್‌ ಯೋಜನೆ ಜಾರಿ ಮಾಡಿ ಹಿರಿಯ ಕಾರ್ಮಿಕರ ಮಕ್ಕಳಿಗೆ ಉದ್ಯೋಗ ಒದಗಿಸಬೇಕು ಎಂಬ ಒತ್ತಾಯಿಸಿ ಗಣಿ ಕಂಪನಿ ಆಡಳಿತ ವರ್ಗದ ಸಿಬ್ಬಂದಿಗೆ ಮನವಿ ಸಲ್ಲಿಸಿದರು. ಕರುನಾಡ ವಿಜಯ ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುತ್ತಣ್ಣ ಗುಡಿಯಾಳ, ರಮೇಶ ಸುಂಕದ್‌ ಹಟ್ಟಿ ಘಟಕದ ಅಧ್ಯಕ್ಷ ಸಿದ್ದು ಮುದುಗಲ್‌, ಬಸವರಾಜುಗೌಡ ಗುರಿಕಾರ, ಮಾದೇಶ, ಮಹಾತೇಶ, ನವಾಜ್‌ ಶರೀಪ್‌, ನಿಂಗು ಕಲೆಖಾನ್‌ ಯಲ್ಲಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next