Advertisement

Election Commission; ಪದವೀಧರ, ಶಿಕ್ಷಕರ ಮತಪಟ್ಟಿಗೆ ಹೆಸರು ಸೇರಿಸಲು ಅವಕಾಶ

11:59 PM May 03, 2024 | Team Udayavani |

ಬೆಂಗಳೂರು: ಜೂನ್‌ 3ರಂದು ಮತದಾನ ನಡೆಯಲಿರುವ ಮೂರು ಪದವೀಧರ ಮತ್ತು ಮೂರು ಶಿಕ್ಷಕರ ಕ್ಷೇತ್ರಗಳ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಮೇ 6ರ ವರೆಗೆ ಚುನಾವಣ ಆಯೋಗ ಕಾಲಾವಕಾಶ ನೀಡಲಾಗಿದೆ.

Advertisement

2023ರ ಡಿ.12ರಂದು ಚು. ಆಯೋಗ ಸಿದ್ಧಪಡಿಸಿರುವ ಮತದಾರರ ಪಟ್ಟಿ ಪ್ರಕಾರ ಈಶಾನ್ಯ, ನೈಋತ್ಯ ಹಾಗೂ ಬೆಂಗ ಳೂರು ಪದವೀಧರ ಕ್ಷೇತ್ರದಲ್ಲಿ ಒಟ್ಟು 3,24,502 ಮತದಾರರಿದ್ದು, ಆಗ್ನೇಯ, ನೈಋತ್ಯ ಮತ್ತು ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ 61,263 ಮತದಾರರಿದ್ದಾರೆ. 6 ಕ್ಷೇತ್ರಗಳ ದ್ವೈವಾರ್ಷಿಕ ಚುನಾವಣೆ ಸಂಬಂಧ ಈಗಾಗಲೇ ಚುನಾವಣ ಆಯೋಗ ವೇಳಾಪಟ್ಟಿ ಬಿಡುಗಡೆ ಮಾಡಿದ್ದು, ಮೇ 2ರ ಗುರುವಾರದಿಂದಲೇ ನೀತಿ ಸಂಹಿತೆ ಜಾರಿಗೆ ಬಂದಿದೆ.

ಈಗಲೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಲು ಆಯೋಗ ಅವಕಾಶ ಮಾಡಿಕೊಟ್ಟಿದ್ದು ಮೇ 6ರ ಸೋಮವಾರದೊಳಗಾಗಿ ಅರ್ಜಿ ಭರ್ತಿ ಮಾಡಿಕೊಟ್ಟರೆ ಅಂಥ‌ವರ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲಿದೆ. ಅಂದು ಸಂಜೆ 5.30ರ ವರೆಗೆ ಮತದಾರರ ಪಟ್ಟಿಗೆ ಸೇರಲು ಅನುಕೂಲ ಮಾಡಿಕೊಡಲಾಗಿದೆ. ಅರ್ಹರ ಶಿಕ್ಷಕರು, ಪದವೀಧರರು ಚುನಾವಣಾಧಿಕಾರಿ ಬಳಿ ಹೆಸರು ನೋಂದಣಿ ಮಾಡಿಕೊಂಡು ಮತದಾರರ ಪಟ್ಟಿ ಯಲ್ಲಿ ಹೆಸರಿದ್ದರೆ, ಈ ಬಾರಿಯ ಚುನಾವಣೆಯಲ್ಲೇ ಮತದಾನ ಮಾಡುವ ಅವಕಾಶವೂ ಸಿಗಲಿದೆ.

ಮೇ 9ರಂದು ಅಧಿಸೂಚನೆ ಹೊರಬೀಳಲಿದ್ದು, ಅಂದಿನಿಂದ ಮೇ 16ರ ವರೆಗೆ ನಾಮಪತ್ರ ಸಲ್ಲಿಸಬಹುದು. ಮರುದಿನ ನಾಮಪತ್ರಗಳ ಪರಿಶೀ ಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಮೇ 20 ಕೊನೆಯ ದಿನ. ಜೂ.3ರಂದು ಮತದಾನ ನಡೆದು, 6ರಂದು ಫ‌ಲಿತಾಂಶ ಹೊರಬೀಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next