ಉಡುಪಿ: ಕೃಷಿಯನ್ನು ಶ್ರದ್ಧೆಯಿಂದ ಆಧುನಿಕ ಪದ್ಧತಿಯೊಂದಿಗೆ ಮಾಡಿದಲ್ಲಿ ಯಶಸ್ಸು ಖಚಿತ. ಕೋವಿಡ್ ಸಂಕಷ್ಟದಲ್ಲಿ ನಿರು ದ್ಯೋಗಿಗಳಿಗೆ ಕೃಷಿ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿವೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು.
ನಿಟ್ಟೂರು ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ “ಹಡಿಲು ಗದ್ದೆ ಕೃಷಿ’ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಶಾಸಕ ಕೆ. ರಘುಪತಿ ಭಟ್ ಮಾತನಾಡಿ, ಕನ್ನಡ ಮಾಧ್ಯಮದಲ್ಲಿ ಉಚಿತವಾಗಿ ಗುಣಮಟ್ಟದ ಶಿಕ್ಷಣ ನೀಡುತ್ತಾ ಬಂದ ನಿಟ್ಟೂರು ಪ್ರೌಢಶಾಲೆ ತನ್ನ ಸುವರ್ಣ ಪರ್ವವನ್ನು ಕೃಷಿ ಅಭಿಯಾನದ ಮೂಲಕ ಆಚರಿಸುತ್ತಿರು ವುದು ಅರ್ಥಪೂರ್ಣ ಎಂದರು.
50 ಎಕ್ರೆ ಗದ್ದೆಗೆ ವಿಸ್ತರಣೆ
ಮುಖ್ಯ ಶಿಕ್ಷಕ ಮುರಲಿ ಕಡೆಕಾರ್ ಮಾತನಾಡಿ, ಇಂದು ನಿಟ್ಟೂರಿನಲ್ಲಿ ಉದ್ಘಾಟನೆಗೊಂಡ ಈ ಅಭಿಯಾನ ಮುಂದೆ ಪುತ್ತೂರು, ಕಕ್ಕುಂಜೆ, ಕರಂಬಳ್ಳಿ, ಪೆರಂಪಳ್ಳಿಯಲ್ಲಿ ಸುಮಾರು 50 ಎಕ್ರೆ ಹಡಿಲು ಗದ್ದೆ ನಾಟಿ ಕಾರ್ಯದ ಮೂಲಕ ಮುನ್ನಡೆಯಲಿದೆ ಎಂದರು.
ಗದ್ದೆಯ ಮಾಲಕರನ್ನು ಗೌರವಿಸ ಲಾಯಿತು. ನಗರಸಭೆ ಸದಸ್ಯರಾದ ಸಂತೋಷ್ ಜತ್ತನ್, ಬಾಲಕೃಷ್ಣ ಶೆಟ್ಟಿ, ನಿಟ್ಟೂರು ಎಜುಕೇಶನಲ್ ಸೊಸೈಟಿಯ ಉಪಾಧ್ಯಕ್ಷ ಎಸ್.ವಿ. ಭಟ್, ಕಾರ್ಯ ದರ್ಶಿ ಭಾಸ್ಕರ ಡಿ. ಸುವರ್ಣ, ವೇಣುಗೋಪಾಲ ಆಚಾರ್ಯ, ಶಾಲಾ ಹಳೆವಿದ್ಯಾರ್ಥಿಗಳಾದ ಪ್ರದೀಪ್ ಜೋಗಿ, ಪಿ. ದಿನೇಶ್ ಪೂಜಾರಿ, ಸಂತೋಷ್ ಕರ್ನೇಲಿಯೊ, ಹರೀಶ್ ಆಚಾರ್ಯ, ಡಾ| ಪ್ರತಿಮಾ ಜಯಪ್ರಕಾಶ್, ಶಶಿಪ್ರಭಾ ಕಾರಂತ್, ರಾಜು ಶೆಟ್ಟಿ, ಅನಿಲ್ ಶೆಟ್ಟಿ, ಮಂಜುನಾಥ, ಡೊನಾಲ್ಡ್ ಡಿ’ಸೋಜಾ, ರಾಕೇಶ್ ಶೆಟ್ಟಿ, ಲೋಕೇಶ್, ಯೋಗೀಶ್ ಸುವರ್ಣ, ಮಿಥುನ್ ಶೆಟ್ಟಿ ಮುಂತಾದವರಿದ್ದರು. ಸುವರ್ಣಪರ್ವ ಸಮಿತಿ ಅಧ್ಯಕ್ಷ ಯೋಗಿಶ್ಚಂದ್ರಾಧರ್ ವಂದಿಸಿದರು. ಬಳಿಕ
ಮಹಾಬಲ ಶೆಟ್ಟಿ ಅವರ ಮಾರ್ಗದರ್ಶನ ದಲ್ಲಿ ಅರ್ಧ ಎಕ್ರೆ ಗದ್ದೆಯನ್ನು ಶಾಲಾ ಹಳೆವಿದ್ಯಾರ್ಥಿಗಳು, ಊರವರು ನಾಟಿ ಮಾಡಿದರು.