ಆನ್ ಲೈನ್ ಮಾರಾಟ ಹೆಚ್ಚು ಜನಪ್ರಿಯವಾಗುತ್ತಿರುವುದನ್ನು ಅರಿತ ಒಪ್ಪೋ ಮೊಬೈಲ್ ಕಂಪೆನಿ, ಆ ಉದ್ದೇಶಕ್ಕಾಗಿಯೇ ರಿಯಲ್‌ಮಿ ಎಂಬ ಬ್ರಾಂಡ್ ಆರಂಭಿಸಿದ್ದು, ಈಗಾಗಲೇ ಎರಡು ಮಾಡೆಲ್‌ಗಳನ್ನು ಬಿಡುಗಡೆ ಮಾಡಿದೆ. ಕಳೆದ ತಿಂಗಳು ರಿಯಲ್ ಮಿ 2 ಎಂಬ ಹೆಸರಿನ ಆರಂಭಿಕ ದರ್ಜೆಯ ಫೋನ್ ಒಂದನ್ನು ಬಿಡುಗಡೆ ಮಾಡಿತ್ತು. ಈಗ ಮೊನ್ನೆ ಗುರುವಾರವಷ್ಟೇ ಹೊಸ ಮಾಡೆಲ್ ಮೊಬೈಲ್ ರಿಯಲ್‌ಮಿ 2 ಪ್ರೊ ಬಿಡುಗಡೆ ಮಾಡಿದೆ. ಆ ಮೂಲಕ, ಫೋನ್, ಮಧ್ಯಮ ದರ್ಜೆಯ ಮೊಬೈಲ್ ವಿಭಾಗದಲ್ಲಿ ಉತ್ತಮ ಪೈಪೋಟಿ ನೀಡಲು ಮುಂದಾಗಿದೆ. ಖಂಡಿತವಾಗಿಯೂ ರಿಯಲ್‌ಮಿ ಶಿಯೋಮಿ ಮತ್ತು ಆನರ್ ಕಂಪೆನಿಗಳಿಗೆ ಸ್ಪರ್ಧೆ ಒಡ್ಡಲು ಉತ್ತಮ ಸ್ಪೆಸಿಫಿಕೇಷನ್ ಅನ್ನು ರಿಯಲ್‌ಮಿ 2 ಪ್ರೊ ದಲ್ಲಿ ನೀಡಿದೆ.
ಇಲ್ಲಿ ರಿಯಲ್‌ಮಿ 2 ಪ್ರೊ ಮೊಬೈಲ್‌ನ ಸ್ಪೆಸಿಕೇಶನ್ ಹಾಗೂ ವೈಶಿಷ್ಟéಗಳ ವಿವರವಷ್ಟೇ ನೀಡಲಾಗಿದೆಯೇ ಹೊರತು, ಅದರ ವಿಮರ್ಶೆ ಅಲ್ಲ. ಮಾರುಕಟ್ಟೆಗೆ ಬಂದು ಗ್ರಾಹಕರು ಬಳಸಿ ನೋಡಿದಾಗ ಮಾತ್ರ ಅದರ ಸಂಪೂರ್ಣ ಸಾಮರ್ಥ್ಯ ಗೊತ್ತಾಗಲಿದೆ.
ರಿಯಲ್‌ಮಿ 2 ಪ್ರೊ ಮಧ್ಯಮ ವರ್ಗದಲ್ಲೇ ಶಕ್ತಿಶಾಲಿ ಪ್ರೊಸೆಸರ್ ಆದ ಜನಪ್ರಿಯ ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 660 ಪ್ರೊಸೆಸರ್ (2.ಗಿಗಾ ಹಟ್ಜ್ì, 8 ಕೋರ್) ಹೊಂದಿದೆ. 4ಜಿಬಿ ರ್ಯಾಮ್ +64 ಜಿಬಿ ಸ್ಟೋರೇಜ್, 6ಜಿಬಿ ರ್ಯಾಮ್+64 ಜಿಬಿ ಸ್ಟೋರೇಜ್ ಮತ್ತು 8ಜಿಬಿ ರ್ಯಾಮ್+128ಜಿಬಿ ಸ್ಟೋರೇಜ್ ಇರುವ ಮೂರು ಆವೃತ್ತಿಗಳಲ್ಲಿ ಮೊಬೈಲ್ ಬಿಡುಗಡೆ ಮಾಡಿದೆ. ಎರಡು ಸಿಮ್ ಜೊತೆಗೆ ಬೇಕಾದರೆ 256 ಜಿಬಿವರೆಗೂ ಮೆಮೊರಿ ಕಾರ್ಡ್ ಕೂಡ ಹಾಕಿಕೊಳ್ಳಬಹುದು. ಎರಡೂ ಸಿಮ್ ಸ್ಲಾಟ್‌ಗಳೂ 4ಜಿ ಆಕ್ಟೀವ್ ಆಗಿವೆ. ಅಂದರೆ ಎರಡೂ ಸ್ಲಾಟ್‌ಗಳಲ್ಲೂ ಜಿಯೋ ಸಿಮ್ ಏಕಕಾಲಕ್ಕೆ ಕಾರ್ಯಾಚರಿಸುತ್ತದೆ.
6.3 ಇಂಚಿನ ಫುಲ್‌ಎಚ್‌ಡಿ ಪ್ಲಸ್ ವಾಟರ್‌ಡ್ರಾಪ್ ನಾಚ್ ಹೊಂದಿರುವ ಅಮೋಲೆಡ್ ಡಿಸ್‌ಪ್ಲೇ ಇದೆ. (ಮೊಬೈಲ್ ಪರದೆಯ ಮೇಲ್ಭಾಗದ ನಡುಮಧ್ಯ ನೀರಿನ ಹನಿಯಂತೆ ಕ್ಯಾಮರಕ್ಕಾಗಿ ಜಾಗ ಬಿಡಲಾಗಿರುತ್ತದೆ. ಇದೇ ವಾಟರ್‌ಡ್ರಾಪ್ ನಾಚ್. ಈ ರೀತಿಯ ಪರದೆ ನೋಡಲು ಸುಂದರ) 90:8 ಅನುಪಾತದ ಪರದೆ ಇದೆ. ಪರದೆಗೆ ಗೊರಿಲ್ಲಾ ಗ್ಲಾಸ್ 3 ರಕ್ಷಣೆ ಸಹ ಇರುವುದು ವಿಶೇಷ. 16+2 ಮೆಗಾಪಿಕ್ಸಲ್ ಡುಯಲ್ ಲೆನ್ಸ್ ಸೋನಿ ಐಎಂಎಕ್ಸ್ 298 ಸೆನ್ಸರ್‌ಉಳ್ಳ ಕ್ಯಾಮರಾ, 16 ಮೆಗಾಪಿಕ್ಸಲ್ ಸೆಲ್ಫಿà ಕ್ಯಾಮರಾ ಇದೆ. 3500 ಎಂಎಎಚ್ ಬ್ಯಾಟರಿ ಹೊಂದಿದ್ದು, (ಒಂದು ದಿನ ಪೂರ್ಣ ಬಳಕೆಗೆ ಬರುತ್ತದೆ) ಬೆರಳಚ್ಚು ಹಾಗೂ ಫೇಸ್ ಅನ್‌ಲಾಕ್ ಎರಡನ್ನೂ ಹೊಂದಿದೆ. ಅಂಡ್ರಾಯ್ಡ 8.1 ಓರಿಯೋ ಆಧಾರಿತ ಕಲರ್ ವಿ5.2 ಕಾರ್ಯಾಚರಣೆ ವ್ಯವಸ್ಥೆ ಹೊಂದಿದೆ.
ಆದರೆ ಈ ಮೊಬೈಲ್ ಮೆಟಾಲಿಕ್ ಬಾಡಿ ಹೊಂದಿಲ್ಲ. ಅಂದರೆ ಲೋಹದ್ದಲ್ಲ. ಪಾಲಿಕಾಬೊನೇಟ್ ಹಿಂಭಾಗ ಮತ್ತು ರಬ್ಬರೈಸಡ್ ಫ್ರೆàಂ ಹೊಂದಿದೆ. ಕಡಿಮೆ ಬೆಲೆಗೆ ನೀಡಲು ರಿಯಲ್‌ಮಿ ಈ ವಿಭಾಗದಲ್ಲಿ ಮೆಟಲ್ ನೀಡದೇ ರಾಜಿ ಮಾಡಿಕೊಂಡಿದೆ. ಕಪ್ಪು, ತೆಳು ನೀಲಿ ಹಾಗೂ ಕಡು ನೀಲಿ ಬಣ್ಣಗಳಲ್ಲಿ ಮೊಬೈಲ್ ಲಭ್ಯವಿದೆ.
ಈಗ ದರದ ವಿಷಯಕ್ಕೆ ಬರೋಣ. 4ಜಿಬಿ+64 ಜಿಬಿ ಮಾಡೆಲ್ ಬೆಲೆ 13,990 ರೂ., 6ಜಿಬಿ+64 ಜಿಬಿ ಬೆಲೆ 15,990 ರೂ. ಹಾಗೂ 8 ಜಿಬಿ+128 ಜಿಬಿ ಮಾಡೆಲ್ ದರ 17,990 ರೂ. ಈ ಮೂರೂ ಮಾಡೆಲ್‌ಗಳು ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರ ಅಕ್ಟೋಬರ್ 11 ರಿಂದ ಲಭ್ಯವಾಗಲಿವೆ.
ರಿಯಲ್‌ಮಿ ಸಿ1: ಇದರ ಜೊತೆಗೆ ರಿಯಲ್‌ಮಿ ಸಿ1 ಎಂಬ ಹೆಸರಿನ ಆರಂಭಿಕ ದರ್ಜೆಯ ಫೋನನ್ನೂ ಕಂಪೆನಿ ಅದೇ ದಿನ ಬಿಡುಗಡೆ ಮಾಡಿದೆ. 6.2 ಇಂಚಿನ ನಾಚ್ ಡಿಸ್‌ಪ್ಲೇ, ಕ್ಯಾಲ್‌ಕಾಮ್ ಸ್ನಾಪ್‌ಡ್ರಾಗನ್ 450 ಪ್ರೊಸೆಸರ್, 2 ಜಿಬಿ ರ್ಯಾಮ್, 16 ಜಿಬಿ ಸ್ಟೋರೇಜ್ ಜೊತೆಗೆಪ್ರತ್ಯೇಕ ಎಸ್‌ಡಿ ಕಾರ್ಡ್ ಹಾಕಿಕೊಳ್ಳುವ ಸ್ಲಾಟ್ ಕೂಡ ಇದೆ. ಫೇಸ್ ಅನ್‌ಲಾಕ್ ಇದೆ. ಬೆರಳಚ್ಚು ಅನ್‌ಲಾಕ್ ಇಲ್ಲ. 13+2 ಮೆಪಿ ಹಿಂಬದಿ ಡುಯಲ್ ಕ್ಯಾಮರಾ, 5 ಮೆಪಿ ಸಿಂಗಲ್ ಮುಂಬದಿ ಕ್ಯಾಮರಾ ಇದೆ. 8.1 ಓರಿಯೋ, ಕಲರ್ 5.1 ಆಪರೇಟಿಂಗ್ ಸಿಸ್ಟಂ ಇದ್ದು, 4,230 ಎಂಎಎಚ್ ಬ್ಯಾಟರಿ ಇದೆ. ಇದರ ದರ 6,999 ರೂ. ಆಗಿದ್ದು, ಇದೂ ಸಹ ಫ್ಲಿಪ್‌ಕಾರ್ಟ್‌ನಲ್ಲೇ ಅಕ್ಟೋಬರ್ 11 ರಿಂದ ಲಭ್ಯವಾಗಲಿದೆ.
ಕೆ.ಎಸ್. ಬನಶಂಕರ ಆರಾಧ್ಯ