Advertisement

ಈಗ ಲೋಕಸಭೆ ಚುನಾವಣೆ ನಡೆದರೆ ಮೋದಿಗೆ ಭರ್ಜರಿ ಗೆಲುವು

09:10 PM Jul 30, 2022 | Team Udayavani |

ನವದೆಹಲಿ: ಈಗ ಲೋಕಸಭೆ ಚುನಾವಣೆ ನಡೆದರೆ 362 ಲೋಕಸಭಾ ಸ್ಥಾನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಬಹುದು ಎಂದು ಇಂಡಿಯಾ ಟಿವಿ ‘ವಾಯ್ಸ್ ಆಫ್ ದಿ ನೇಷನ್’ ಅಭಿಪ್ರಾಯ ಸಂಗ್ರಹದ ಸಮೀಕ್ಷೆಯಲ್ಲಿ ಹೇಳಲಾಗಿದೆ.

Advertisement

‘ದೇಶ್ ಕಿ ಆವಾಜ್’ (ರಾಷ್ಟ್ರದ ಧ್ವನಿ) ಶೀರ್ಷಿಕೆಯ ಸಮೀಕ್ಷೆಯ ಫಲಿತಾಂಶಗಳನ್ನು ಇಂಡಿಯಾ ಟಿವಿ ಸುದ್ದಿ ವಾಹಿನಿಯಲ್ಲಿ ಶುಕ್ರವಾರ ಸಂಜೆಯಿಂದ ಪ್ರಸಾರ ಮಾಡಲಾಗಿದ್ದು, ಸಮೀಕ್ಷೆಯ ಪ್ರಕಾರ, ಈಗ ಸಾರ್ವತ್ರಿಕ ಚುನಾವಣೆಗಳು ನಡೆದರೆ ಕಾಂಗ್ರೆಸ್ ನೇತೃತ್ವದ ಯುಪಿಎ ಕೇವಲ 97 ಲೋಕಸಭಾ ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಅಂದಾಜಿಸಲಾಗಿದೆ, ಸಣ್ಣ, ಪ್ರಾದೇಶಿಕ ಪಕ್ಷಗಳು ಮತ್ತು ಸ್ವತಂತ್ರರು ಸೇರಿದಂತೆ ಇತರರು 84 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ ಎನ್ನಲಾಗಿದೆ.

ಈಗ ಚುನಾವಣೆ ನಡೆದರೆ ಎನ್‌ಡಿಎ ಶೇಕಡಾ 41, ಯುಪಿಎ ಶೇಕಡಾ 28 ಮತ್ತು ಇತರರು ಶೇಕಡಾ 31 ಮತಗಳನ್ನು ಗಳಿಸಬಹುದು ಎಂದು ಸಮೀಕ್ಷೆ ಹೇಳಿದೆ.

ಸಮೀಕ್ಷೆಯಲ್ಲಿ ನೀಡಲಾದ ರಾಜ್ಯವಾರು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶದಲ್ಲಿ, 80 ಸ್ಥಾನಗಳಲ್ಲಿ 76 ಸ್ಥಾನಗಳನ್ನು ಗೆಲ್ಲಬಹುದು, ಕಾಂಗ್ರೆಸ್ ಮತ್ತು ಇತರರು ತಲಾ ಎರಡು ಸ್ಥಾನಗಳನ್ನು ಮಾತ್ರ ಗೆಲ್ಲುವ ನಿರೀಕ್ಷೆಯಿದೆ. ಬಿಹಾರದಲ್ಲಿ ಎನ್‌ಡಿಎ ಒಟ್ಟು 40 ಸ್ಥಾನಗಳಲ್ಲಿ 35 ಮತ್ತು ಯುಪಿಎ ಐದು ಸ್ಥಾನಗಳನ್ನು ಗೆಲ್ಲಬಹುದು. ಕರ್ನಾಟಕದಲ್ಲಿ 28 ಸ್ಥಾನಗಳಲ್ಲಿ ಬಿಜೆಪಿ 23, ಕಾಂಗ್ರೆಸ್ 4 ಜೆಡಿಎಸ್(ಇತರೆ) 1 ಸ್ಥಾನ ಗೆಲ್ಲಬಹುದು ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.

ಮಹಾರಾಷ್ಟ್ರದಲ್ಲಿ ಒಟ್ಟು 48 ಸ್ಥಾನಗಳಲ್ಲಿ ಎನ್‌ಡಿಎ 37 ಸ್ಥಾನಗಳನ್ನು ಗೆಲ್ಲಬಹುದು, ಆದರೆ ಬಿಜೆಪಿಯೇತರ ಪ್ರತಿಪಕ್ಷಗಳು ಉಳಿದ 11 ಸ್ಥಾನಗಳನ್ನು ಗೆಲ್ಲಬಹುದು.

Advertisement

ತಮಿಳುನಾಡಿನ ಆಡಳಿತಾರೂಢ ಡಿಎಂಕೆ ನೇತೃತ್ವದ ಯುಪಿಎ ಒಟ್ಟು 39 ಸ್ಥಾನಗಳಲ್ಲಿ 38 ಸ್ಥಾನಗಳನ್ನು ಗೆಲ್ಲಲಿದೆ ಎಂದು ಅಂದಾಜಿಸಲಾಗಿದೆ, ಉಳಿದಿರುವ ಏಕೈಕ ಸ್ಥಾನವನ್ನು ಎನ್‌ಡಿಎಗೆ ಬಿಟ್ಟುಕೊಡುತ್ತದೆ. ಎಲ್‌ಡಿಎಫ್ ಆಡಳಿತದ ಕೇರಳದಲ್ಲಿ ಬಿಜೆಪಿಯೇತರ ಪ್ರತಿಪಕ್ಷಗಳು ರಾಜ್ಯದ ಎಲ್ಲಾ 20  ಸ್ಥಾನಗಳನ್ನು ಕ್ಲೀನ್ ಸ್ವೀಪ್ ಮಾಡಬಹುದು ಎನ್ನಲಾಗಿದೆ.

ಟಿಎಂಸಿ ಆಡಳಿತವಿರುವ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಒಟ್ಟು 42 ಸ್ಥಾನಗಳಲ್ಲಿ 26 ಸ್ಥಾನಗಳನ್ನು ಗೆಲ್ಲಲಿದೆ ಎಂದು ಅಂದಾಜಿಸಲಾಗಿದೆ, ಎನ್‌ಡಿಎ 14 ಮತ್ತು ಯುಪಿಎ ಎರಡು ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next