ಶ್ರೀನಗರ: ಭೂಲೋಕದ ಸ್ವರ್ಗವಾಗಿದ್ದ ಕಣಿವೆ ರಾಜ್ಯವನ್ನು ಭಯೋತ್ಪಾದನೆಯ ಅಡ್ಡವಾಗಿಸಿರುವ ಉಗ್ರರನ್ನು ಮಟ್ಟ ಹಾಕುವ ಕಾರ್ಯ ಎಡೆಬಿಡದೇ ಸಾಗಿದೆ. ಶನಿವಾರ ಬೆಳಗ್ಗೆ ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಪ್ರಮುಖ ಕಮಾಂಡರ್ ಸೇರಿದಂತೆ ಇಬ್ಬರು ಉಗ್ರರನ್ನು ಭದ್ರತಾ ಪಡೆಗಳು ಸದೆಬಡಿದಿವೆ.
ಕಳೆದ ವರ್ಷ ದಕ್ಷಿಣ ಕಾಶ್ಮೀರದಲ್ಲಿ ಹಿಂಸಾ ಚಾರಕ್ಕೆ ಕುಮ್ಮಕ್ಕು ನೀಡಿದ್ದ ವಾಸಿಂ ಶಾ ಅಲಿಯಾಸ್ ಅಬು ಒಸಾಮಾ ಭಾಯಿ(23) ಇಲ್ಲಿನ ಲಿಟ್ಟರ್ ಪ್ರದೇಶದಲ್ಲಿ ಅವಿತಿರುವ ಕುಳಿತು ಸ್ಪಷ್ಟ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಹಾಗೂ ಜಮ್ಮು-ಕಾಶ್ಮೀರ ಪೊಲೀ ಸರು ಆ ಪ್ರದೇಶವನ್ನು ಸುತ್ತುವರಿದರು. ಇದು ಉಗ್ರರ ಸ್ವರ್ಗವೆಂದೇ ಹೇಳಲಾದ ಲಿಟ್ಟರ್ ಪ್ರದೇಶದಲ್ಲಿ ಕಳೆದ 4 ವರ್ಷಗಳಲ್ಲೇ ನಡೆದ ಮೊದಲ ಉಗ್ರ ನಿಗ್ರಹ ಕಾರ್ಯಾ ಚರಣೆ ಯಾ ಗಿತ್ತು. ಕಾರ್ಯಾ ಚರಣೆಯ ಸುಳಿವು ಸಿಕ್ಕೊಡನೆ ಅಲ್ಲಿಂದ ಕಾಲ್ಕಿàಳಲು ಶಾ ಮತ್ತು ಆತನ ಬಾಡಿಗಾರ್ಡ್ ನಿಸಾರ್ ಅಹ್ಮದ್ ಮಿರ್ ವಿಫಲ ಯತ್ನ ನಡೆಸಿದರು. ಕೊನೆಗೆ ಭದ್ರತಾ ಪಡೆಗಳ ಗುಂಡಿಗೆ ಇವರಿಬ್ಬರೂ ಬಲಿಯಾದರು.
ಶೋಪಿಯಾನ್‌ನವನಾದ ಶಾ 2014ರಲ್ಲಿ ಭಯೋತ್ಪಾದನಾ ಸಂಘಟನೆಗೆ ಸೇರ್ಪಡೆ ಯಾಗಿದ್ದ. ಕಳೆದ ವರ್ಷದ ಹಿಂಸಾಚಾರದಲ್ಲಿ ಇವನು ಪ್ರಮುಖ ಪಾತ್ರ ವಹಿಸಿದ್ದ. ಜತೆಗೆ, ಲಷ್ಕರ್‌ಗೆ ಯುವಕರನ್ನು ನೇಮಕ ಮಾಡುವ ಕೆಲಸದಲ್ಲೂ ತೊಡಗಿಸಿಕೊಂಡಿದ್ದ. ಈತನ ತಲೆಗೆ 10 ಲಕ್ಷ ರೂ. ಬಹುಮಾನವನ್ನೂ ಘೋಷಿ ಸಲಾಗಿತ್ತು. ಎನ್‌ಕೌಂಟರ್ ನಡೆದ ಸ್ಥಳದಿಂದ ಒಂದು ಎಕೆ-47 ಮತ್ತು ಒಂದು ಎಕೆ-56 ರೈಫಲ್ ಹಾಗೂ 6 ಗುಂಡು ಮದ್ದುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರತಿಭಟನೆ ವೇಳೆ ವ್ಯಕ್ತಿ ಸಾವು: ಎನ್‌ಕೌಂಟರ್‌ನಲ್ಲಿ ಲಷ್ಕರ್ ಕಮಾಂಡರ್‌ನನ್ನು ಹತ್ಯೆಗೈಯ್ಯ ಲಾಗಿದೆ ಎಂಬ ವಿಚಾರವನ್ನು ಮಧ್ಯಾಹ್ನ ಮಸೀ ದಿ ಯಲ್ಲಿ ಘೋಷಿಸಲಾ ಯಿತು. ಕೂಡಲೇ ಸ್ಥಳೀಯರು ಭಾರೀ ಸಂಖ್ಯೆಯಲ್ಲಿ ಹೊರ ಬಂದು ಭದ್ರತಾ ಪಡೆಗಳತ್ತ ಕಲ್ಲು ತೂರಾಟ ನಡೆಸತೊಡಗಿದರು. ಈ ಸಮಯ ದಲ್ಲಿ ಗುಂಡು ತಾಕಿ ಪ್ರತಿಭಟನಾಕಾರ ಗುಲ್ಜರ್ ಅಹ್ಮದ್ ಮಿರ್ ಎಂಬವರು ಸಾವಿಗೀಡಾದರು. 12ಕ್ಕೂ ಹೆಚ್ಚು ಮಂದಿ ಗಾಯಗೊಂಡರು.
ಉಗ›ರಿಂದ ಗುಂಡಿನ ದಾಳಿ: ಪೊಲೀಸ್ ಸಿಬಂದಿ ಸಾವು
ಪುಲ್ವಾಮಾ ಎನ್‌ಕೌಂಟರ್ ಬೆನ್ನಲ್ಲೇ ಕುಲ್ಗಾಂನಲ್ಲಿ ಪೊಲೀಸ್ ವಾಹನಗಳ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿ ದ್ದು, ಈ ವೇಳೆ ಪೊಲೀಸ್ ಸಿಬಂದಿಯೊ ಬ್ಬರು ಹುತಾತ್ಮರಾಗಿದ್ದಾರೆ. ಪಿಡಿಪಿ ಶಾಸ ಕ ರೊಬ್ಬರ ಬೆಂಗಾವಲು ಪಡೆ ಮೇಲೆ ಈ ದಾಳಿ ನಡೆದಿದೆ. ಪರಿಣಾಮ ಪೊ ಲೀ ಸ್ ವಾಹನದ ಚಾಲಕನಿಗೆ ಗುಂಡು ತಾಕಿ, ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೊಬ್ಬರು ಸಿಬಂದಿ ಗಾಯಗೊಂಡಿದ್ದಾರೆ.