Advertisement

Ayodhya ವಿರೋಧ ರಾಮ ಮಂದಿರಕ್ಕಲ್ಲ, ರಾಜಕೀಯ ಸಮಾರಂಭಕ್ಕೆ: ಸಚಿವ ಎಂ.ಬಿ.ಪಾಟೀಲ

08:12 PM Jan 26, 2024 | Shreeram Nayak |

ವಿಜಯಪುರ: ರಾಮ, ರಾಮಮಂದಿರದ ಕುರಿತು ನಮ್ಮ ವಿರೋಧವಿಲ್ಲ. ಆದರೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಮ ಮಂದಿರ ಲೋಕಾರ್ಪಣೆಯನ್ನು ಬಿಜೆಪಿ ರಾಜಕೀಯ ಸಮಾರಂಭ ಮಾಡಿದ ಕ್ರಮಕ್ಕೆ ಮಾತ್ರ ನಮ್ಮ ವಿರೋಧವಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.

Advertisement

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮನನ್ನು ವಿರೋಧಿಸುವವರು ಯಾರೂ ಇಲ್ಲ. ನಾವು ಕೂಡ ರಾಮನನ್ನು ಗೌರವಿಸುತ್ತೇವೆ, ಶಿವನನ್ನು ಆರಾಧಿಸುತ್ತೇವೆ. ಬುದ್ಧ, ಅಲ್ಲಾ, ಗುರುನಾನಕ, ಮಹಾವೀರ ಹೀಗೆ ಎಲ್ಲ ಧರ್ಮಗಳನ್ನು, ದೇವರನ್ನು ನಾವು ಗೌರವಿಸುತ್ತೇವೆ ಎಂದರು.

ಆದರೆ ಪಕ್ಷಾತೀತವಾಗಿ ಆಗಬೇಕಿದ್ದ ಅಯೋಧ್ಯಾ ರಾಮಮಂದಿರ ಲೋಕಾರ್ಪಣೆ ಸಮಾರಂಭವನ್ನು ಬಿಜೆಪಿ ಸ್ವಪಕ್ಷೀಯ ಸಮಾರಂಭ, ಕಾರ್ಯಕ್ರಮದ ರೀತಿಯ ಆಚರಣೆಗೆ ನಮ್ಮ ವಿರೋಧವಿತ್ತು. ಇದೇ ಕಾರಣಕ್ಕೆ ರಾಮಮಂದಿರ ಲೋಕಾರ್ಪಣೆ ಸಮಾರಂಭದಲ್ಲಿ ಭಾಗವಹಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ಚುನಾವಣೆ ರಾಜಕೀಯ ಕಾರಣಕ್ಕಾಗಿ ಅಯೋಧ್ಯಾ ರಾಮಮಂದಿರ ಉದ್ಘಾಟನೆ ಸಮಾರಂಭವನ್ನು ಬಿಜೆಪಿ ರಾಜಕೀಯ ಸಮಾರಂಭ ಮಾಡಿದ್ದಕ್ಕೆ ನಮ್ಮ ವಿರೋಧವಿತ್ತು. ಬದಲಾಗಿ ರಾಮಮಂದಿರ ನಿರ್ಮಾಣ, ಲೋಕಾರ್ಪಣೆಗೆ ಅಲ್ಲ ಎಂದು ಸಮಜಾಯಿಷಿ ನೀಡಿದರು. ನಮಗೆ ಅನುಕೂಲ ಆದಾಗ ರಾಹುಲ್‌ ಗಾಂಧಿ , ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಸೇರಿದಂತೆ ಎಲ್ಲ ನಾಯಕರೂ ರಾಮಮಂದಿರಕ್ಕೆ ಹೋಗುತ್ತೇವೆ ಎಂದರು.

ಲೋಕಸಭೆ ಕ್ಷೇತ್ರಗಳನ್ನು ಗೆಲ್ಲಲು ಆಯಾ ಜಿಲ್ಲಾ ಉಸ್ತುವಾರಿ ಸಚಿವರಿಗೆ ಟಾಸ್ಕ್ ನೀಡಿದ್ದಾರೆ ಎನ್ನುವುದಕ್ಕಿಂತ, ನಮಗೆ ಯಾವಾಗಲೂ ಜವಾಬ್ದಾರಿ ಇದ್ದೇ ಇರುತ್ತದೆ. ಹಾಗಂತ ಅದು ಟಾಸ್ಕ್ ಅಂತಲ್ಲ. ಸಚಿವರು, ಶಾಸಕರಿಗೆಲ್ಲ ನೈತಿಕ ಜವಾಬ್ದಾರಿ ಇರುತ್ತದೆ. ಲೋಕಸಭೆ ಚುನಾವಣೆಗೆ ಸ್ಪರ್ಧೆಗೆ ಹೈಕಮಾಂಡ್‌ ಸೂಚಿಸಿದರೆ ನಾನೂ ಸೇರಿದಂತೆ ಯಾವುದೇ ಸಚಿವರೂ ಸ್ಪ ರ್ಧಿಸಲೇಬೇಕು ಎಂದರು.

Advertisement

ಮೂವರು ಡಿಸಿಎಂ ನೇಮಕ ವಿಚಾರ ಪಕ್ಷದ ನಾಲ್ಕು ಗೋಡೆಗಳ ಮಧ್ಯೆ ವಿಚಾರ ಮಾಡುವ ವಿಷಯವೇ ಹೊರತು, ಬಹಿರಂಗ ಚರ್ಚೆ ಮಾತನಾಡುವ ವಿಚಾರ ಅಲ್ಲ ಎಂದರು. ನಿಗಮ-ಮಂಡಳಿ ನೇಮಕ ವಿಚಾರದಲ್ಲಿ ನಾವು ಹೈಕಮಾಂಡ್‌ ಗುಲಾಮರಲ್ಲ ಎಂಬ ಸಚಿವ ರಾಜಣ್ಣ ಹೇಳಿಕೆ ನನ್ನ ಗಮನಕ್ಕೆ ಬಂದಿಲ್ಲ. ಆದರೆ ಹೈಕಮಾಂಡ್‌ ಹೇಳಿದ್ದನ್ನು ನಾವೆಲ್ಲರೂ ಒಪ್ಪಿಕೊಳ್ಳಬೇಕು. ಸದ್ಯಕ್ಕೆ ಶಾಸಕರು, ಪಕ್ಷದ ಮುಖಂಡರನ್ನು ಪರಿಗಣಿಸಿದ್ದು, ಉಳಿದವರ ನೇಮಕದ ಸಂದರ್ಭ ರಾಜಣ್ಣ ಹೇಳಿಕೆಯೂ ಪರಿಗಣನೆ ಆಗಲಿದೆ ಎಂಬ ನಂಬಿಕೆ ಇದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next