Advertisement

“ಓಪೆನ್ ಹೈಮರ್”ನಲ್ಲಿ ಭಗವದ್ಗೀತೆ ಸಾಲಿನ ವಿವಾದ: ದೃಶ್ಯವನ್ನು ಸಮರ್ಥಿಸಿದ ಮಹಾಭಾರತ ನಟ

02:05 PM Jul 25, 2023 | Team Udayavani |

ಮುಂಬಯಿ: ಕ್ರಿಸ್ಟೋಫರ್ ನೋಲನ್ ಅವರ “ಓಪೆನ್ ಹೈಮರ್” ಸಿನಿಮಾ ಬಾಕ್ಸ್‌ ಆಫೀಸ್‌ ನಲ್ಲಿ ಸದ್ದು ಮಾಡುತ್ತಿರುವ ಜೊತೆ ಭಾರತದಲ್ಲಿ ʼಭಗವದ್ಗೀತೆʼಯ ವಿಚಾರವಾಗಿಯೂ ಸುದ್ದಿಯಾಗುತ್ತಿದೆ. ದಿನಕಳೆದಂತೆ “ಓಪೆನ್ ಹೈಮರ್” ಸಿನಿಮಾದಲ್ಲಿನ ಒಂದು ದೃಶ್ಯದ ಬಗ್ಗೆ ವಿವಾದ ಹೆಚ್ಚಾಗುತ್ತಿದೆ.

Advertisement

‘ಸೇವ್ ಕಲ್ಚರ್ ಸೇವ್ ಇಂಡಿಯಾ ಫೌಂಡೇಶನ್’ ಸ್ಥಾಪಕ, ಭಾರತ ಸರ್ಕಾರದ ಮಾಹಿತಿ ಅಧಿಕಾರಿ ಉದಯ್ ಮಹೂರ್ಕರ್ ಅವರು ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿ ಚಿತ್ರತಂಡ ಹಾಗೂ ಸೆಂಟ್ರಲ್ ಬೋರ್ಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿನಿಮಾದಲ್ಲಿ ಮಹಿಳೆಯೊಬ್ಬಳು ದೈಹಿಕ ಸಂಪರ್ಕ ನಡೆಸುವ ವೇಳೆ ( ಸಿನಿಮಾದ ನಾಯಕ ನಟನೊಂದಿಗೆ) ವ್ಯಕ್ತಿಯ ಬಳಿ ಭಗವದ್ಗೀತೆಯ ಸಾಲನ್ನು ಗಟ್ಟಿಯಾಗಿ ಓದುವಂತೆ ಹೇಳುವ ಒಂದು ದೃಶ್ಯವಿದೆ. ಈ ದೃಶ್ಯವನು ತೆಗೆದು ಹಾಕಬೇಕೆಂದು ಆಗ್ರಹ ವ್ಯಕ್ತವಾಗಿದೆ.

ಇದೀಗ ಈ ದೃಶ್ಯದ ಪರವಾಗಿ ಕೆಲವರು ಮಾತನಾಡಿದ್ದಾರೆ. ಬಿಆರ್ ಚೋಪ್ರಾ ಅವರ ಜನಪ್ರಿಯ ದೂರದರ್ಶನ ಧಾರಾವಾಹಿ ʼಮಹಾಭಾರತʼ ದಲ್ಲಿ ಶ್ರೀಕೃಷ್ಣನ ಪಾತ್ರವನ್ನು ಮಾಡಿದ್ದ ನಿತೀಶ್ ಭಾರದ್ವಾಜ್ ಅವರು “ಓಪೆನ್ ಹೈಮರ್” ನ ವಿವಾದಿತ ದೃಶ್ಯವನ್ನು ಸಮರ್ಥಿಸಿಕೊಂಡಿದ್ದಾರೆ.

ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು  “ಓಪನ್‌ಹೈಮರ್  ಅವರು ಪರಮಾಣು ಬಾಂಬ್‌ ತಯಾರಿಸಿ, ಅದನ್ನು ಜಪಾನ್‌ ಜನಸಂಖ್ಯೆಯ ಮೇಲೆ ಬಳಸಿದಾಗ ತಾನು ಮಾಡುತ್ತಿರುವ ಕೆಲಸ ಸರಿಯಾಗಿದೆಯೇ ಎಂದು ತನ್ನನು ತಾನೇ ಪ್ರಶ್ನಿಸುತ್ತಿದ್ದರು. ಅವರು ಕಣ್ಣಂಚಿನಲ್ಲಿ ನೀರು ತುಂಬಿಸಿಕೊಂಡು ಇರುವುದನ್ನು ಅವರ ಸಂದರ್ಶನವೊಂದು ತೋರಿಸುತ್ತದೆ. ಬಹುಶಃ  ಅವರು ತಮ್ಮದೇ ಆವಿಷ್ಕಾರವನ್ನು ಮಾಡಿ ವಿಷಾದಿಸಿರಬಹುದು. ಆವಿಷ್ಕಾರವು ಭವಿಷ್ಯದಲ್ಲಿ ಮಾನವ ಜನಾಂಗವನ್ನು ನಾಶಮಾಡುತ್ತದೆ ಎನ್ನುವುದರ ಬಗ್ಗೆ ಅವರು ಬಹುಶಃ ಪಶ್ಚಾತ್ತಾಪಪಟ್ಟಿದ್ದರು. ಚಿತ್ರದಲ್ಲಿನ ಭಗವದ್ಗೀತೆಯ ಸಾಲಿನ ಬಳಕೆಯನ್ನು ಓಪನ್‌ಹೈಮರ್‌ನ  ಮನಸ್ಸಿನ ಭಾವನಾತ್ಮಕ ಸ್ಥಿತಿಯಿಂದಲೂ ನಾವು ಅರ್ಥಮಾಡಿಕೊಳ್ಳಬೇಕು” ಎಂದು ಅವರು ಹೇಳಿದ್ದಾರೆ.

Advertisement

“ವಿಜ್ಞಾನಿಯು ತನ್ನ ಕ್ರಿಯೇಷನ್‌ ಬಗ್ಗೆ 24×7 x365 ದಿನಗಳವರೆಗೆ ಯೋಚಿಸುತ್ತಾನೆ. ಅವನು ಏನು ಮಾಡುತ್ತಿದ್ದಾನೆ ಎನ್ನುವುದರ ಬಗ್ಗೆ ಲೆಕ್ಕಿಸದೆ ಅವನ ಮನಸ್ಸು ಸಂಪೂರ್ಣ ಅವನು ಸೃಷ್ಟಿಸಿದ ಕ್ರಿಯೇಷನ್‌ ಬಗ್ಗೆಯೇ ಆವರಿಸಿಕೊಂಡಿರುತ್ತದೆ. ಭೌತಿಕ ಕ್ರಿಯೆಯು ಕೇವಲ ನೈಸರ್ಗಿಕ ಯಾಂತ್ರಿಕ ಕ್ರಿಯೆಯಾಗಿದೆ.” ಎಂದು ಅವರು ಹೇಳಿದ್ದಾರೆ.

ಓಪನ್‌ಹೈಮರ್‌ನ ಜೀವನದ ಪ್ರಮುಖ ಕ್ಷಣಗಳ ಈ ಭಾವನಾತ್ಮಕ ಅಂಶಗಳ ಬಗ್ಗೆ ನಾವು ಯೋಚನೆ ಮಾಡಬೇಕೆಂದು ನಟ ಹೇಳಿದ್ದಾರೆ.

“ಈಗ ನಾನು ಮರಣವಾಗಿದ್ದೇನೆ, ಪ್ರಪಂಚದ ವಿನಾಶಕ.” ಎನ್ನುವ ಭಗವದ್ಗೀತೆಯಲ್ಲಿನ ಸಾಲು ಹಿಂದೂ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದೆ ಎಂದು ಕೆಲವರು ಹೇಳಿದ್ದು, ಇದನ್ನು ಸಿನಿಮಾದಿಂದ ತೆಗೆದು ಹಾಕಬೇಕೆಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next