Advertisement

ಕಟ್ಟುನಿಟ್ಟಿನ ಮಾರ್ಗ ಸೂಚಿಯನ್ವಯ ಕ್ರೀಡಾ ತರಬೇತಿಗೆ ಅವಕಾಶ

01:47 AM May 21, 2020 | Sriram |

ಹೊಸದಿಲ್ಲಿ: ಆ್ಯತ್ಲೀಟ್‌ಗಳು ಇನ್ನು ಮುಂದೆ ಪರಸ್ಪರ ಕೈಕುಲುಕುವ ಮತ್ತು ತಬ್ಬಿಕೊಳ್ಳುವ ಹಾಗಿಲ್ಲ. ತರಬೇತಿ ಶಿಬಿರಗಳಲ್ಲಿ ಅಥವಾ ಮೈದಾನಗಳಲ್ಲಿ ಉಗುಳುವ ಹಾಗೂ ಇಲ್ಲ. ಇಂತಹ ಕೆಲವು ಕಟ್ಟುನಿಟ್ಟಿನ ನಿರ್ಬಂಧಗಳೊಂದಿಗೆ ಕ್ರೀಡಾ ತರಬೇತಿ ಆರಂಭಿಸಲು ಭಾರತೀಯ ಆ್ಯತ್ಲೆಟಿಕ್ಸ್‌ ಫೆಡರೇಶನ್‌ (ಎಎಫ್ಐ) ಅನುಮತಿ ನೀಡಿದೆ.

Advertisement

ಒಂಬತ್ತು ಪುಟಗಳ ಅನುಮತಿ ಪತ್ರದಲ್ಲಿ, ಎಎಫ್ಐ ಎರಡು ಕೇಂದ್ರಗಳಲ್ಲಿ ಆ್ಯತ್ಲೀಟ್‌ಗಳಿಗೆ ಹೊರಾಂಗಣ ಮತ್ತು ಜಿಮ್‌ ತರಬೇತಿಯನ್ನು ಪುನರಾರಂಭಿಸಲು ತನ್ನ ಸ್ಟಾಂಡರ್ಡ್‌ ಆಪರೇಟಿಂಗ್‌ ಕಾರ್ಯವಿಧಾನವನ್ನು ರೂಪಿಸಿದೆ. ಭಾರತೀಯ ಪುರುಷರ ಮತ್ತು ಮಹಿಳಾ ಹಾಕಿ ತಂಡದ ಸಂಭಾವ್ಯ ಆಟಗಾರರು ಬೆಂಗಳೂರಿನಲ್ಲಿದ್ದರೆ, ಸ್ಟಾರ್‌ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ ಸೇರಿದಂತೆ ಟ್ರ್ಯಾಕ್‌ ಮತ್ತು ಫೀಲ್ಡ್‌ ಆ್ಯತ್ಲೀಟ್‌ಗಳು ಎನ್‌ಐಎಸ್‌ ಪಟಿಯಾಲದಲ್ಲಿದ್ದಾರೆ.

ಕಟ್ಟುನಿಟ್ಟಾದ ಮಾರ್ಗಸೂಚಿಗಳಲ್ಲಿ ಉಗುಳುವುದು, ಕೈಕುಲುಕುವುದು ಅಥವಾ ಅಪ್ಪುಗೆ, ಗುಂಪಾಗಿ ವಾಕಿಂಗ್‌ ಅಥವಾ ಟ್ರೈನಿಂಗ್‌ ನಡೆಸುವುದನ್ನು ನಿಷೇಧಿಸಲಾಗಿದೆ. ಕೈಯಲ್ಲಿ ಹಿಡಿಯುವ ಉಪಕರಣಗಳಾದ ಜಾವೆಲಿನ್‌, ಡಿಸ್ಕಸ್‌ ಇತ್ಯಾದಿಗಳನ್ನು ಬಳಕೆಗೆ ಮೊದಲು ಮತ್ತು ಅನಂತರ ಸ್ವತ್ಛಗೊಳಿಸುವುದು ಕಡ್ಡಾಯವಾಗಿರಲಿದೆ. ಮಾತ್ರವಲ್ಲದೆ ಸೆಲೂನ್‌,ಬ್ಯೂಟಿ ಪಾರ್ಲರ್‌ಗಳು, ಶಾಪಿಂಗ್‌ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಪ್ರತಿಯೊಬ್ಬರು ಕಡ್ಡಾಯವಾಗಿ ಆರೋಗ್ಯಸೇತು ಆ್ಯಪ್‌ ಬಳಕೆ ಮಾಡಬೇಕು ಎಂದು ತನ್ನ ಮಾರ್ಗಸೂಚಿಯಲ್ಲಿ ತಿಳಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next