ಬೆಂಗಳೂರು: ಸೌದಿ ಅರೇಬಿಯಾದ ದೊರೆ ಹಾಗೂ ಇಸ್ಲಾಂ ಧರ್ಮದ ಕುರಿತು ಆಕ್ಷೇಪಾರ್ಹ ಮಾಹಿತಿ ಪೋಸ್ಟ್ ಮಾಡಿದ್ದ ಆರೋಪದಲ್ಲಿ ಸೌದಿಯಲ್ಲಿ ಬಂಧಿತನಾಗಿರುವ ಮಂಗಳೂರಿನ ಶೈಲೇಶ್ ಕುಮಾರ್ ಅವರನ್ನು ಸೆ.3ಕ್ಕೆ ಭೇಟಿ ಮಾಡಲು ಅನುಮತಿ ಸಿಕ್ಕಿದೆ ಎಂದು ಸೌದಿಯಲ್ಲಿರುವ ಭಾರತದ ರಾಯಭಾರ ಕಚೇರಿಯ ಅಧಿಕಾರಿ ಮೋಯಿನ್ ಅಖ್ತರ್ ಹೈಕೋರ್ಟ್‌ಗೆ ತಿಳಿಸಿದ್ದಾರೆ.
ಪತಿಯ ಬಿಡುಗಡೆ ಕೋರಿ ಶೈಲೇಶ್ ಕುಮಾರ್ ಪತ್ನಿ ಕವಿತಾ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾ| ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.
ಈ ವೇಳೆ ಸೌದಿಯಲ್ಲಿರುವ ಭಾರತದ ರಾಯಭಾರ ಕಚೇರಿಯ ಅಧಿಕಾರಿ ಮೋಯಿನ್ ಅಖ್ತರ್ ಅವರಿಂದ ಶೈಲೇಶ್ ಕುಮಾರ್ ಅವರ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ನ್ಯಾಯಪೀಠ ಪಡೆದುಕೊಂಡಿತು. ನಮ್ಮ ಅಧಿಕಾರಿಗಳು ಶೈಲೇಶ್ ಅವರನ್ನು ಭೇಟಿ ಮಾಡಲು ಅನುಮತಿ ಕೋರಿದ್ದರು. ಇದಕ್ಕೆ ಸಮ್ಮತಿ ದೊರೆತಿದ್ದು, ಸೆ. 3 ರಂದು ಅಧಿಕಾರಿಗಳು ಅವರನ್ನು ಭೇಟಿ ಮಾಡಲಿ¨ªಾರೆ. ಆ ವೇಳೆ ಶೈಲೇಶ್ ಅವರಿಗೆ ತೀರ್ಪಿನ ಪ್ರತಿ ನೀಡಲಾಗಿದೆಯೇ ಎಂದು ಕೇಳಿ ಅದನ್ನು ಪಡೆಯಲಾಗುವುದು. ನಮ್ಮ ಮಟ್ಟದಲ್ಲಿ ಎಲ್ಲ ಪ್ರಯತ್ನ ಮುಗಿದ ಬಳಿಕ ಪ್ರಕರಣವನ್ನು ಸಂಬಂಧಪಟ್ಟ ಸರಕಾರಗಳ ಮಟ್ಟಕ್ಕೆ ಕೊಂಡೊಯ್ಯಲಾಗುವುದು ಎಂದು ನ್ಯಾಯಾಲಯಕ್ಕೆ ವಿವರಿಸಿದರು.
ಸೌದಿ ಅರೇಬಿಯಾದ ಆಡಳಿತದ ಸೂಚನೆಯಂತೆ ಶೈಲೇಶ್ ಕುಮಾರ್‌ಗೆ ವಿಧಿಸಿರುವ ಶಿಕ್ಷೆಯ ಆದೇಶ ಪಡೆಯಲು ನಮ್ಮ ಅಧಿಕಾರಿ ಖುದ್ದು ಭೇಟಿ ನೀಡಿದ್ದರು. ಆದರೆ ಆದೇಶ ಪ್ರತಿ ನೀಡಲಿಲ್ಲ. ಬದಲಿಗೆ ಈಮೇಲ್ ಕಳುಹಿಸುವಂತೆ ಸೂಚಿಸಲಾಗಿತ್ತು. ಅದರಂತೆ ಈ ಮೇಲ್ ಕಳುಹಿಸಲಾಗಿದ್ದು, ಇದುವರೆಗೂ ಆದೇಶ ಪ್ರತಿ ದೊರೆತಿಲ್ಲ. ಈ ಸಂಬಂಧ ಸೌದಿ ಅರೇಬಿಯಾದ ವಿದೇಶಾಂಗ ಇಲಾಖೆಗೆ ಪತ್ರ ಬರೆಯಲಾಗಿದ್ದು, ಭಾರತದ ಅಂಬಾಸಿಡರ್ ಅವರು ಸೌದಿ ಅರೇಬಿಯಾದ ಕಾನೂನು ಇಲಾಖೆಗೂ ಪತ್ರ ಬರೆದಿ¨ªಾರೆ. ಸೌದಿ ಅರೇಬಿಯಾದ ವಿದೇಶಾಂಗ ಇಲಾಖೆಯ ಅಧಿಕಾರಿಗಳನ್ನು ಖುದ್ದು ಭೇಟಿ ಮಾಡಿ ಮನವಿ ಮಾಡಿದ್ದರೂ ತೀರ್ಪಿನ ಪ್ರತಿ ನೀಡಿಲ್ಲ ಎಂದು ನ್ಯಾಯಪೀಠಕ್ಕೆ ಮೋಯಿನ್ ಅಖ್ತರ್ ವಿವರಿಸಿದರು.
ಇದನ್ನು ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆಯನ್ನು ಸೆ.11ಕ್ಕೆ ಮುಂದೂಡಿತು.