Advertisement

ಅರ್ಜಿ ಭರ್ತಿಮಾಡುವವರಿಗಿದೆ ಅವಕಾಶ

10:48 PM Feb 04, 2020 | mahesh |

ಬಹುತೇಕರ ನೆಚ್ಚಿನ ಕನಸು ಕಲಿಕೆಯೊಂದಿಗೆ ಏನಾದರೂ ಸಾಧನೆ ಹೊಂದಲು ಸಾಧ್ಯವೇ ಎಂಬುದು. ಆದುದರಿಂದ ನ್ಮಮ್ಮಲ್ಲಿನ ಕೌಶಲ ಬಳಸಿಕೊಂಡು ಕಲಿಕೆಯ ಜತೆ ಜತೆಗೆ ಸ್ವಾವಲಂಬಿಯಾಗಲು ಬಯಸುವವರಿಗೆ ಅನೇಕ ಅವಕಾಶಗಳಿದ್ದು, ಅದರಲ್ಲಿ ವಿವಿಧ ಯೋಜನೆಗಳಿಗೆ ಅರ್ಜಿ ಭರ್ತಿ ಮಾಡುವ ಕೆಲಸ ಪೂರಕವಾಗಿದೆ.

Advertisement

ಇದಕ್ಕೆ ಬೇಕಾದ ಪೂರ್ವತಯಾರಿ ಮಾಡಿಕೊಳ್ಳು ವುದರಿಂದ ವಿದ್ಯಾರ್ಜನೆಯ ಜತೆಗೆ ನಮಗೆ ಬೇಕಾದ ಹಣ ಸಂಪಾದನೆ ಮಾಡಿಕೊಂಡು ಸ್ವಾವಂಬಿಯಾಗಿ ಬದುಕಲು ಇಂತಹ ಉತ್ತಮ ಮಾರ್ಗಗಳು ಸೂಕ್ತವಾಗಿರುತ್ತವೆೆ. ಅಲ್ಲದೆ ನಮ್ಮಲ್ಲಿನ ಜ್ಞಾನ ಇನ್ನಷ್ಟು ವೃದ್ಧಿಯಾಗುವುದರ ಜತೆಗೆ ಮುಂದಿನ ಭವಿಷ್ಯಕ್ಕೆ ಒಂದು ಉತ್ತಮ ದಾರಿ ದೊರೆತಂತಾಗುತ್ತದೆ.

ಬೇಕಾಗುವ ಕೌಶಲಗಳು:
ಸಾಫ್ಟ್ ಸ್ಕಿಲ್ಸ್‌ ಬೆಳೆಸಿಕೊಳ್ಳಿ: ವೃತ್ತಿಗೆ ಸಂಬಂಧಿಸಿದ ಜ್ಞಾನ, ವ್ಯಕ್ತಿತ್ವ ಸಾಮಾಜಿಕ ನಡವಳಿಕೆ ಜತೆಗೆ ಅಭ್ಯರ್ಥಿ ಮಾಡಬೇಕಾಗಿರುವ ಕೆಲಸಗಳಿಗೆ ಬೇಕಾದ ಇತರ ಅಂಶಗಳನ್ನು ಮೊದಲೇ ತಿಳಿದಿರಬೇಕು.

ಇಂಗ್ಲಿಷ್‌ ಸಂವಹನ ಕಲಿಯಿರಿ:
ಪ್ರಸ್ತುತ ಉದ್ಯೋಗ ಮಾರುಕಟ್ಟೆಯಲ್ಲಿ ಇಂಗ್ಲಿಷ್‌ ಬಲ್ಲವರಿಗೆ ಅವಕಾಶಗಳು ಲಭ್ಯ. ಆದುದರಿಂದ ಕನ್ನಡ ಭಾಷೆಯ ಜತೆಗೆ ಇಂಗ್ಲಿಷ್‌ ಭಾಷೆಯೂ ಸಹಕಾರಿಯಾಗುತ್ತದೆ.

ಅರ್ಜಿ ಭರ್ತಿ ಮಾಡುವುದನ್ನು ತಿಳಿದಿರಬೇಕು:
ಅರ್ಜಿಯಲ್ಲಿ ನಮೂದಿಸಿರುವ ಅಂಶಗಳನ್ನು ಯಾವುದೇ ತಪ್ಪಿಲ್ಲದಂತೆ ಭರ್ತಿ ಮಾಡಲು ಕಲಿಯಬೇಕು.
ಸರಕಾರದ ಯೋಜನೆಗಳ ಬಗ್ಗೆ ತಿಳಿದಿರಬೇಕು: ವೃದ್ಧಾಪ್ಯ ವೇತನ, ಸ್ಕಾಲರ್‌ಶಿಪ್‌, ಕಂದಾಯ, ಉದ್ಯೋಗ ಅರ್ಜಿ, ರೈತರ ಸೌಲಭ್ಯಗಳಿಗೆ ಸಂಬಂಧಿಸಿದ ಅರ್ಜಿಯ ಕುರಿತು ತಿಳಿದಿರಬೇಕು ಅದಕ್ಕೆ ಬೇಕಾದ ಪೂರಕ ಮಾಹಿತಿಗಳನ್ನು ಪಡೆದುಕೊಂಡು ಸಿದ್ಧತೆ ನಡೆಸಿಕೊಂಡಿರಬೇಕು.

Advertisement

ಶುಲ್ಕ:
ನೀವು ನಿಗದಿಪಡಿಸುವ ಶುಲ್ಕ, ಅರ್ಜಿಗೆ ಪೂರಕವಾಗುವಂತಿರಲಿ, ಅತೀ ಹೆಚ್ಚು ಶುಲ್ಕದಿಂದ ನಿಮಗೆ ನಷ್ಟವಾಗಬಹುದು. ಆದುದರಿಂದ ಅರ್ಜಿಯ ಆಧಾರದ ಮೇಲೆ ಹಾಗೆಯೆ ಕೆಲವೊಂದು ಸನ್ನಿವೇಶಗಳ ಆಧಾರದ ಮೇಲೆ ಶುಲ್ಕ ನಿಗದಿ ಪಡಿಸುವುದು ಉತ್ತಮ.

ಅರೆಕಾಲಿಕ ಉದ್ಯೋಗದ ಜತೆ ಜತೆಗೆ ಉತ್ತಮ ಸಂಪರ್ಕ, ಜ್ಞಾನ ವೃದ್ಧಿಗೆ ಇದು ತುಂಬಾನೆ ಸಹಕಾರಿಯಾಗಿದೆ.

ಎಲ್ಲೆಲ್ಲಿದೆ ಇಂತಹ ಅವಕಾಶಗಳು:
ಸೈಬರ್‌ ಸೆಂಟರ್‌, ಮಿನಿ ವಿಧಾನಸೌಧ, ಪಂಚಾಯತ್‌ ಕಚೇರಿ, ಬ್ಯಾಂಕ್‌, ತಾಲೂಕು ಕಚೇರಿ, ಜಿಲ್ಲಾ ಪಂಚಾಯತ್‌, ನೆಮ್ಮದಿ ಕೇಂದ್ರ ಇತರೆ.

ಸ್ಪಷ್ಟ ಭಾಷೆ ತಿಳಿದಿರಬೇಕು
ಕನ್ನಡ, ಇಂಗ್ಲಿಷ್‌ ಭಾಷೆ ಎರಡೂ ಸ್ಪಷ್ಟವಾಗಿ ತಿಳಿದಿರಬೇಕು. ಯಾವುದೇ ಗೊಂದಲವಿಲ್ಲದೆ ಅರ್ಜಿಯನ್ನು ಭರ್ತಿ ಮಾಡುವಂತಿರಬೇಕು.

ಸಮಯ
ನಿಮ್ಮ ಸಮಯವನ್ನು ನೀವೇ ಹೊಂದಿಸಿಕೊಳ್ಳಬೇಕಾಗುತ್ತದೆ. ಸಮಯ ಅತ್ಯಂತ ಪ್ರಮುಖ ವಾಗಿರುವುದರಿಂದ ನಿಮ್ಮ ಕಲಿಕೆಗೂ ಇದು ತೊಂದರೆಯಾಗದಂತೆ ನಿಭಾಯಿಸಿಕೊಳ್ಳುವುದು ಮುಖ್ಯ ವಾಗುತ್ತದೆ. ಹಾಗೆಯೇ ಯಾವ ಸಮಯದಲ್ಲಿ ಹೆಚ್ಚು ಜನರು ಅರ್ಜಿಗಳನ್ನು ಸಲ್ಲಿಸಲು ಬರುತ್ತಾರೆ ಎಂಬುದನ್ನು ತಿಳಿದುಕೊಂಡರೆ ಇನ್ನಷ್ಟು ಉತ್ತಮ.

- ವಿಜೀತಾ ಅಮೀನ್‌

Advertisement

Udayavani is now on Telegram. Click here to join our channel and stay updated with the latest news.

Next