Advertisement

ಅವಕಾಶವಾದಿ ಮೈತ್ರೀ

11:35 AM May 17, 2018 | |

ಬೆಂಗಳೂರು: ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳದಿದ್ದರೂ ಇಬ್ಬರದೂ ಸಮಾನ ಪ್ರಣಾಳಿಕೆ ಇಲ್ಲದಿದ್ದರೂ ಅಧಿಕಾರದ ಹಪಾಹಪಿಗಾಗಿ ಒಂದಾಗಿವೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್‌ರಾವ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಫ‌ಲಿತಾಂಶ ಹೊರಬಿದ್ದ ನಂತರ ನಡೆಯುತ್ತಿರುವ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ರಾಜ್ಯ ಪಾಲರು ಬಿಜೆಪಿ ಮಂಡಿಸಿದ ಅಂಶ ಗಳಲ್ಲಿನ್ನು ಪರಿಗಣಿಸಿ ನಮಗೆ ಸರ್ಕಾರ ರಚನೆಗೆ ಅವಕಾಶ ಕೊಟ್ಟಿದ್ದಾರೆ.

ಸಂವಿಧಾನದ ಪ್ರಕಾರ ಹಾಗೂ ಎಸ್‌.ಆರ್‌.ಬೊಮ್ಮಾಯಿ ಪ್ರಕರಣ ಸೇರಿ ಇತರೆ ಪ್ರಕರಣಗಳಲ್ಲಿ ಅತಿ ದೊಡ್ಡ ಪಕ್ಷಕ್ಕೆ ಸರ್ಕಾರ ರಚನೆಗೆ ಅವಕಾಶ ಕೊಡಬೇಕು ಎಂಬುದು ಸುಪ್ರೀಂಕೋರ್ಟ್‌ ತೀರ್ಪು ಇದೆ. ಅದರ ಪ್ರಕಾರ ರಾಜ್ಯಪಾಲರು ನಡೆದುಕೊಂಡಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿದೆ. 222 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನ ಗಳಿಸಿದೆ.

ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪರಸ್ಪರ ವಾಗ್ದಾಳಿ ನಡೆಸಿ ಹೋರಾಟ ನಡೆಸಿದ್ದವು. ಸಿದ್ಧಾಂತ,
ತತ್ವ, ಚುನಾವಣಾ ಪೂರ್ವ ಮೈತ್ರಿ, ಸಮಾನ ಪ್ರಣಾಳಿಕೆ, ಒಪ್ಪಂದ ಯಾವುದೂ ಇಲ್ಲ. ಎರಡೂ ಪಕ್ಷಗಳು
ಪರಸ್ಪರ ಟೀಕೆಗಳನ್ನು ಮಾಡಿಕೊಂಡಿದ್ದವು. ಬಹಿರಂಗವಾಗಿ ಮಾತಿನ ಸಮರ ನಡೆಸಿದ್ದವು. 

ಚುನಾವಣೆ ಫ‌ಲಿತಾಂಶ ಬಂದ ನಂತರ ಬಿಜೆಪಿ ಅತಿ ಹೆಚ್ಚು ಸೀಟು ಗಳಿಸಿದ ಪಕ್ಷವಾಗಿ ಹೊರಹೊಮ್ಮಿದ
ಮೇಲೆ ಅಧಿಕಾರ ದಾಹದಿಂದ ಒಂದಾಗಿವೆ. ರಾಜ್ಯದ ಜನತೆ ಐದು ವರ್ಷದ ಕಾಂಗ್ರೆಸ್‌ ಸರ್ಕಾರದ ಆಡಳಿತವನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಆಡಳಿತ ವಿರೋಧಿ ಅಲೆಯಲ್ಲಿ ಕಾಂಗ್ರೆಸ್‌ ಕೊಚ್ಚಿ ಹೋಗಿದೆ. ಪ್ರಜಾಪ್ರಭುತ್ವ
ವ್ಯವಸ್ಥೆಯಲ್ಲಿ ಬಹುಮತ ಜನಮತಕ್ಕೆ ಗೌರವ ಕೊಡಬೇಕು. ಆದರೆ, ಕಾಂಗ್ರೆಸ್‌-ಜೆಡಿಎಸ್‌ ಅಪವಿತ್ರ ಮೈತ್ರಿ ಮಾಡಿಕೊಳ್ಳಲು ಮುಂದಾಗಿದೆ. ಈ ಮೂಲಕ ಸಂವಿಧಾನಕ್ಕೂ ಅಪಚಾರ ಮಾಡಲು ಮುಂದಾಗಿದೆ.

Advertisement

ಹೀಗಾಗಿ, ನಾವು ರಾಜ್ಯಪಾಲರ ಬಳಿ ಮುಕ್ತ ಹಾಗೂ ಪ್ರಜಾಪ್ರಭುತ್ವದ ಗೌರವ ಎತ್ತಿ ಹಿಡಿಯಲು ನಮ್ಮ
ಬದ್ಧತೆ ತೋರಿಸಿದ್ದೆವು. ಬಿ.ಎಸ್‌.ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಆಹ್ವಾನ
ವನ್ನು ರಾಜ್ಯಪಾಲರು ನೀಡಿದ್ದಾರೆ. ನಮಗೆ ವಿಶ್ವಾಸವಿದೆ, ನಮ್ಮ ನಾಯಕ ಯಡಿಯೂರಪ್ಪ ಅವರು ಬಹುಮತ
ಸಾಬೀತುಪಡಿಸಲಿದ್ದಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next